ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 22 ಫೆಬ್ರವರಿ 2019 (08:41 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಂಗಾತಿಯೊಂದಿಗೆ ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ಮಾಡಿಕೊಳ್ಳುತ್ತೀರಿ. ಅನಗತ್ಯ ವಿಚಾರಗಳ ಬಗ್ಗೆ ಚಿಂತೆ ಮಾಡುವಿರಿ. ವಿದ್ಯಾರ್ಥಿಗಳು ನಿರೀಕ್ಷೆಗೆ ತಕ್ಕ ಫಲ ಕಾಣುವರು. ಉದ್ಯೋಗದಲ್ಲಿ ಕೊಂಚ ಕಾರ್ಯದೊತ್ತಡ ಕಡಿಮೆಯಾಗಲಿದೆ.

ವೃಷಭ: ಮಿತ್ರರಿಂದಲೇ ಮೋಸ ಹೋಗುವ ಸಾಧ್ಯತೆಯಿದೆ. ಸಾಲ ಕೊಡುವಾಗ ಎಚ್ಚರವಿರಲಿ. ಕುಟುಂಬದಲ್ಲಿ ನಿಮ್ಮ ಜವಾಬ್ಧಾರಿಗಳು ಹೆಚ್ಚಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಮಿಥುನ: ಕೆಲಸ ಕಾರ್ಯಗಳಿಗೆ ಇದುವರೆಗೆ ಇದ್ದ ಅಡ್ಡಿ ಆತಂಕಗಳು ದೂರವಾಗಿ ನಿರಾಳವಾಗುವುದು. ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಆದರೆ ಯಾವುದೇ ವ್ಯವಹಾರ ನಡೆಸುವುದಕ್ಕೆ ಮೊದಲು ಮನೆಯವರೊಂದಿಗೆ ಚರ್ಚಿಸಿ ಮುಂದುವರಿಯಿರಿ.

ಕರ್ಕಟಕ: ವ್ಯಾಪಾರ, ವಾಣಿಜ್ಯೋದ್ಯಮಿಗಳು ಸಾಕಷ್ಟು ಲಾಭ ಕಾಣುವರು. ಕೃಷಿಕರಿಗೆ ಶುಭ ದಿನ. ಕುಟುಂಬದ ಕೆಲಸಗಳಿಗೆ ಸಾಕಷ್ಟು ಧನವಿನಿಯೋಗ ಮಾಡಲಿದ್ದೀರಿ. ಯಾವುದೇ ವ್ಯವಹಾರ ಕೈಗೊಂಡರೂ ಯಶಸ್ಸು ನಿಮ್ಮದಾಗುತ್ತದೆ.

ಸಿಂಹ: ಕಾರ್ಯದೊತ್ತಡ ಅಧಿಕವಾಗಿದ್ದರೂ ನಿಮ್ಮ ಉದಾಸೀನ ಪ್ರವೃತ್ತಿಯಿಂದ ಎಲ್ಲವೂ ವಿಳಂಬವಾಗಲಿದೆ. ದಾಯಾದಿಗಳಿಂದ ವಂಚನೆಗೊಳಗಾಗುವಿರಿ. ನಿಂದನೆ ಮಾತು ಕೇಳಬೇಕಾಗಿ ಬರುವುದು. ಎಲ್ಲದಕ್ಕೂ ತಾಳ್ಮೆಯೇ ಮದ್ದು.

ಕನ್ಯಾ: ಉದ್ಯಮಿಗಳಿಗೆ ಶುಭ ದಿನ. ಆದರೆ ಆರೋಗ್ಯ ಹದಗೆಟ್ಟು ಖರ್ಚು ವೆಚ್ಚಗಳು ಅಧಿಕವಾಗಲಿದೆ. ಹಿತ ಶತ್ರುಗಳನ್ನು ನಂಬಿ ಕೆಲಸ ಒಪ್ಪಿಸಬೇಡಿ. ಮೋಸ ಹೋಗುವ ಸಾಧ್ಯತೆಯಿದೆ. ಸಾಲ ಕೊಡುವಾಗ ಹಿಂದೆ ಮುಂದೆ ನೋಡಿಕೊಂಡು ಕೊಡಿ.

ತುಲಾ: ವೃತ್ತಿ ರಂಗದಲ್ಲಿ ಉತ್ಸಾಹದಿಂದ ಕೆಲಸ ನಿರ್ವಹಿಸುತ್ತೀರಿ. ನಿಮ್ಮ ಕೆಲಸಗಳಿಗೆ ತಕ್ಕ ಮನ್ನಣೆಯೂ ದೊರಕುತ್ತದೆ. ಆರೋಗ್ಯ ಭಾಗ್ಯ ಸುಧಾರಿಸುವುದು. ಅನಿರೀಕ್ಷಿತವಾಗಿ ಬರುವ ನೆಂಟರು, ಮಿತ್ರರಿಂದ ಶುಭ ಸುದ್ದಿ.

ವೃಶ್ಚಿಕ: ಕಾರ್ಮಿಕ ವೃತ್ತಿಯವರಿಗೆ ಅಪಘಾತದ ಭಯ. ಹೊಸದಾಗಿ ಬರುವ ಮಿತ್ರರು, ನೆಂಟಸ್ತಿಕೆಯಿಂದ ಅಪವಾದ, ಅವಮಾನ ಎದುರಿಸಬೇಕಾದೀತು. ಆದರೆ ದಿನದಂತ್ಯಕ್ಕೆ ಪರಿಸ್ಥಿತಿ ಸುಧಾರಿಸುವುದಲ್ಲದೆ, ಚೇತರಿಕೆ ಕಾಣುವಿರಿ.

ಧನು: ಆರೋಗ್ಯ ಭಾಗ್ಯ ಸುಧಾರಿಸುವುದು. ಅಂದುಕೊಂಡಂತೆ ಕೆಲಸ ಕಾರ್ಯಗಳು ನೆರವೇರಲಿವೆ. ಮಕ್ಕಳಿಂದ ಶುಭ ಸುದ್ದಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಂಗಾತಿಯೊಡನೆ ದೂರ ಸಂಚಾರ ಕೈಗೊಳ್ಳುವಿರಿ.

ಮಕರ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರವುದು. ವಾಸ ಸ್ಥಳ ಬದಲಾವಣೆ ಕುರಿತು ಚಿಂತನೆ ಮಾಡುವಿರಿ. ಕುಲದೇವರ ಪ್ರಾರ್ಥನೆಯಿಂದ ಅಂದುಕೊಂಡ ಕಾರ್ಯಗಳು ನೆರವೇರುವುದು.

ಕುಂಭ: ನಾನಾ ರೀತಿಯ ಚಾಡಿ ಮಾತುಗಳು, ಅಪವಾದಗಳಿಗೆ ಗುರಿಯಾಗುವಿರಿ. ಆದರೆ ತಾಳ್ಮೆಯಿಂದ ನಿಭಾಯಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಸಂತೋಷ ಪಡುವಿರಿ.

ಮೀನ: ಖರ್ಚು  ವೆಚ್ಚಗಳು ಅಧಿಕವಾಗುವುದು. ಬೇರೆಯವರ ಶ್ರೀಮಂತಿಕೆ ಜತೆ ಸ್ಪರ್ಧೆ ಮಾಡುವ ಹುಂಬತನ ಬೇಡ. ವಿನಾಕಾರಣ ಮಾನಸಿಕ ಚಿಂತೆ ಮಾಡುವಿರಿ. ದೇವತಾ ಪ್ರಾರ್ಥನೆ ಮಾಡಿ. ಎಲ್ಲವೂ ಶುಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ