ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 21 ಆಗಸ್ಟ್ 2019 (08:40 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಅಸಡ್ಡೆಯ ಧೋರಣೆ ನಿಮ್ಮ ಕೋಪಕ್ಕೆ ಕಾರಣವಾಗಲಿದೆ. ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವಿರಿ. ಮಾನಸಿಕವಾಗಿ ಗೊಂದಲ ಕಾಡಲಿದೆ. ಕೌಟುಂಬಿಕವಾಗಿ ಸಂಗಾತಿಯ ಸಹಕಾರ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ವೃಷಭ: ವೃತ್ತಿರಂಗದಲ್ಲಿ ಹೊಸ ಜನರ ಭೇಟಿ, ಹೊಸ ಮಿತ್ರರ ಸಹವಾಸ ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಅಭ‍್ಯಾಸದಲ್ಲಿ ಆಲಸ್ಯತನ ಕಂಡುಬಂದೀತು. ಉನ್ನತ ಹುದ್ದೆಯಲ್ಲಿರುವವರಿಗೆ ಮುಂಬಡ್ತಿ ಯೋಗವಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಮಿಥುನ: ಇಷ್ಟಮಿತ್ರರೊಂದಿಗೆ ಪ್ರವಾಸ, ಭೋಜನ ಸಾಧ್ಯತೆಯಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನ ವ್ಯಯ ಮಾಡಬೇಕಾಗುತ್ತದೆ. ಆದರೆ ವೃತ್ತಿ ಬದಲಾವಣೆಗೆ ಮನಸ್ಸಾದರೂ ಇದು ಸರಿಯಾದ ಸಮಯವಲ್ಲ. ಪತ್ನಿಯೊಡನೆ ಕಲಹವಾಗಬಹುದು.

ಕರ್ಕಟಕ: ಕಾರ್ಯಕ್ಷೇತ್ರದಲ್ಲಿ ಕಾರ್ಯದೊತ್ತಡ ಅಧಿಕವಾಗಿದ್ದರೂ ಅಂತಿಮ ಜಯ ನಿಮ್ಮದಾಗುವುದು. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಸಂಗಾತಿಗಾಗಿ ಚಿನ್ನಾಭರಣ ಖರೀದಿ ಮಾಡುವಿರಿ. ಕಂಕಣ ಬಲ ಕೂಡಿಬರಲಿದೆ.

ಸಿಂಹ: ದುರ್ಜನರ ಸಂಗದಿಂದ ಕಾರ್ಯಹಾನಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆ ಕಡಿಮೆಯಾಗಬಹುದು. ವ್ಯಾಪಾರಿಗಳಿಗೆ ಕೊಂಚ ಹಿನ್ನಡೆಯಾಗಬಹುದು. ಕೃಷಿಕರಿಗೆ ಲಾಭವಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಿಮ್ಮಿಚ್ಛೆಯಂತೆ ನೆರವೇರಲಿದೆ.

ಕನ್ಯಾ: ಉನ್ನತ ಹುದ್ದೆಯಲ್ಲಿರುವವರು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟವುಂಟಾಗಬಹುದು. ತಾಳ್ಮೆ ಅಗತ್ಯ. ಬಂಧು ಮಿತ್ರರ ಸಮಾಗಮವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ತುಲಾ: ವಿದ್ಯಾರ್ಥಿಗಳು ನಿರೀಕ್ಷಿತ ಫಲ ಪಡೆಯುವರು. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ, ವೇತನ ಹೆಚ್ಚಳ ಸಂಭವವಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಸಮಯವಿದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ವೃಶ್ಚಿಕ: ಆರ್ಥಿಕವಾಗಿ ಚೇತರಿಕೆ ಕಂಡುಬಂದು ನೀವು ಅಂದುಕೊಂಡ ಕಾರ್ಯಗಳನ್ನು ಹಂತ ಹಂತವಾಗಿ ನೆರವೇರಿಸುವಿರಿ. ಸಂಗಾತಿಯ ಮನೋಕಾಮನೆ ಪೂರೈಸಬೇಕಾಗುತ್ತದೆ. ಆದರೆ ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ಕಿರು ಸಂಚಾರ ಮಾಡಬೇಕಾಗಿಬರುತ್ತದೆ.

ಧನು: ಸಂಸಾರರ ಸುಖ ಅನುಭವಿಸಲಿದ್ದೀರಿ. ಸಂಗಾತಿಯ ಸಹಕಾರ ಸಿಗಲಿದೆ. ಆದರೆ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಯಾಗುವುದು. ಆರ್ಥಿಕವಾಗಿ ಕೊಂಚ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ದೇವತಾ ಪ್ರಾರ್ಥನೆ ಮಾಡಿ.

ಮಕರ: ಅಂದುಕೊಂಡ ಕಾರ್ಯಗಳು ನೆರವೇರಿ ಮನಸ್ಸಿಗೆ ನೆಮ್ಮದಿಯಾಗುವುದು. ಹಿತ ಶತ್ರುಗಳಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಸಿಗಬೇಕಾದ ಸ್ಥಾನ ಮಾನ ಕೈತಪ್ಪಬಹುದು. ಅನವಶ್ಯಕವಾಗಿ ವಾಗ್ವಾದಕ್ಕಿಳಿಯಬೇಡಿ. ತಾಳ್ಮೆಯಿಂದಿರಿ.

ಕುಂಭ: ವಿದ್ಯಾರ್ಥಿಗಳಿಗೆ ಆಲಸ್ಯತನದಿಂದಾಗಿ ಅಭ್ಯಾಸದಲ್ಲಿ ಕಡಿಮೆಯಾಗಬಹುದು. ಉದರ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಅಧಿಕ ಖರ್ಚು ವೆಚ್ಚಗಳಿಂದ ಚಿಂತೆಯಾಗುವುದು. ಕೌಟುಂಬಿಕವಾಗಿ ಕೆಲವೊಂದು ಜವಾಬ್ಧಾರಿ ವಹಿಸಬೇಕಾಗುತ್ತದೆ.

ಮೀನ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ನೆಮ್ಮದಿಯಾಗುವುದು. ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚುವುದು. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶ ಬಳಸಿಕೊಳ್ಳಬೇಕು. ನೂತನ ಕೆಲಸ ಕಾರ್ಯಗಳು ಪೂರ್ತಿಯಾಗಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ