ದಿನಕ್ಕೊಂದು ದಾನದ ಮಹತ್ವ: ಅರಸಿನ, ಕುಂಕುಮ ದಾನ ಮಾಡಿದರೆ ಏನು ಫಲ?

ಬುಧವಾರ, 10 ಏಪ್ರಿಲ್ 2019 (07:19 IST)
ಬೆಂಗಳೂರು: ಇಂದಿನಿಂದ ದಿನಕ್ಕೊಂದರಂತೆ ವಸ್ತುಗಳ ದಾನ ಮಾಡುವುದರ ಫಲಾಫಲಗಳ ಬಗ್ಗೆ ತಿಳಿಯುತ್ತಾ ಸಾಗೋಣ. ಇಂದು ಅರಸಿನ ಮತ್ತು ಕುಂಕುಮ ದಾನ ಮಾಡುವುದರ ಮಹತ್ವ ಮತ್ತು ಅದರಿಂದ ಸಿಗುವ ಫಲಗಳ ಬಗ್ಗೆ ತಿಳಿಯೋಣ.


ಅರಸಿನ ದಾನ: ಅರಿಸಿನ ದಾನ ಮಾಡಿದರೆ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಸುಮಂಗಲಿಯರಿಗೆ ಮುತ್ತೈದೆ ಭಾಗ್ಯ ವೃದ್ಧಿಸುತ್ತದೆ. ಸುಮಂಗಲಿಯರಿಗೆ ಯಾವತ್ತೂ ಸುಮಂಗಲಿತನ ಇರಲಿ ಎಂಬ ಕಾರಣಕ್ಕೆ ಅರಿಸಿನ ದಾನ ಮಾಡುತ್ತಾರೆ.

ಕುಂಕುಮ: ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತು ನಂಬಿಕೆ ಗಳಿಸುತ್ತಾರೆ. ಕುಂಕುಮ ಧಾರಣೆಯಿಂದ ದೈವ ಶಕ್ತಿ ಹೆಚ್ಚಾಗುತ್ತದೆ. ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಹಾಗೆಯೇ ಕೋಪ, ಹಠ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ