ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 31 ಜನವರಿ 2020 (08:47 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳ ಪರಿಹಾರಕ್ಕೆ ಹೊಸ ಸೂತ್ರ ಕಂಡುಕೊಳ್ಳುವಿರಿ. ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬರಲಿವೆ. ಆರ್ಥಿಕವಾಗಿ ಖರ್ಚು ವೆಚ್ಚಗಳಿದ್ದರೂ ಆದಾಯಕ್ಕೆ ಕೊರತೆಯಿರದು. ನೂತನ ದಂಪತಿಗಳಿಗೆ ಶುಭ ದಿನ.

ವೃಷಭ: ವಿವೇಚನೆಯಿಂದ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಅಪರಿಚಿತರನ್ನು ನಂಬಿ ವ್ಯವಹಾರದಲ್ಲಿ ನಷ್ಟ ಮಾಡಿಕೊಳ್ಳಬೇಡಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಬ್ಯಾಂಕಿಂಗ್ ವ್ಯವಹಾರಗಳು ಸುಗಮವಾಗಿ ನೆರವೇರುವುದು. ಸಹೋದರರ ಜತೆಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಿ.

ಮಿಥುನ: ಆತ್ಮೀಯರೊಂದಿಗೆ ದುಡುಕಿನ ಮಾತನಾಡಿ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಭೂ ಸಂಬಂಧೀ ವ್ಯವಹಾರಗಳಿಂದ ಲಾಭವಾಗಲಿದೆ. ಉದ್ಯೋಗದ ವಿಚಾರದಲ್ಲಿ ಅಸ್ಥಿರತೆ, ಸಮಸ್ಯೆಗಳು ಎದುರಾಗಬಹುದು. ಎಚ್ಚರಿಕೆಯಿಂದಿರುವುದು ಅಗತ್ಯ.

ಕರ್ಕಟಕ: ಸರಿಯಾದ ಯೋಜನೆಯೊಂದಿಗೆ ಕೆಲಸ ಆರಂಭಿಸಿದರೆ ಯಶಸ್ವಿಯಾಗಿ ಪೂರ್ತಿ ಮಾಡುವಿರಿ. ಸಂಗಾತಿಯ ಸಲಹೆಗಳು ಉಪಯೋಗಕ್ಕೆ ಬರುವುದು. ಬಡ್ಡಿ ವ್ಯವಹಾರಗಳಿಂದ ದೂರವಿರುವುದು ಉತ್ತಮ. ಪ್ರೀತಿ ಪಾತ್ರರೊಂದಿಗೆ ಕಿರು ಪ್ರವಾಸ ಮಾಡುವಿರಿ.

ಸಿಂಹ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗುತ್ತಿದ್ದ ಹಾಗೇ ಶತ್ರುಗಳೂ ಹುಟ್ಟಿಕೊಳ್ಳಲಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಈ ದಿನ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ವೈಯಕ್ತಿಕ ಗುಟ್ಟುಗಳನ್ನು ಬಹಿರಂಗಪಡಿಸಬೇಡಿ. ದೇವರ ಪ್ರಾರ್ಥನೆ ಮಾಡಿ.

ಕನ್ಯಾ: ನಿಮ್ಮ ಕೆಲಸ ಕಾರ್ಯಗಳಲ್ಲಿ ಮರೆವಿನಿಂದ ಅಚಾತುರ್ಯಗಳು ಸಂಭವಿಸುವ ಅಪಾಯವಿದೆ. ಆದಷ್ಟು ಎಚ್ಚರಿಕೆಯಿಂದಿರಿ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ವ್ಯಾಪಾರಿಗಳಿಗೆ ಲಾಭ ಮಾಅಡಿಕೊಳ್ಳಲು ಹೊಸ ದಾರಿಗಳು ಗೋಚರವಾಗಲಿದೆ.

ತುಲಾ: ವ್ಯಾಪಾರ, ವ್ಯವಹಾರ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ಎದುರಾಗಬಹುದು. ಹಿತಮಿತವಾಗಿ ಖರ್ಚು ಮಾಡಿ. ಕಟ್ಟಡ ಕಾಮಗಾರಿ ಉದ್ಯೋಗಿಗಳಿಗೆ ಮುನ್ನಡೆಯಿರಲಿದೆ. ದಾಯಾದಿ ಕಲಹಗಳ ಅಂತ್ಯಕ್ಕೆ ಪ್ರಯತ್ನ ನಡೆಸುವಿರಿ.

ವೃಶ್ಚಿಕ: ವೃತ್ತಿರಂಗದಲ್ಲಿ ನಿಮ್ಮ ಕೆಲಸಗಳು ವಿಳಂಬಗತಿಯಲ್ಲಿ ಸಾಗಬಹುದು. ಆದರೆ ನಿರಾಸೆ ಬೇಕಾಗಿಲ್ಲ. ಆರ್ಥಿಕವಾಗಿ ಹಣಕಾಸಿನ ತೊಂದರೆಗಳು ನಿವಾರಣೆಯಾಗಲಿವೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳನ್ನು ನಡೆಸಲು ಸಿದ್ಧತೆ ನಡೆಸಲಿದ್ದೀರಿ.

ಧನು: ಮಾನಸಿಕವಾಗಿ ಬೇಡದ ವಿಚಾರಗಳಿಗೆ ಚಿಂತೆ ಮಾಡುತ್ತಾ ದೈಹಿಕ ಆರೋಗ್ಯದ ಬಗ್ಗೆ ಉಪೇಕ್ಷೆ ಮಾಡಬೇಡಿ. ವಿನಾಕಾರಣ ಬೇರೆಯವರ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿ. ಬಂಧು ಮಿತ್ರರ ಭೇಟಿ ಮನಸ್ಸಿಗೆ ಖುಷಿ ಕೊಡಲಿದೆ.

ಮಕರ: ಉದ್ಯೋಗ ಕ್ಷೇತ್ರದಲ್ಲಿ ಇದುವರೆಗೆ ನೀವು ಬಯಸಿದಂತಹ ಉತ್ತಮ ಸ್ಥಾನ ಮಾನ ಸಿಗಲಿದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಸಾಹಿತ್ಯ ಕ್ಷೇತ್ರದಲ್ಲಿರುವವರು ಕೀರ್ತಿ ಸಂಪಾದಿಸಲಿದ್ದಾರೆ. ದೈವಾನುಕೂಲದಿಂದ ಇಂದು ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ.

ಕುಂಭ: ಅನಿರೀಕ್ಷಿತವಾಗಿ ಎದುರಾಗುವ ವ್ಯಕ್ತಿಗಳು ಮೇಲ್ನೋಟಕ್ಕೆ ನಿಮಗೆ ಸಹಾಯ ಮಾಡುತ್ತಾರೆ ಎನಿಸಿದರೂ ಅವರಿಂದ ನಷ್ಟ ಅನುಭವಿಸಬೇಕಾದೀತು. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಪತ್ನಿಯೊಡನೆ ಹೊಂದಾಣಿಕೆಯಿಂದಿರಿ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ನೀವು ಬಯಸಿದ ಫಲಿತಾಂಶ ಸಿಗದೇ ಬೇಸರವಾಗಬಹುದು. ಅಂದುಕೊಂಡ ಕೆಲಸಗಳಲ್ಲಿ ವಿಘ್ನಗಳು ಎದುರಾಗಲಿವೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಸಿಗುವುದು. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ