ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 1 ಅಕ್ಟೋಬರ್ 2019 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದೇಹಾರೋಗ್ಯದಲ್ಲಿ ಕೊಂಚ ಏರುಪೇರಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ಮುನ್ನಡೆಯಿದ್ದರೂ ಹಿತಶತ್ರುಗಳ ಬಗ್ಗೆ ಎಚ್ಚರದಿಂದಿರಬೇಕು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.  ಸರಕಾರಿ ಕೆಲಸದಲ್ಲಿ ವಿಘ್ನಗಳು ಎದುರಾಗಬಹುದು. ದಿನದಂತ್ಯಕ್ಕೆ ಶುಭ ಸುದ್ದಿ.

ವೃಷಭ: ಹಿರಿಯರಿಗೆ ದೇವತಾ ಕಾರ್ಯಗಳನ್ನು ಪೂರೈಸಲು ದೇವಾಲಯ ಸಂದರ್ಶನ ನಡೆಸುವ ಭಾಗ್ಯವಿದೆ. ಸ್ವಯಂ ವೃತ್ತಿಯವರಿಗೆ ಹಿನ್ನಡೆಯ ಅಪಾಯವಿದೆ. ಆದಾಯಕ್ಕೆ ಕೊರತೆಯಿರದು. ಬಾಕಿ ಹಣ ಪಾವತಿಯಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಿರುತ್ತದೆ.

ಮಿಥುನ: ದೇವತಾ ಕಾರ್ಯಗಳಿಗೆ ಓಡಾಟ, ಖರ್ಚುವೆಚ್ಚಗಳಾಗಬಹುದು. ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಗುವುದು. ಚಾಡಿ ಮಾತುಗಳು ಕೇಳಿಬಂದೀತು, ಅಲಕ್ಷಿಸುವುದು ಒಳಿತು. ಅನಿರೀಕ್ಷಿತವಾಗಿ ಹಳೆಯ ಮಿತ್ರರ ಭೇಟಿಯಾಗಿ ಮನಸ್ಸಿಗೆ ಸಂತಸವಾಗುವುದು.

ಕರ್ಕಟಕ: ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸಗಳಿಗೆ ಚಾಲನೆ ನೀಡುವಿರಿ ಮತ್ತು ಅದರಲ್ಲಿ ಯಶಸ್ವಿಯೂ ಆಗುವಿರಿ. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಜಯ ನಿಮ್ಮದಾಗುವುದು. ಸಹನೆ ಪರೀಕ್ಷಿಸುವ ಕಾಲವಿದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಸಿಂಹ: ಪಾಲು ಬಂಡವಾಳ ವ್ಯವಹಾರದಲ್ಲಿ ಲಾಭ ಗಳಿಸಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮುನ್ನಡೆಯ ಯೋಗವಿದೆ. ಅಂದುಕೊಂಡ ಕೆಲಸ ಕಾರ್ಯ ನೆರವೇರಿಸಲು ಪರಿಶ್ರಮ ಪಡಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

 
ಕನ್ಯಾ: ವ್ಯವಹಾರದಲ್ಲಿ ಕಷ್ಟದಲ್ಲಿದ್ದಾಗ ಮಿತ್ರರ ನೆರವು ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ತಪ್ಪದು. ಧಾರ್ಮಿಕ ಕ್ಷೇತ್ರದ ಸಂದರ್ಶನದಿಂದ ಮನಸ್ಸಿಗೆ ನೆಮ್ಮದಿಯಾಗುವುದು. ಕೌಟುಂಬಿಕವಾಗಿ ಸಂತೋಷ ಸಿಗುವುದು. ಕಿರು ಸಂಚಾರ ಮಾಡಬೇಕಾಗುತ್ತದೆ.

ತುಲಾ: ಮಕ್ಕಳ ಬಗ್ಗೆ ಕೇಳಿಬರುವ ಮಾತುಗಳು ಮನಸ್ಸಿಗೆ ಬೇಸರ ಕೊಡಬಹುದು. ಅಗತ್ಯ ಸಂದರ್ಭದಲ್ಲಿ ಸಹಾಯ ಸಿಗದೇ ಬೇಸರವಾಗುವುದು. ಶತ್ರುಗಳ ಕಾಟದ ನಡುವೆಯೂ ಅಂತಿಮ ಜಯ ನಿಮ್ಮದಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ವೃಶ್ಚಿಕ: ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡುವುದು. ನಾಲಿಗೆ ಚಪಲಕ್ಕೆ ಕಡಿವಾಣ ಹಾಕಿ. ಅಧಿಕ ಖರ್ಚು ವೆಚ್ಚಗಳಾಗಲಿದ್ದು, ಚಿಂತೆಗೆ ಕಾರಣವಾಗಲಿದೆ. ವಿವಾಹಿತರಿಗೆ ಸಂಗಾತಿಯೊಂದಿಗೆ ಹೊಂದಾಣಿಕೆಯ ಕೊರತೆಯುಂಟಾಗುವುದು. ತಾಳ್ಮೆಯಿರಲಿ.

ಧನು: ನಾನಾ ರೀತಿಯ ಖರ್ಚು ವೆಚ್ಚಗಳು ಎದುರಾಗಲಿವೆ. ದೂರ ಸಂಚಾರದಿಂದ ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಧನಾರ್ಜನೆಗೆ ನಾನಾ ಮಾರ್ಗಗಳನ್ನು ಹುಡುಕುವಿರಿ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಸಂತಸದ ವಾರ್ತೆ ಆಲಿಸುವಿರಿ. ಕೌಟುಂಬಿಕವಾಗಿ ತಾಳ್ಮೆ ಅಗತ್ಯ.

ಮಕರ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುವಿರಿ. ಅಂದುಕೊಂಡ ಯೋಜನೆಗಳನ್ನು ಕಾರ್ಯಗತಗೊಳಿಸಲು ಇದುವೇ ಸಕಾಲ. ಮಾನಸಿಕವಾಗಿ ಋಣಾತ್ಮಕ ಯೋಚನೆಗಳನ್ನು ದೂರವಿಡಿ.

ಕುಂಭ: ಕೌಟುಂಬಿಕ ಕಲಹಗಳಿಂದ ಮನಸ್ಸು ಬೇಸರಗೊಳ್ಳಲಿದೆ. ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು. ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿರಿ. ವೃತ್ತಿರಂಗದಲ್ಲಿ ಎಷ್ಟೇ ದುಡಿದರೂ ತೃಪ್ತಿಯ ಕೊರತೆ ಕಾಣಲಿದೆ. ಕೆಳಹಂತದ ನೌಕರರಿಗೆ ಬಡ್ತಿಯೋಗವಿದೆ.

ಮೀನ: ಕೃಷಿಕರಿಗೆ ಕೆಲಸ ಕಾರ್ಯದಲ್ಲಿ ವಿಘ್ನ ತೋರಿಬಂದೀತು. ರಾಜಕೀಯ ರಂಗದಲ್ಲಿರುವವರಿಗೆ ಉನ್ನತಿಯಿರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸಂಗಾತಿಯ ಅಲಂಕಾರಿಕ ವಸ್ತುಗಳಿಗೆ ಧನವಿನಿಯೋಗ ಮಾಡುವಿರಿ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆ ಕೇಳಿಬರುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ