ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿವಾರ, 21 ಸೆಪ್ಟಂಬರ್ 2019 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗದಲ್ಲಿ ಮುಂಬಡ್ತಿ ಸಾಧ್ಯತೆಯಿದೆ. ಎಷ್ಟೇ ಕೆಲಸಗಳಿದ್ದರೂ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ರಾಜಕೀಯ ರಂಗದಲ್ಲಿರುವವರಿಗೂ ಉನ್ನತ ಸ್ಥಾನ ಮಾನ ಸಾಧ‍್ಯತೆಯಿದೆ. ಕಿರು ಸಂಚಾರ ಯೋಗವಿದೆ. ವ್ಯವಹಾರದಲ್ಲಿ ಲಾಭ.

ವೃಷಭ: ಇಷ್ಟು ದಿನ ಕೂಡಿಟ್ಟಿದ್ದ ಹಣ  ಅನಿವಾರ್ಯ ಕಾರಣಗಳಿಂದ ನೀರಿನಂತೆ ಖರ್ಚಾಗಾವುದು. ವೃತ್ತಿರಂಗದಲ್ಲಿ ಮುನ್ನಡೆಯಿದ್ದರೂ ಸ್ತ್ರೀಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನ ಕಾಡಬಹುದು.

ಮಿಥುನ: ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಆಗಬಹುದು. ಗೃಹಿಣಿಯರಿಗೆ ಮನೆ ಖರ್ಚಿನ ಚಿಂತೆ ಕಾಡುವುದು. ಆರೋಗ್ಯದಲ್ಲಿ ವ್ಯತ್ಯಯವಾಗುವ ಸಾಧ್ಯತೆ. ನಾಲಿಗೆಗೆ ಕಡಿವಾಣವಿರಲಿ. ಕೃಷಿಕರಿಗೆ ಆದಾಯಕ್ಕೆ ಕೊರೆತೆಯಿರದು. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಕೆಳ ಹಂತದ ನೌಕರ ವರ್ಗದವರಿಗೆ ಕಷ್ಟಗಳು ತೀರುವುದು, ಮುಂಬಡ್ತಿ ಯೋಗವಿದೆ. ಮನೆ ಬದಲಾವಣೆಗೆ ಚಿಂತನೆ ನಡೆಸುವಿರಿ. ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕೋರ್ಟು ಕಚೇರಿ ವ್ಯವಹಾರದಲ್ಲಿ ಜಯ. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭವಾಗಲಿದೆ.

ಸಿಂಹ: ಮನೆಯಲ್ಲಿ ನಿಶ್ಚಿತವಾಗಿದ್ದ ಶುಭ ಕಾರ್ಯಗಳು ಅನಿರೀಕ್ಷಿತ ಕಾರ್ಯಗಳಿಂದ ನಿಂತುಹೋಗಲಿವೆ. ಇದರಿಂದ ಮನಸ್ಸಿಗೆ ಒಂದು ರೀತಿಯ ಬೇಸರ ಕಾಡುವುದು. ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಆರ್ಥಿಕವಾಗಿ ಚೇತರಿಕೆ ಕಂಡುಬರುವುದು. ಚಿಂತೆ ಬೇಡ.

 
ಕನ್ಯಾ: ಬಂಧು ಮಿತ್ರರಿಂದ ಚಾಡಿ ಮಾತು ಕೇಳಿಬಂದೀತು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದಲೇ ಕಿರಿ ಕಿರಿಯಾದೀತು. ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಬಾಕಿ ಹಣ ಪಾವತಿಯಾಗಲಿದ್ದು, ಆರ್ಥಿಕವಾಗಿ ಸುಧಾರಣೆಯಿರಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ತುಲಾ: ಆದಾಯವು ದ್ವಿಗುಣವಾಗಲಿದ್ದು, ಅಂದುಕೊಂಡ ಕಾರ್ಯಗಳನ್ನು ನೆರವೇರಿಸುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆದರೆ ಮಾನಸಿಕವಾಗಿ ಒಂದು ರೀತಿಯ ಗೊಂದಲದ ಸ್ಥಿತಿಯಲ್ಲಿರುವಿರಿ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ.

ವೃಶ್ಚಿಕ: ಉದ್ಯೋಗಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನದಿಂದ ಕೊಂಚ ಹಿನ್ನಡೆಯಾಗಬಹುದು. ಕಷ್ಟದ ಸಮಯದಲ್ಲಿ ಸಂಗಾತಿಯ ಸೂಕ್ತ ಸಲಹೆ ಉಪಯೋಗಕ್ಕೆ ಬರುವುದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಧನು: ಖರ್ಚು ವೆಚ್ಚಗಳು ಅಧಿಕವಾಗಲಿದೆ. ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚುವುದು. ಸಾಲ ವ್ಯವಹಾರದಲ್ಲಿ ಮನಸ್ತಾಪಗಳು ಬರಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಶುಭ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ.

ಮಕರ: ಭೂಮಿ, ವಾಹನ ಖರೀದಿಗೆ ಇದು ಸೂಕ್ತ ಸಮಯ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಮಾಡುವಿರಿ. ಹೊಸ ಕೆಲಸಗಳಿಗೆ ಕೈ ಹಾಕುವಾಗ ಸಂಗಾತಿಯ ಸಲಹೆಗೆ ಕಿವಿಗೊಡಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಸೂಕ್ತ ಸ್ಥಾನಮಾನ ಸಿಗುವುದು.

ಕುಂಭ: ವೃತ್ತಿರಂಗದಲ್ಲಿ ಕಾರ್ಯದೊತ್ತಡದಿಂದ ಯಶಸ್ಸು ಸಿಗುವುದು. ವಾಹನ ಖರೀದಿಯಿಂದ ನಷ್ಟವಾಗಬಹುದು. ಕೃಷಿಕರಿಗೆ ಕೆಲಸ ಕಾರ್ಯಗಳು ವಿಳಂಬವಾಗಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

ಮೀನ: ಮಿತ್ರರೊಂದಿಗೆ ವಾಗ್ವಾದಕ್ಕಿಳಿದು ಮನಸ್ತಾಪ ಮಾಡಿಕೊಳ್ಳುವಿರಿ. ವೃತ್ತಿರಂಗದಲ್ಲಿ ಬಿಡುವಿಲ್ಲದ ಕಾರ್ಯದೊತ್ತಡದಿಂದ ದೇಹ ಹೈರಾಣಾಗುವುದು. ಸಂಗಾತಿಯ ಅಲಂಕಾರಿಕ ವಸ್ತುಗಳಿಗಾಗಿ ಧನವಿನಿಯೋಗ ಮಾಡುವಿರಿ. ಮಹಿಳಾ ಉದ್ಯೋಗಿಗಳಿಗೆ ಶುಭ ಫಲವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ