ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 13 ಆಗಸ್ಟ್ 2019 (09:14 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೌಟುಂಬಿಕವಾಗಿ ಚಿಂತೆ, ಬೇಸರವಾಗಲಿದೆ. ಸಂಗಾತಿಯೊಂದಿಗಿನ ವಿರಸ ಇನ್ನಷ್ಟು ನೋವು ಕೊಡಲಿದೆ. ಆದರೆ ಆರ್ಥಿಕವಾಗಿ ಅಭಿವೃದ್ಧಿಗೆ ಕೊರತೆಯಿರದು. ಉದ್ಯೋಗದಲ್ಲಿ ನಿಮ್ಮ ಸ್ಥಾನವನ್ನು ಯಾರೂ ಕಸಿಯಲು ಸಾಧ‍್ಯವಿಲ್ಲ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಸಂಗಾತಿಯ ಆರೋಗ್ಯ ಹದತಪ್ಪಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಬಂಧುಮಿತ್ರರ ಚಾಡಿಮಾತುಗಳಿಗೆ ಕಿವಿಗೊಡಬೇಡಿ. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಕೊಂಚ ಹಿನ್ನಡೆಯಾದೀತು. ಆದರೂ ತಾಳ್ಮೆಗೆಡಬೇಡಿ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆ ಕೇಳುವಿರಿ.

ಮಿಥುನ:  ಸಾಮಾಜಿಕವಾಗಿ ನಿಮ್ಮ ಘನತೆ ಹೆಚ್ಚು ಮಾಡುವಂತಹ ಘಟನೆಗಳು ನಡೆಯಲಿವೆ. ಪ್ರೀತಿ ಪಾತ್ರರಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಆರ್ಥಿಕವಾಗಿ ಚೇತರಿಕೆಯಿರುವುದು. ಆದರೆ ಅಪರಿಮಿತ ಖರ್ಚುಗಳಿಗೆ ಕಡಿವಾಣ ಹಾಕಿ.

ಕರ್ಕಟಕ: ಇಷ್ಟಮಿತ್ರರ ಒಡನಾಟ, ಭೋಜನ ಮನಸ್ಸಿಗೆ ಖುಷಿ ನೀಡುವುದು. ರಾಜಕೀಯ ರಂಗದಲ್ಲಿ ಹೆಚ್ಚಿನ ಸ್ಥಾನ ಮಾನ ಲಭ್ಯವಾಗಲಿದೆ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಮನಸ್ಸು ಮಾಡುವರು. ಕಾರ್ಯ ಸಾಧನೆಗಾಗಿ ದೂರ ಸಂಚಾರ ಮಾಡಬೇಕಾಗುತ್ತದೆ.

ಸಿಂಹ: ಆರ್ಥಿಕವಾಗಿ ಅಭಿವೃದ್ಧಿ ತೋರಿಬಂದು ಹಂತ ಹಂತವಾಗಿ ಚೇತರಿಕೆ ಕಾಣುವಿರಿ. ಮಿತ್ರರ ಸಂಕಷ್ಟಕ್ಕೆ ಹೆಗಲುಕೊಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೇ ಅಸೂಯೆಪಡುವಂತೆ ಕಾರ್ಯನಿರ್ವಹಿಸಲಿದ್ದೀರಿ. ಕುಲದೇವರ ಪ್ರಾರ್ಥನೆ ಮಾಡಿ.

ಕನ್ಯಾ: ಅವಿವಾಹಿತ ಕನ್ಯೆಯರಿಗೆ ಮನಸ್ಸಿಗೆ ಒಪ್ಪುವಂತಹ ಯೋಗ್ಯ ಸಂಬಂಧಗಳು ಕೂಡಿಬರಲಿವೆ. ಸಾಂಸಾರಿಕವಾಗಿ ಇದುವರೆಗೆ ಇದ್ದ ಸಮಸ್ಯೆಗಳಿಗೆ ಒಂದು ರೀತಿಯ  ಅಂತ್ಯ ಸಿಗುವುದು. ಆದರೆ ಅನಿರೀಕ್ಷಿತ ಖರ್ಚು ವೆಚ್ಚಗಳನ್ನು ಮಾಡಬೇಕಾಗುತ್ತದೆ.

ತುಲಾ: ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬರಲಿವೆ. ಕಾರ್ಯ ಕ್ಷೇತ್ರದಲ್ಲಿ ಹಿನ್ನಡೆಯುಂಟಾಗಬಹುದು. ಸರಕಾರಿ ಕಚೇರಿಗಳಿಗೆ ಅಲೆದಾಟ ತಪ್ಪದು. ನೂತನ ದಂಪತಿಗಳಲ್ಲಿ ವಿರಸ ಮೂಡಬಹುದು. ದುಡುಕಿನ ವರ್ತನೆ ತೋರದಿರಿ.

ವೃಶ್ಚಿಕ: ನಿಮ್ಮ ತಾಳ್ಮೆ ಪರೀಕ್ಷೆ ನಡೆಸುವಂತಹ ಘಟನೆಗಳು ನಡೆಯಲಿವೆ. ಹಿತಶತ್ರುಗಳಿಂದ ಕಿರಿ ಕಿರಿ ಎದುರಿಸಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಆದಾಯಕ್ಕೆ ಕೊರತೆಯಿರದು.

ಧನು: ಬಂಧು ಮಿತ್ರರ ಆಗಮನದಿಂದ ಮನಸ್ಸಿಗೆ ಸಂತಸವಾಗುವುದು. ಮಾನಸಿಕವಾಗಿ ಕಾಡುತ್ತಿದ್ದ ಸಮಸ್ಯೆಗಳಿಗೆ ಒಂದು ರೀತಿಯ ಅಂತ್ಯ ಸಿಗುವುದು. ವಿನಾಕಾರಣ ವಾದ ವಿವಾದಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.

ಮಕರ: ಆಸ್ತಿ ಮನೆ ಖರೀದಿಗೆ ಚಿಂತನೆ ನಡೆಸುವಿರಿ. ಹಿರಿಯರ ಸಲಹೆಗಳಿಗೆ ಕಿವಿಕೊಡಬೇಕಾಗುತ್ತದೆ. ಸಂಗಾತಿಯೊಂದಿಗೆ ಸುಂದರ ಕ್ಷಣ ನಿಮ್ಮದಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ. ಕುಲದೇವರ ಪ್ರಾರ್ಥನೆ ನಡೆಸಿದರೆ ಶುಭ.

ಕುಂಭ: ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಿಬಂದು ದೈನಂದಿನ ಕೆಲಸಗಳಲ್ಲಿ ಆಲಸ್ಯತನ ಕಾಡುವುದು. ಮಕ್ಕಳ ವಿಚಾರದಲ್ಲಿ ಚಿಂತೆಯಾಗುವುದು. ವ್ಯಾಪಾರ ವಹಿವಾಟಿನಲ್ಲಿ ಲಾಭ ಗಳಿಸುವಿರಿ. ಆದರೆ ಅಪರಿಚಿತರನ್ನು ನಂಬಲು ಹೋಗಬೇಡಿ.

ಮೀನ: ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಧನ ವಿನಿಯೋಗ ಮಾಡಬೇಕಾಗುತ್ತದೆ. ಪ್ರೇಮಿಗಳ ಗುಟ್ಟು ಮನೆಯವರ ಮುಂದೆ ಬಹಿರಂಗವಾಗಲಿದೆ. ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸಗಳಿಗೆ ಚಾಲನೆ ನೀಡುವಿರಿ. ಸಂಗಾತಿಯ ಸಲಹೆ ಉಪಯೋಗಕ್ಕೆ ಬರುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ