ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 17 ಅಕ್ಟೋಬರ್ 2019 (09:13 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿ ರಂಗದಲ್ಲಿ ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗಲಿದೆ. ಮೇಲಧಿಕಾರಿಗಳೊಂದಿಗೆ ವರ್ತಿಸುವಾಗ ಎಚ್ಚರವಾಗಿರಿ. ದೂರ ಸಂಚಾರ ಮಾಡಬೇಕಾಗುತ್ತದೆ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಆಸ್ತಿ, ಮನೆ ಖರೀದಿ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಉದ್ಯೋಗ ಕ್ಷೇತ್ರದಲ್ಲೂ ಮುನ್ನಡೆ, ಬಡ್ತಿ ಪಡೆಯುವಿರಿ. ವ್ಯವಹಾರದಲ್ಲಿ ಶುಭ ಫಲಗಳು ಗೋಚರವಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳು ನೆರವೇರಲಿವೆ. ಇಷ್ಟ ದೇವರ ಪ್ರಾರ್ಥನೆ ಮಾಡಿ.

ಮಿಥುನ: ಕೆಳಹಂತದ ನೌಕರರು ನಿಮ್ಮ ಸಹಾಯಕ್ಕೆ ಬರುವರು. ನಿಮ್ಮ ಕಾರ್ಯಸಾಧನೆಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು. ಶೀತ ಸಂಬಂಧೀ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು, ಕಾಳಜಿವಹಿಸಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಕರ್ಕಟಕ: ಕಷ್ಟದ ಸಂದರ್ಭದಲ್ಲಿ ಮಿತ್ರರ ಸಹಾಯ ಒದಗಿಬರಲಿದೆ. ಅಂದುಕೊಂಡ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಸಫಲತೆ ಕಾಣುವಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭ್ಯವಾಗಲಿದೆ. ಆದಾಯವಿದ್ದಷ್ಟೇ ಖರ್ಚೂ ತೋರಿಬರವುದು.

ಸಿಂಹ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಂದ ಅನಗತ್ಯ ಗೊಂದಲಗಳನ್ನು ಮೈಮೇಲೆಳೆದುಕೊಳ್ಳುವಿರಿ. ಕೆಲಸ ಕಾರ್ಯದಲ್ಲಿ ಒಂದು ರೀತಿಯ ನಿರುತ್ಸಾಹ ತೋರಿಬರಲಿದೆ. ಮಾತಿನ ಮೇಲೆ ನಿಗಾ ಇರಲಿ. ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ‍್ಯತೆ.

 
ಕನ್ಯಾ: ಸಾಂಸಾರಿಕವಾಗಿ ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ. ಅನ್ಯರೊಂದಿಗೆ ವ್ಯವಹರಿಸುವಾಗ ದುಡುಕಿನ ವರ್ತನೆ ತೋರದಿರಿ. ವೃತ್ತಿರಂಗದಲ್ಲಿ ನೆಮ್ಮದಿ ಕಲಕುವಂತಹ ಘಟನೆಗಳು ನಡೆಯಬಹುದು. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ.

ತುಲಾ: ದೈವಾನುಕೂಲ ನಿಮ್ಮ ಮೇಲಿದ್ದು ಅಂದುಕೊಂಡ ಕಾರ್ಯ ನೆರವೇರಿಸುವಿರಿ. ಆರ್ಥಿಕವಾಗಿ ಹಂತ ಹಂತವಾಗಿ ಅಭಿವೃದ್ಧಿ ಕಂಡುಬರಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣವಿರಲಿದೆ.

ವೃಶ್ಚಿಕ: ಕೌಟುಂಬಿಕವಾಗಿ ಅಭಿವೃದ್ಧಿ, ನೆಮ್ಮದಿಯಿದ್ದರೂ ಉದ್ಯೋಗ ಕ್ಷೇತ್ರದಲ್ಲಿ ಕೆಲವೊಂದು ಅಡೆತಡೆಗಳು ತೋರಿಬರಲಿವೆ. ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವಿದ್ಯಾರ್ಥಿಗಳಿಗೆ ಮುನ್ನಡೆ.

ಧನು: ಆರ್ಥಿಕವಾಗಿ ಹಲವು ತೊಂದರೆಗಳಿದ್ದರೂ ವ್ಯವಹಾರದಲ್ಲಿ ಮುನ್ನಡೆಗೆ ತೊಂದರೆಯಾಗದು. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಅಲ್ಪ ಸ್ವಲ್ಪ ಮುನ್ನಡೆಯಿದ್ದೀತು. ಆದರೆ ಹಿತ ಶತ್ರುಗಳ ಬಗ್ಗೆ ಎಚ್ಚರವಾಗಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬರಲಿದೆ.

ಮಕರ: ಆರ್ಥಿಕವಾಗಿ ಯಾವುದೇ ತೊಂದರೆಗಳು ಎದುರಾಗದು. ಸಂಗಾತಿಯೊಂದಿಗೆ ಮನಸ್ತಾಪಗಳುಂಟಾಗಬಹುದು. ಮಾತಿನ ಮೇಲೆ ನಿಗಾ ಇರಲಿ. ಸರಕಾರಿ ಕೆಲಸಗಳಲ್ಲಿ ಜಯ ಸಿಗುವುದು. ಉದ್ಯೋಗ ನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಕುಂಭ: ಅನಿರೀಕ್ಷಿತವಾಗಿ ಹಳೆಯ ಮಿತ್ರನ ಭೇಟಿಯಾಗಿ ಮನಸ್ಸಿಗೆ ಖುಷಿಯಾಗುವುದು. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ಸಿಗಲಿದೆ. ಶುಭ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಸ್ವ ಉದ್ಯೋಗಿಗಳಿಗೆ ಲಾಭದಾಯಕ ಫಲಗಳಿರುತ್ತವೆ.

ಮೀನ: ಕೌಟುಂಬಿಕವಾಗಿ ನಿಮ್ಮ ಜವಾಬ್ಧಾರಿಗಳು ಹೆಚ್ಚಲಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಇಷ್ಟ ದೇವರ ಪ್ರಾರ್ಥನೆ ಮಾಡಿ ಮುನ್ನಡೆದರೆ ಉದ್ಯೋಗದಲ್ಲಿ ಬರುವಂತಹ ಕಷ್ಟಗಳು ನಿವಾರಣೆಯಾಗಲಿವೆ. ಶೈಕ್ಷಣಿಕ ರಂಗದಲ್ಲಿರುವವರಿಗೆ ಪ್ರಗತಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ