ವೃಶ್ಚಿಕ ರಾಶಿಗೆ 'ಮಂಗಳ': ನಿಮ್ಮ ರಾಶಿಯ ಮೇಲೆ ಶುಭಾಶುಭ ಫಲ

ND
ಮಂಗಳ ಈವರೆಗೆ ಸೂರ್ಯ ಹಾಗೂ ಶುಕ್ರನ ಜೊತೆ ತುಲಾ ರಾಶಿಯಲ್ಲಿ ಭ್ರಮಣ ಮಾಡುತ್ತಿದ್ದು, ಇದೀಗ ಅಕ್ಟೋಬರ್ 19ಕ್ಕೆ ಸರಿಯಾಗಿ ತುಲಾದಿಂದ ವೃಶ್ಚಿಕ ರಾಶಿಗೆ ಪಾದಾರ್ಪಣೆ ಮಾಡಿದೆ. ಇದರಿಂದಾಗಿ ಕೆಲ ಶುಭ ಫಲಗಳೂ, ಅಶುಭವೂ ಸಂಭವಿಸಬಹುದು. ಸರ್ವತ್ರ ರೋಗರುಜಿನಗಳು ಉಲ್ಬಣಗೊಳ್ಳುವ, ರಕ್ತಸಂಬಂಧೀ ಕಾಯಿಲೆಗಳು ಹೆಚ್ಚುವ ಸಂಭವವಿದೆ. ವಾತಾವರಣದಲ್ಲಿ ದಿಢೀರ್ ಬದಲಾವಣೆಗಳು ಕಾಣಿಸಬಹುದು. ಅಂದಹಾಗೆ, ಈ ಮಂಗಳ ಅಕ್ಟೋಬರ್ 19ರಿಂದ 45 ದಿನಗಳ ಕಾಲ ಈ ಪ್ರಭಾವ ಬೀರಲಿದ್ದು, ಶುಭಾಶುಭ ಫಲಗಳು ಅನ್ವಯಿಸಲಿವೆ. ರಾಶಿಗನುಗುಣವಾಗಿ ಶುಭಾಶುಭ ಫಲಗಳನ್ನು ನೋಡೋಣ.

ಮೇಷ- ಆತ್ಮವಿಶ್ವಾಸದ ವೃದ್ಧಿ ಹಾಗೂ ಜೀವನದಲ್ಲಿ ಉನ್ನತಿಯಾಗುತ್ತದೆ. ವೈವಾಹಿಕ ಜೀವನದಲ್ಲಿ ಶಾಂತಿ ಹಾಗೂ ಪ್ರೇಮ ಹೆಚ್ಚಿ ಸಮೃದ್ಧಿಯ ಜೀವನ ನಿಮ್ಮದಾಗುತ್ತದೆ. ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಉತ್ತಮ ಫಲ ದೊರೆಯಲಿದೆ. ಆದರೆ ಲಿವರ್ ಅಥವಾ ರಕ್ತ ಸಂಬಂಧೀ ರೋಗಗಳಿೆಂದ ಈಗಾಗಲೇ ಬಳಲುತ್ತಿರುವವರು ಮಾತ್ರ ಕೊಂಚ ಜಾಗರೂಕತೆ ವಹಿಸುವುದು ಒಳ್ಳೆಯದು.

ವೃಷಭ- ಈವರೆಗೆ ನಡೆಯುತ್ತಿದ್ದ ವಿವಾದ, ತೊಂದರೆ ಸಮಸ್ಯೆಗಳೆಲ್ಲ ಪರಿಹಾರವಾಗಿ ಕೊಂಚ ನೆಮ್ಮದಿ ಎನಿಸಬಹುದು. ಕುಟುಂಬ ಜೀವನದಲ್ಲಿ ಸಾಮರಸ್ಯ ಹೆಚ್ಚಿ ಸಮೃದ್ಧಿಯ ಜೀವನ ನಿಮ್ಮದಾಗುತ್ತದೆ. ಜಂಟಿಯಾಗಿ ಉದ್ಯೋಗದಲ್ಲಿ ಹೂಡಿಕೆ ಅಥವಾ ಬ್ಯುಸಿನೆಸ್ ಮಾಡುತ್ತಿದ್ದವರಿಗೆ ಕೊಂಚ ಲಾಭವಾಗುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಬಹುದು. ಹೆಚ್ಚು ನೀರು ಕುಡಿದು ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿಟ್ಟರೆ ಒಳ್ಳೆಯದು.
 
ND

ಮಿಥುನ- ವಿವಾದ, ಕಲಹಗಳು ಮುಗಿದು ನೆಮ್ಮದಿ ಲಭಿಸಬಹುದು. ಹೊಸ ಗೆಳೆಯ ಅಥವಾ ಹೊಸ ವ್ಯಾಪಾರೀ ಸಂಬಂಧಗಳು ವೃದ್ಧಿಯಾಗಿ ಲಾಭ ಬರಬಹುದು. ಆದರೆ ಕೊಂಚ ಸಿಟ್ಟು ಹೆಚ್ಚಿ ಮಾನಸಿಕವಾಗಿ ಕಿರಿಕಿರಿ ಉಂಟಾಗುವ ಸಾಧ್ಯತೆಗಳೂ ನಿಮ್ಮಲ್ಲಿ ಈ ಬಾರಿ ಹೆಚ್ಚಾಗಿರುವುದರಿಂದ ನೆಮ್ಮದಿಯಾಗಿರಲು ಪ್ರಯತ್ನ ಪಡಿ. ಮಾತಿಗೆ ಕೊಂಚ ಕಡಿವಾಣ ಹಾಕಿ.

ಕರ್ಕ- ಕರ್ಕ ರಾಶಿಯವರಿಗೆ ಈ ಮಂಗಳನ ಸ್ಥಾನಪಲ್ಲಟ ಹಲವು ಲಾಭಗಳನ್ನು ತರಲಿದೆ. ಜೀವನದಲ್ಲಿ ಉನ್ನತಿಯಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಪರಿಶ್ರಮ ಪಟ್ಟಲ್ಲಿ ಪರೀಕ್ಷೆ, ವಿದ್ಯಾಭ್ಯಾಸಗಳಲ್ಲಿ ಉನ್ನತ ಫಲಗಳು ದೊರಕಬಹುದು. ಗಣಿತ- ವಿಜ್ಞಾನದಂತಹ ಕ್ಷೇತ್ರಗಳಲ್ಲಿ ನಿಮಗೆ ಶುಭ ಫಲವಿದೆ. ಆದರೆ ಕೋಪದ ಮೇಲೆ ನಿಗಾ ಇಟ್ಟುಕೊಳ್ಳಿ. ವೃಥಾ ಸಿಟ್ಟು ಒಳ್ಳೆಯದಲ್ಲ.

ಸಿಂಹ- ಈ ರಾಶಿಯವರಿಗೆ ಉದ್ಯೋಗದಲ್ಲಿ ಭಡ್ತಿ ಅಥವಾ ಸ್ಥಾನಪಲ್ಲಟದ ಯೋಗವಿದೆ.ನೌಕರಿಯಲ್ಲಿ ಉನ್ನತಿ ಪ್ರಾಪ್ತಿ ಹಾಗೂ ಉತ್ತಮ ಧನ ಲಾಭವಿದೆ. ಸಾಹಸ ಪ್ರವೃತ್ತಿ ಹೆಚ್ಚಲಿದೆ. ಕೆಲಸದಲ್ಲಿ ಪರಿಶ್ರಮ ಹೆಚ್ಚಿ ಅದರಿಂದ ನಿಶ್ಚಿತ ಫಲವೂ ದೊರೆಯಲಿದೆ. ರಕ್ತ ಹಾಗೂ ಮೂತ್ರ ಸಂಬಂಧೀ ಇನ್‌ಫೆಕ್ಷನ್‌ಗಳಾಗುವ ಸಂಭವವಿರುವುದರಿಂದ ಆರೋಗ್ಯದ ಮೇಲೆ ಗಮನವಿರಲಿ.

ಕನ್ಯಾ- ಕನ್ಯಾ ರಾಶಿಯವರಿಗೆ ಇದು ಉತ್ತಮ ಸಮಯ. ಓದಲು, ಬೌದ್ಧಿಕವಾಗಿ ಬೆಳೆಯಲು ಇದು ಸಕಾಲ. ಜೀವನದಲ್ಲಿ ಪ್ರಗತಿಯಾಗಲಿದೆ. ಸಹೋದರ, ಸಹೋದರಿಯರ ನಡುವೆ ಪ್ರೀತಿ ಹೆಚ್ಚಿ ಜೀವನ ಸಂತೃಪ್ತಿಯದಾಗುತ್ತದೆ. ಆದರೆ ವಾಹನ ಚಾಲನೆಯ ಸಂದರ್ಭ ಕೊಂಚ ಜಾಗರೂಕತೆ ವಹಿಸುವುದು ಅಗತ್ಯ. ಅಫಘಾತ ಭಯವಿದೆ.
 
ND


ತುಲಾ- ಈ ರಾಶಿಯವರಿಗೆ ಈವರೆಗಿದ್ದ ಆಲಸ್ಯ ಕಡಿಮೆಯಾಗಿ ಉತ್ಸಾಹ ಹೆಚ್ಚಲಿದೆ. ಓದು ಹಾಗೂ ಹಣದ ಸಂಬಂಧೀ ಕೆಲಸಗಳೂ ಹೆಚ್ಚಲಿದೆ. ಹೊಸ ಹೊಸ ವಿಚಾರಗಳನ್ನು ಕಲಿಯುವ ಅವಕಾಶ ಹೆಚ್ಚಲಿದೆ. ಪರಿವಾರದಲ್ಲಿ ಹೊಸ ಸದಸ್ಯನ ಆಗಮನವಾಗುವ ಸಾಧ್ಯತೆಯಿದೆ. ಸ್ನೇಹ ಹೆಚ್ಚಿ ನಿಮ್ಮ ಜೀವನದ ಉನ್ನತಿಯಾಗಲಿದೆ.

ವೃಶ್ಚಿಕ- ಹೆಚ್ಚು ಮಾತಾಡುವುದರಿಂದ, ಬಾಯ್ತಪ್ಪಿ ಬೈಯುವ ಮೂಲಕ ನಿಮಗೆ ತೊಂದರೆಗಳಾಗುವ ಸಂಭವ ಹೆಚ್ಚಿರುವುದರಿಂದ ಮಾತಿನ ಮೇಲೆ ನಿಗಾ ಇರಿಸಿ. ಈ ಸಂದರ್ಭ ನೀವು ದುಸ್ಸಾಹಸಗಳಿಗೆ ಇಳಿಯಬೇಡಿ. ಯಾಕೆಂದರೆ ಅದು ಈಗ ನಿಮಗೆ ಒಳ್ಳೆಯದಲ್ಲ. ಯಾವುದೇ ನಿರ್ಣಯ ತೆಗೆದುಕೊಳ್ಳುವ ಮೊದಲು ಗುರುಗಳ ಮತ್ತೆ ಹಿರಿಯರ ಸಲಹೆಗಳನ್ನು ಕೇಳಿ ಪಡೆಯಿರಿ. ವಿದೇಶೀ ಸಂಬಂಧೀ ಕಾರ್ಯಗಳಿಗೆ ಹಾಗೂ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರಿಗೆ ಇದು ಉತ್ತಮ ಕಾಲ. ತಲೆನೋವು ಹೆಚ್ಚುವ ಸಾಧ್ಯತೆಗಳಿವೆ.

ಧನು- ಬಹಳ ಸಮಯದ ನಂತರ ಈ ರಾಶಿಯವರು ಕೊಂಚ ನಿರಾಳವಾಗಬಹುದು. ನಿಮ್ಮ ಮಾತು, ಪ್ರತಿಷ್ಠೆ, ಹಣ ಎಲ್ಲವಕ್ಕೂ ಬಲ ಬಂದು ನಿಮಗೆ ನೆಮ್ಮದಿ ದೊರೆಯಲಿದೆ. ಕೆಲಸ ಕಾರ್ಯಗಳಲ್ಲಿ ಜಯ ಲಭಿಸಲಿದೆ. ನಿಮ್ಮ ಮಾತಿಗೆ ತೂಕ ಹೆಚ್ಚಿ ಮನ್ನಣೆ ಪಡೆಯುವಿರಿ. ಕುಟುಂಬದಲ್ಲೂ ಶಾಂತಿ ಸಮೃದ್ಧಿ ನೆಲೆಸುತ್ತದೆ. ಆದರೆ ಆರೋಗ್ಯದಲ್ಲಿ ಸಣ್ಣ ಮಟ್ಟಿನ ಏರುಪೇರುಗಳಾಗುವ ಸಂಭವವಿದೆ. ಹೊಟ್ಟೆ ಹಾಗೂ ತಲೆ ನೋವು ಸಂಭವವಿದೆ.

ಮಕರ- ಈ ರಾಶಿಯವರಿಗೆ ಉತ್ತಮ ಕಾಲವಿದು. ಧನ ಹಾಗೂ ವಿದ್ಯೆ ಎರಡಕ್ಕೂ ಇದು ಸಕಾಲ. ಉತ್ತಮ ಕೋರ್ಸ್ ಮಾಡಿದರೆ ಉನ್ನತಿಯಿದೆ. ನೀವು ಕೆಲಸ ಮಾಡುತ್ತಿರುವ ಕಾರ್ಯಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಲಭ್ಯವಾಗಬಹುದು. ಮನೆಯಲ್ಲಿ ವಿವಾದಗಳು ಹೆಚ್ಚದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಲಿದೆ.

ಕುಂಭ- ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿರುವ ಮಂದಿಗೆ ಇದು ಸಕಾಲ. ಉತ್ತಮ ಸ್ಥಾನ ಮಾನ ಸಿಗುತ್ತದೆ. ಧನ, ಆಸ್ತಿ, ವಾಹನ ಯೋಗವೂ ದಟ್ಟವಾಗಿದೆ. ವಿವಾಹವಾಗದ ಮಂದಿಗೆ ವಿವಾಹವಾಗಬಹುದು. ಆದರೆ ಮಾತಿನ ಮೇಲೆ ಹಿಡಿತ ಅಗತ್ಯ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಗುರುಹಿರಿಯರ ಸಲಹೆ ಸ್ವೀಕರಿಸಿ.

ಮೀನ- ಮೀನ ರಾಶಿಯ ಮಂದಿಗೆ ಮಂಗಳನ ಸ್ಥಾನ ಪಲ್ಲಟದಿಂದ ಭಾಗ್ಯೋದಯವಾಗಲಿದೆ. ಈವರೆಗೆ ತೆಗೆದುಕೊಂಡ ನಿರ್ಧಾರಗಳು ಸರಿಯಾಗಿದೆ ಎಂಬುದು ಸಾಬೀತಾಗಲಿದೆ. ವಿದ್ಯೆಯಲ್ಲಿ ಹಾಗೂ ಕೆಲಸ ಕಾರ್ಯಗಳಲ್ಲಿ ಸಫಲತೆಯ ಪ್ರಾಪ್ತಿಯಾಗುತ್ತದೆ. ಜನ ಮನ್ನಣೆ ಸಿಗಲಿದೆ. ಆದರೆ ಆರೋಗ್ಯದ ಮೇಲೆ ಕೊಂಚ ನಿಗಾ ಅಗತ್ಯ. ಧ್ಯಾನ, ಯೋಗ ಅಥವಾ ವ್ಯಾಯಾಮದಲ್ಲಿ ತೊಡಗುವುದರಿಂದ ಆರೋಗ್ಯ ಕಾಪಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ