ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 7 ಮಾರ್ಚ್ 2019 (09:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮೇಲಧಿಕಾರಿಗಳಿಂದ ಅಧಿಕ ಕೆಲಸದೊತ್ತಡ ಇರುತ್ತದೆ. ಇದರಿಂದ ದೇಹಾಯಾಸವಾಗುವುದು. ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಸುಧಾರಣೆ ಕಂಡುಬರಲಿದೆ. ಸಹೋದರರಿಂದ ಕಿರಿ ಕಿರಿ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ.

ವೃಷಭ: ಕೌಟುಂಬಿಕವಾಗಿ ನಿಮ್ಮ ಇಷ್ಟಾರ್ಥಗಳು ಪೂರೈಕೆಯಾಗುತ್ತದೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ. ಆರ್ಥಿಕವಾಗಿ ಬಾಕಿ ಹಣ ಪಾವತಿಯಾಗಿ ಚೇತರಿಕೆ ಕಾಣುವಿರಿ.

ಮಿಥುನ: ಸಹೋದ್ಯೋಗಿಗಳಿಂದ ಕಿರಿ ಕಿರಿ ಇದ್ದರೂ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಹಿರಿಯರೊಂದಿಗೆ ವಾಗ್ವಾದ ನಡೆಸಬೇಡಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವಿರಿ.

ಕರ್ಕಟಕ: ಅಂದುಕೊಂಡ ಕಾರ್ಯಗಳಲ್ಲಿ ದೈವಬಲದಿಂದ ಜಯ ಸಿಗುವುದು. ಆರ್ಥಿಕವಾಗಿ ಅಭಿವೃದ್ಧಿ ಕಂಡುಬರುವುದು. ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ.

ಸಿಂಹ: ಕಾರ್ಯ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಬೇಡದ ವಿಚಾರಗಳು ಮನಸ್ಸಿಗೆ ಬಂದು ಖಿನ್ನತೆಗೊಳಗಾಗುವಿರಿ. ದಾಯಾದಿಗಳಿಂದ ಕಿರಿ ಕಿರಿ ಇರುತ್ತದೆ. ಸಂಸಾರದಲ್ಲಿ ಹೊಂದಾಣಿಕೆ ಅಗತ್ಯ.

ಕನ್ಯಾ: ಬಾಕಿ ಇದ್ದ ಸಾಲ ಪಾವತಿಯಾಗುವುದು. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಆಸ್ತಿ ವಿಚಾರದಲ್ಲಿ ನೆರೆಹೊರೆಯವರೊಂದಿಗೆ ವಾಗ್ವಾದವಾಗುವುದು. ವಾಸ ಸ್ಥಳ ಬದಲಾವಣೆಗೆ ಚಿಂತನೆ ಮಾಡುವಿರಿ.

ತುಲಾ: ಹೊಸ ವ್ಯಾಪಾರ, ವ್ಯವಹಾರಕ್ಕೆ ಕೈ ಹಾಕಿದರೆ ಲಾಭ ಕಾಣುವಿರಿ. ಆದರೆ ಕೌಟುಂಬಿಕವಾಗಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದು. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ.

ವೃಶ್ಚಿಕ: ನಿರುದ್ಯೋಗಿಗಳು ಬಂದ ಅವಕಾಶವನ್ನು ಉಪಯೋಗಿಸಬೇಕು. ವಿದ್ಯಾರ್ಥಿಗಳಿಗೆ ವಿದೇಶ ಯಾನದ ಯೋಗವಿದೆ. ಅಡಚಣೆಗಳಿದ್ದರೂ ನಿಮ್ಮ ಕೆಲಸಗಳಲ್ಲಿ ಜಯ ಕಾಣುವಿರಿ. ತಾಳ್ಮೆಯಿಂದ ನಿಭಾಯಿಸಿದರೆ ಎಲ್ಲವೂ ಶುಭ.

ಧನು: ಉದ್ಯೋಗ ಕ್ಷೇತ್ರದಲ್ಲಿ ನೆಮ್ಮದಿ ಇರುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ನಿರುದ್ಯೋಗಿಗಳು ಒಳ್ಳೆಯ ಅವಕಾಶಕ್ಕಾಗಿ ಸ್ವಲ್ಪ ದಿನ ಕಾಯಬೇಕು. ಬಹುದಿನಗಳಿಂದ ಬಾಕಿಯಿದ್ದ ದೇವತಾ ಕಾರ್ಯಗಳನ್ನು ನೆರವೇರಿಸುವಿರಿ.

ಮಕರ: ನೀವು ಅಂದುಕೊಂಡ ಕಾರ್ಯಗಳು ನೆರವೇರುವುದು. ದೇವರ ಬಲ ನಿಮ್ಮ ಮೇಲಿದ್ದು, ಕೌಟುಂಬಿಕವಾಗಿ ನೆಮ್ಮದಿ ಕಾಣುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಸಂತಸವಾಗುವುದು. ಹೊಸ ವಸ್ತು, ಆಸ್ತಿ ಖರೀದಿ ಬಗ್ಗೆ ಚಿಂತನೆ ಮಾಡುವಿರಿ.

ಕುಂಭ: ಹಣ ಸಂಪಾದನೆಗೆ ನಾನಾ ಮಾರ್ಗ ಕಾಣುವಿರಿ. ಆದರೆ ಹೊಸ ಬಂಡವಾಳ ಹೂಡುವಾಗ ಹಿತ ಶತ್ರುಗಳ ಬಣ್ಣದ ಮಾತಿಗೆ ಮರುಳಾಗಬೇಡಿ. ವಿವೇಚನೆಯಿಂದ ಹೆಜ್ಜೆಯಿಡಿ. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ.

ಮೀನ: ಆರ್ಥಿಕ ಪರಿಸ್ಥಿತಿ ಹದಗೆಡುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆಗಾಗಿ ತಯಾರಿ ನಡೆಸಲು ಒಂದು ರೀತಿಯ ಉದಾಸೀನ ಪ್ರವೃತ್ತಿ ಕಂಡುಬರುವುದು. ಪೂರ್ವ ದಿಕ್ಕಿನ ಪ್ರಯಾಣ ಶುಭವನ್ನುಂಟು,ಮಾಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                         

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ