ಜಾತಕದಲ್ಲಿ ಚಂದ್ರ ದೆಸೆಯಿದ್ದಾಗ ಏನು ಲಾಭ? ಏನು ನಷ್ಟ?

ಭಾನುವಾರ, 26 ನವೆಂಬರ್ 2023 (09:27 IST)
ಬೆಂಗಳೂರು: ಸಾಮಾನ್ಯವಾಗಿ ನಾವು ಶನಿ ದೋಷ, ಶನಿ ದೆಸೆ ಬಗ್ಗೆ ಮಾತನಾಡುತ್ತೇವೆ. ಆದರೆ ಜಾತಕದಲ್ಲಿ ಚಂದ್ರ ದೆಸೆ ಇದ್ದಾಗ ಆಗವ ಅನುಕೂಲ ಮತ್ತು ಅನಾನುಕೂಲಗಳು ಏನು ಗೊತ್ತಾ?
 

ಚಂದ್ರ ಎಂದರೆ ಮನೋಕಾರಕ. ಆತ ನಮ್ಮ ಮನಸ್ಸಿನ ಭಾವನೆಯನ್ನು ಆಳುತ್ತಾನೆ. ಚಂದ್ರ ದೆಸೆ ನಮ್ಮನ್ನು ಆಳುವಾಗ ಮೃದುತನ, ಕಲೆ ಮೇಲೆ ಆಕರ್ಷಣೆ, ಆಸಕ್ತಿ, ಭಾವುಕರಾಗುವ ಸನ್ನಿವೇಶಗಳು ಹೆಚ್ಚಾಗಬಹುದು.

ಚಂದ್ರ ದೆಸೆ ಇರುವ ವ್ಯಕ್ತಿಗಳು ಇನ್ನೊಬ್ಬರ ಜೊತೆಗೆ ಬಾಂಧವ್ಯ ವೃದ್ಧಿಸಿಕೊಳ್ಳುತ್ತಾರೆ. ಇನ್ನೊಬ್ಬರ ಭಾವನೆಗೆ ಸ್ಪಂದಿಸುವವರಾಗಿರುತ್ತಾರೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಕೆಲವೊಮ್ಮೆ ಮನೋವಿಕಾರಗಳು ಹೆಚ್ಚಾಗಿ ಆತಂಕ, ಒತ್ತಡ, ಭಾವನಾತ್ಮಕ ಸಿಡಿಯುವ ಗುಣ ಕಂಡುಬರಬಹುದು.

ಹಾರ್ಮೋನ್ ಬದಲಾವಣೆಯಿಂದ ಬರುವ ರೋಗಗಳು, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೂ ಬರುವ ಸಾಧ‍್ಯತೆಯಿದೆ. ಹೀಗಾಗಿ ಚಂದ್ರ ದೆಸೆ ನಡೆಯುವಾಗ ಚಂದ್ರ ಗ್ರಹ ಶಾಂತಿ ಪೂಜೆ, ಶಿವನ ಆರಾಧನೆ ಮಾಡುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ