ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 6 ನವೆಂಬರ್ 2019 (08:39 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಗೃಹ ನಿರ್ಮಾಣ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ವೃತ್ತಿರಂಗದಲ್ಲಿ ಬಿಡುವಿಲ್ಲದ ಕಾರ್ಯದೊತ್ತಡವಿರಲಿದೆ. ಅನಗತ್ಯ ವಿವಾದಗಳಿಂದ ದೂರವಿರಿ. ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗುವಿರಿ. ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ.

ವೃಷಭ: ಕಾರ್ಯಾರಂಭದಲ್ಲಿ ಅನೇಕ ಅಡೆತಡೆಗಳು ಬರಲಿವೆ. ಹಾಗಿದ್ದರೂ ಆತ್ಮಸ್ಥೈರ್ಯದಿಂದ ಮುನ್ನಡೆದರೆ ಅಂದುಕೊಂಡ ಕಾರ್ಯಗಳು ನೆರವೇರಿಸುವಿರಿ. ನಿರೀಕ್ಷಿತ ಮೂಲಗಳಿಂದ ಧನಾಗಮನವಾಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ಮಿಥುನ: ದೂರ ಸಂಚಾರದಿಂದ ದೇಹಾಯಾಸವಾಗಲಿದೆ. ಭೂಮಿ ವಿಚಾರದಲ್ಲಿ ಅನಗತ್ಯ ವಾದ ವಿವಾದಗಳಾಗಬಹುದು. ನಿರುದ್ಯೋಗಿಗಳಿಗೆ ಕೈಗೆ ಬಂದ ಅವಕಾಶಗಳು ಕೈತಪ್ಪಿ ನಿರಾಸೆಯಾಗಬಹುದು. ಅನಿರೀಕ್ಷಿತವಾಗಿ ಹಳೆಯ ಮಿತ್ರನ ಭೇಟಿಯಾಗುವಿರಿ.

ಕರ್ಕಟಕ: ವೃತ್ತಿರಂಗದಲ್ಲಿ ಶಿಸ್ತುಬದ್ಧವಾಗಿ ಕೆಲಸ ನಿರ್ವಹಿಸಿದರೆ ಯಶಸ್ಸು ನಿಮ್ಮ ಕೈ ಹಿಡಿಯಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ಭಾವನಾತ್ಮಕವಾಗಿ ಕೆಲವೊಂದು ವಿಚಾರದಲ್ಲಿ ಕಟ್ಟು ಬೀಳುವಿರಿ. ಹೊಸ ನಿರ್ಧಾರ ತೆಗೆದುಕೊಳ್ಳುವಾಗ ಸಂಗಾತಿಯೊಂದಿಗೆ ಸಮಾಲೋಚಿಸಿ.

ಸಿಂಹ: ಮೇಲ್ವರ್ಗದ ಉದ್ಯಮಿಗಳಿಗೆ ವ್ಯವಹಾರದಲ್ಲಿ ಕಿರುಕುಳದ ಅನುಭವವಾದೀತು. ಕೆಳಹಂತದ ನೌಕರರೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಪಾಲು ಬಂಡವಾಳ ಹೂಡಿಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಅಪರಿಚಿತರಿಂದ ಸಮಸ್ಯೆಗಳು ಬಂದೀತು.

 
ಕನ್ಯಾ: ನಿಮ್ಮ ಮುಂಗೋಪವೇ ನಿಮಗೆ ಶತ್ರುವಾಗಲಿದೆ. ಕಾರ್ಯಕ್ಷೇತ್ರದಲ್ಲಿ ದುಡುಕಿನ ವರ್ತನೆಯಿಂದ ಸಂಕಷ್ಟಗಳು ಎದುರಾದೀತು. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿ ಬರುವುದು. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗಕ್ಕಾಗಿ ಕೆಲವು ದಿನ ಕಾಯಬೇಕಾಗುತ್ತದೆ.

ತುಲಾ: ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗಿ  ಆಸ್ಪತ್ರೆಗೆ ಅಲೆದಾಡಬೇಕಾದೀತು. ಕ್ರೀಡಾರಂಗದಲ್ಲಿರುವವರಿಗೆ ಮುನ್ನಡೆಯ ಯೋಗವಿದೆ. ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚುವುದು. ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ವ್ಯವಹಾರದಲ್ಲಿ ನಿಧಾನವಾಗಿ ಅಭಿವೃದ್ಧಿ ಗೋಚರಕ್ಕೆ ಬರುವುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗದ ಯೋಗವಿದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದಿಂದ ಮನೆಯಲ್ಲಿ ಸಂಭ್ರಮವಿರುವುದು.

ಧನು: ಉದ್ಯೋಗದಲ್ಲಿ ಸ್ಥಾನ ಪಲ್ಲಟವಾಗಬಹುದು. ಮನೆ, ವಾಸಸ್ಥಳ ಬದಲಾವಣೆ ಮಾಡಬೇಕಾಗುತ್ತದೆ. ವ್ಯಾಪಾರ, ವ್ಯವಹಾರದಲ್ಲಿ ಮುನ್ನಡೆಯಾಗಿ, ಲಾಭ ಕೈಗೆ ಬರುವುದು. ಸಂಗಾತಿಯ ಮನೋಕಾಮನೆ ಪೂರೈಸುವಿರಿ. ವಿದ್ಯಾರ್ಥಿಗಳಿಗೆ ಮುನ್ನಡೆ ಸಿಗುವುದು.

ಮಕರ: ಉದರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಹಿರಿಯರಿಗೆ ಪುಣ್ಯ ಕ್ಷೇತ್ರದ ಸಂದರ್ಶನ ಯೋಗವಿದೆ. ನಿಮ್ಮ ದೃಢ ಮನೋಭಾವದಿಂದ ಬರುವಂತಹ ಯಾವುದೇ ಕಷ್ಟಗಳನ್ನೂ ಎದುರಿಸುವಿರಿ. ಬರಬೇಕಾಗಿದ್ದ ಸಾಲ ಮರಳಿ ಕೈ ಸೇರಲಿದೆ. ತಾಳ್ಮೆ ಅಗತ್ಯ.

ಕುಂಭ: ಆದಾಯ ಲೆಕ್ಕಪತ್ರದ ಬಗ್ಗೆ ಸರಿಯಾಗಿ ನಿಗಾ ವಹಿಸಬೇಕು. ಸರಕಾರಿ ಕೆಲಸಗಳಿಗೆ ಓಡಾಟ ನಡೆಸಬೇಕಾಗಬಹುದು. ಹಣಕಾಸಿನ ಮುಗ್ಗಟ್ಟು ತೋರಿಬಂದೀತು. ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರ ಮೆಚ್ಚುಗೆ ಸಿಗಲಿದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಮೀನ: ಬಂಧು ಮಿತ್ರರಿಂದ ಚಾಡಿ ಮಾತು ಕೇಳಿಬಂದೀತು. ಪ್ರೀತಿ ಪಾತ್ರರ ಜತೆಗೆ ಹೆಚ್ಚು ಸಮಯ ಕಳೆಯುವಿರಿ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ