ಮೇಷ: ವ್ಯಾಪಾರಿಗಳಿಗೆ ಹೂಡಿಕೆಗಳಿಂದ ಲಾಭ ಕಂಡುಬರಲಿದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಆದರೆ ಸರಿಯಾದ ಮಾರ್ಗದಲ್ಲಿ ಬಳಸಬೇಕು. ಉದ್ಯೋಗ ಕ್ಷೇತ್ರದಲ್ಲಿ ತಾಳ್ಮೆ ಅಗತ್ಯ. ಕೌಟುಂಬಿಕವಾಗಿ ಸಮಾಧಾನಕರ ದಿನವಾಗಿರಲಿದೆ.
ವೃಷಭ: ಕೌಟುಂಬಿಕವಾಗಿ ಸಂಗಾತಿಯ ಸಹಕಾರ ಪಡೆಯುವಿರಿ. ಕುಟುಂಬದ ಪ್ರೀತಿಯೇ ನಿಮಗೆ ಶ್ರೀರಕ್ಷೆಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ಅನವಶ್ಯಕವಾಗಿ ಖರ್ಚು ವೆಚ್ಚಗಳಾಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮಿಥುನ: ವೃತ್ತಿರಂಗದಲ್ಲಿ ನಿರಂತರವಾಗಿ ಕಾರ್ಯದೊತ್ತಡ ಅಧಿಕವಾಗಲಿದ್ದು, ದೇಹಾಯಾಸವಾಗಬಹುದು. ವಿದ್ಯಾರ್ಥಿಗಳಿಗೆ ವಿದೇಶಯಾನದ ಯೋಗವಿದೆ. ಹೊಸ ಕೆಲಸಕ್ಕೆ ಕೈ ಹಾಕುವ ಮೊದಲು ಗುರು ಹಿರಿಯರ ಆಶೀರ್ವಾದ ಪಡೆದು ಮುನ್ನಡೆಯಿರಿ. ದಿನದಂತ್ಯಕ್ಕೆ ಶುಭವಾಗಲಿದೆ.
ಕರ್ಕಟಕ: ಕಾರ್ಯರಂಗದಲ್ಲಿ ಎಷ್ಟೇ ಅಡೆತಡೆಗಳಿದ್ದರೂ ಅದೃಷ್ಟದ ಬಲದಿಂದ ಜಯಗಳಿಸುವಿರಿ. ಕೋರ್ಟು ಕಚೇರಿ ಕಲಾಪಗಳಲ್ಲಿ ನಿಮ್ಮ ಪರವಾಗಿ ತೀರ್ಪು ಬರಲಿದೆ. ಮನೆಗೆ ಹೊಸ ಅತಿಥಿಗಳ ಆಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಆದರೂ ನಿಮ್ಮ ಕೆಲಸಗಳಿಂದ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಬೇರೆಯವರ ತಪ್ಪಿಗೆ ಬೆಲೆ ತೆರಬೇಕಾದ ಪರಿಸ್ಥಿತಿ ಬರಬಹುದು. ಎಚ್ಚರಿಕೆಯಿಂದಿರಿ.
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಕಾರ್ಯ ಕ್ಷೇತ್ರದಲ್ಲಿ ಒಂದು ರೀತಿಯ ನೆಮ್ಮದಿ ಸಿಗಲಿದೆ. ವೇತನ ಹೆಚ್ಚಳ, ಬಡ್ತಿ ಯೋಗವಿದೆ. ಸ್ತ್ರೀಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಹಿರಿಯರಿಗೆ ಪುಣ್ಯ ಕ್ಷೇತ್ರದ ಭೇಟಿ ಯೋಗವಿದೆ.
ತುಲಾ: ಕೃಷಿ ಕ್ಷೇತ್ರದಲ್ಲಿರುವವರಿಗೆ ವ್ಯವಹಾರದಲ್ಲಿ ಮುನ್ನಡೆಯಿರಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆರ್ಥಿಕವಾಗಿ ಹೆಚ್ಚಿನ ಉನ್ನತಿ ಕಾಣಲಿದ್ದೀರಿ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರವಹಿಸಿ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ.
ವೃಶ್ಚಿಕ: ಅನಾರೋಗ್ಯ ಸ್ಥಿತಿ ಸುಧಾರಣೆಯಾಗಿ ನೆಮ್ಮದಿ ಪಡೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ ಕಾದಿದೆ.
ಧನು: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಹೆಚ್ಚಿನ ಜಾಗ್ರತೆ ವಹಿಸಿ. ಬಂಧು ಮಿತ್ರರಿಂದ ಚಾಡಿ ಮಾತು ಕೇಳಿಬಂದೀತು. ಮೇಲಧಿಕಾರಿಗಳಿಗೆ ಉದ್ಯೋಗದಲ್ಲಿ ಒತ್ತಡ ಹೆಚ್ಚಲಿದೆ. ಕೋಪದ ಕೈಗೆ ಬುದ್ಧಿಕೊಟ್ಟು ನಿರ್ಧಾರ ತೆಗೆದುಕೊಳ್ಳಬೇಡಿ.
ಮಕರ: ಇಷ್ಟಮಿತ್ರರೊಂದಿಗೆ ಭೋಜನ, ಪ್ರವಾಸ ಸೇರಿದಂತೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಹಿರಿಯರಿಗೆ ದೇಹಾರೋಗ್ಯದಲ್ಲಿ ಹದತಪ್ಪಬಹುದು. ನೂತನ ದಂಪತಿಗಳಲ್ಲಿ ಸಂತಾನ ಫಲ ಸೂಚನೆ ಸಿಗಲಿದೆ.
ಕುಂಭ: ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚಲಿವೆ. ಗೃಹ ಸಂಬಂಧೀ ಕೆಲಸಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಶುಭ ಮಂಗಲ ಕಾರ್ಯಗಳಿಗೆ ತಯಾರಿ ನಡೆಸುವಿರಿ. ವೃತ್ತಿರಂಗದಲ್ಲಿ ಅನವಶ್ಯಕ ವಿವಾದಗಳಿಮದ ದೂರವಿರುವುದು ಒಳಿತು.
ಮೀನ: ನಿಮ್ಮ ಪ್ರಯತ್ನಬಲದಿಂದಲೇ ಉದ್ದೇಶಿತ ಕಾರ್ಯ ನೆರವೇರಲಿದೆ. ಸಹೋದರಿಯ ಮದುವೆ ಪ್ರಸ್ತಾಪಗಳಿಗೆ ಮುನ್ನಡೆ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ದೂರವಾಗಿ ಒಳ್ಳೆಯ ದಿನಗಳು ಎದುರಾಗಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.