ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿವಾರ, 16 ನವೆಂಬರ್ 2019 (08:23 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ವಿನಾಕಾರಣ ಅಪವಾದ ಕೇಳಿಬರುತ್ತಿದೆ. ಇದರಿಂದ ಮನಸ್ಸಿಗೆ ಹತಾಶೆಯಾಗಬಹುದು. ಸಂಗಾತಿಯ ಅಪ್ರಬುದ್ಧ ನಡುವಳಿಕೆ ನಿಮ್ಮ ಬೇಸರಕ್ಕೆ ಕಾರಣವಾಗುವುದು. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ.

ವೃಷಭ: ಮಾನಸಿಕವಾಗಿ ಹಲವು ಚಿಂತೆಗಳಿಂದ ಮನಸ್ಸು ಖಿನ್ನವಾಗುವುದು. ಎಷ್ಟೇ ದುಡಿದರೂ ತೃಪ್ತಿಯಿಲ್ಲದ ಭಾವವಿರುವುದು. ಆರ್ಥಿಕವಾಗಿ ಆದಾಯವಿದ್ದಷ್ಟು ಖರ್ಚೂ ಇರುವುದು. ಅವಶ್ಯಕ ವಸ್ತುಗಳ ಖರೀದಿ ಮಾಡುವಿರಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಮಿಥುನ: ಸಹೋದರರಿಂದ ಆಸ್ತಿ, ಹಣಕಾಸಿನ ವಿಚಾರವಾಗಿ ಕಿರಿ ಕಿರಿಯಾಗಬಹುದು. ತಾಳ್ಮೆಯಿಂದ ವರ್ತಿಸುವುದು ಮುಖ್ಯ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು, ಕಾಳಜಿ ವಹಿಸಿ. ಕಷ್ಟದಲ್ಲಿರುವ ಬಂಧು ಮಿತ್ರರಿಗೆ ಸಹಾಯ ಮಾಡುವಿರಿ. ಹಿರಿಯರ ಬಗ್ಗೆ ಕಾಳಜಿ ವಹಿಸಿ.

ಕರ್ಕಟಕ: ಹೊಸ ಮಿತ್ರರ ಭೇಟಿಯಿಂದ ಹೊಸ ವಿಚಾರಗಳು ಹೊಳೆಯಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ, ಮುನ್ನಡೆ ಯೋಗವಿದೆ. ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಸಿಂಹ: ಕಷ್ಟದ ಸಮಯದಲ್ಲಿ ದೇವರ ಮೊರೆ ಹೋಗುವುದರಿಂದ ಆತ್ಮಸ್ಥೈರ್ಯ ಹೆಚ್ಚುವುದು. ಹಿರಿಯರ ತೀರ್ಥ ಯಾತ್ರೆಗೆ ಏರ್ಪಾಟು ಮಾಡುವಿರಿ. ಆದಾಯದ ಮೂಲಗಳು ಸ್ಥಗಿತವಾಗಲಿದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ಎದುರಾಗಲಿವೆ. ಮಕ್ಕಳಿಗೆ ಉನ್ನತಿ ಸಿಗಲಿದೆ.

 
ಕನ್ಯಾ: ವೃತ್ತಿ ಜೀವನವಿರಲಿ, ವೈಯಕ್ತಿಕ ಜೀವನವಿರಲಿ ಹೊಂದಾಣಿಕೆಯಿಂದ ಜೀವನ ನಡೆಸಿದರೆ ಎಲ್ಲವೂ ಸುಗಮವಾಗಲಿದೆ. ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಾಡಬಹುದು, ಕಾಳಜಿ ವಹಿಸಿ. ನಿರುದ್ಯೋಗಿಗಳ ಉದ್ಯೋಗ ಭೇಟೆಗೆ ಯಶಸ್ಸು ಸಿಗುವುದು.

ತುಲಾ: ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರಿಂದ ಪ್ರಶಂಸೆ ಸಿಗಲಿದೆ. ಸಾಮಾಜಿಕವಾಗಿ ಉನ್ನತ ಸ್ಥಾನ ಮಾನ ಸಿಗುವುದು. ಕೌಟುಂಬಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ ಕಾದಿದೆ.

ವೃಶ್ಚಿಕ: ಮಕ್ಕಳ ಜೀವನದಲ್ಲಿ ಪ್ರಗತಿ ಕಂಡುಬಂದು, ಸಂತಸವಾಗಲಿದೆ. ಮನಸ್ಸಿಗೆ ಖುಷಿ ಕೊಡುವ ವಿಚಾರಗಳು ಕೇಳಿಬರಲಿವೆ. ಯಂತ್ರೋಪಕರಣಗಳ ಕೆಲಸ ಮಾಡುವವರಿಗೆ ಉನ್ನತ ಸ್ಥಾನ ಮಾನ ಲಭ್ಯವಾಗಲಿದೆ. ಸಾಲಗಳು ಮರುಪಾವತಿಯಾಗಲಿವೆ.

ಧನು: ಪ್ರೇಮಿಗಳಿಗೆ ಹಿರಿಯರ ಒಪ್ಪಿಗೆ ಸಿಗಲಿದೆ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ಸಿಗಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನವ್ಯಯವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹಕಾರ ಸಿಗದೇ ಒದ್ದಾಡಬೇಕಾಗುತ್ತದೆ.

ಮಕರ: ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಅಧಿಕವಾಗಲಿದ್ದು, ದೇಹಾಯಾಸವಾಗಬಹುದು. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು. ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗಬಹುದು. ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಕುಂಭ: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಸಿಗಲಿದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗಲಿದೆ. ಆದರೆ ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ವಾದ ವಿವಾದಗಳಿಂದ ದೂರವಿದ್ದರೆ ಉತ್ತಮ. ಹೊಸ ಮನೆಗೆ ವಾಸ್ತವ್ಯ ಬದಲಾಯಿಸುವಿರಿ.

ಮೀನ: ಆರ್ಥಿಕವಾಗಿ ಅನೇಕ ಖರ್ಚು ವೆಚ್ಚಗಳು ಎದುರಾಗಲಿವೆ. ಮಾನಸಿಕವಾಗಿ ಋಣಾತ್ಮಕ ಚಿಂತೆಗಳಿಗೆ ಅವಕಾಶ ಮಾಡಿಕೊಡದಿರಿ. ಕೃಷಿ ಕೆಲಸಗಳಿಗೆ ಮುನ್ನಡೆ ಸಿಗಲಿದೆ. ಅಂದುಕೊಂಡ ಕೆಲಸ ಕಾರ್ಯಗಳನ್ನು ಮಾಡಲು ವಿಘ‍್ನಗಳು ಎದುರಾದೀತು. ತಾಳ್ಮೆ ಕಳೆದುಕೊಳ್ಳಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ