ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 7 ಫೆಬ್ರವರಿ 2020 (08:44 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.



ಮೇಷ: ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ಒದಗಿ ಬರಲಿವೆ. ಜಾಣತನದಿಂದ ಬಳಸಿಕೊಳ್ಳಬೇಕು. ಮೇಲಧಿಕಾರಿಗಳೊಂದಿಗೆ ವೃಥಾ ಕಿರಿ ಕಿರಿ ಮಾಡಿಕೊಳ್ಳಬೇಡಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.

ವೃಷಭ: ಆತ್ಮೀಯರೊಡನೆ ಭಿನ್ನಾಭಿಪ್ರಾಯದಿಂದಾಗಿ ಮನಸ್ಸಿಗೆ ಬೇಸರ ಕಾಡಬಹುದು. ದುಡುಕಿ ಮಾತನಾಡಲು ಹೋಗಬೇಡಿ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗದೇ ನಿರಾಶೆಯಾಗಬಹುದು. ಉಳಿತಾಯದ ಕಡೆಗೆ ಗಮನಹರಿಸಬೇಕು.

ಮಿಥುನ: ವೃತ್ತಿರಂಗದಲ್ಲಿ ವ್ಯವಹರಿಸುವಾಗ ಅಪರಿಚಿತರ ಬಗ್ಗೆ ಎಚ್ಚರವಿರಲಿ. ಆದಾಯ ಉತ್ತಮವಾಗಿದ್ದರೂ ಖರ್ಚೂ ಇರುವುದು. ಸಂಗಾತಿಯ ಮನದಾಸೆ ಪೂರೈಸುವಿರಿ. ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ದೇವತಾ ಪ್ರಾರ್ಥನೆ ಮರೆಯದಿರಿ.

ಕರ್ಕಟಕ: ಅನಿರೀಕ್ಷಿತವಾಗಿ ಖರ್ಚು ವೆಚ್ಚಗಳು ಎದುರಾಗಲಿವೆ. ನಿರ್ಧಾರಗಳನ್ನು ಕೈಗೊಳ್ಳುವಾಗ ಮಾನಸಿಕವಾಗಿ ಗೊಂದಲ ಕಾಡಬಹುದು. ಸಂಗಾತಿಯ ಸಲಹೆಗೆ ಕಿವಿಗೊಡಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ದೂರ ಸಂಚಾರದಲ್ಲಿ ಜಾಗ್ರತೆಯಿರಲಿ.

ಸಿಂಹ: ಪ್ರವಾಸ ಯಾತ್ರೆಗಳನ್ನು ಕೈಗೊಳ್ಳುವ ಯೋಗವಿದೆ. ಇಷ್ಟಮಿತ್ರರ ಭೇಟಿ, ಭೋಜನ ಮನಸ್ಸಿಗೆ ಮುದ ನೀಡಲಿದೆ. ಕೌಟುಂಬಿಕವಾಗಿ ಶುಭ ದಿನವಾಗಿದ್ದು, ಸಂತೋಷ ನೆಲೆ ನಿಲ್ಲಲಿದೆ. ಚಿನ್ನ, ಬೆಳ್ಳಿ ಖರೀದಿ ಯೋಗವಿದೆ. ಮಹಿಳೆಯರಿಗೆ ಆರ್ಥಿಕ ಲಾಭವಾಗಲಿದೆ.

ಕನ್ಯಾ: ಧಾರ್ಮಿಕ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿಯುಂಟಾಗಲಿದೆ. ನೂತನ ದಂಪತಿಗಳಿಗೆ ಮಧು ಚಂದ್ರ ಭಾಗ್ಯವಿದೆ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗುವರು. ಸ್ವಯಂ ತಪ್ಪುಗಳಿಗೆ ಪಶ್ಚತ್ತಾಪಪಡಲಿದ್ದೀರಿ. ವೃತ್ತಿರಂಗದಲ್ಲಿ ತಾಳ್ಮೆ ಮುಖ್ಯ.

ತುಲಾ: ಎಷ್ಟೋ ದಿನದಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ತನ್ನಿಂದ ತಾನೇ ಪರಿಹಾರ ಸಿಗುವುದು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಆದಾಯದಲ್ಲಿ ವೃದ್ಧಿಯಾಗುವುದು. ಖರ್ಚು ವೆಚ್ಚದ ಬಗ್ಗೆ ಕಡಿವಾಣವಿರಲಿ. ಹೊಸ ಗೆಳೆಯರನ್ನು ಸಂಪಾದಿಸುವಿರಿ.

ವೃಶ್ಚಿಕ: ಸಾಂಸಾರಿಕವಾಗಿ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ನಿಧಾನವಾಗಿ ಕರಗಿ ನೆಮ್ಮದಿ ಮೂಡಲಿದೆ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ಥಾನಪಲ್ಲಟವಾಗಲಿದೆ.

ಧನು: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಉತ್ಸಾಹ ಭಂಗ ಮಾಡುವವರು ನಿಮ್ಮ ಬೆನ್ನ ಹಿಂದೆಯೇ ಇರಲಿದ್ದಾರೆ. ಎಚ್ಚರಿಕೆಯಿಂದ ಹೆಜ್ಜೆಯಿಡಿ. ಸಾಂಸಾರಿಕವಾಗಿ ನೆಮ್ಮದಿಗೆ ಕೊರತೆಯಿರದು. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ಪ್ರಯತ್ನಬಲಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಮಕರ: ಅನಿರೀಕ್ಷಿತವಾಗಿ ರೂಪದಲ್ಲಿ ಸಹಾಯ ಒದಗಿಬರಲಿದೆ. ಆದಾಯ ಉತ್ತಮವಿದ್ದು, ಹೊಸ ವಸ್ತುಗಳ ಖರೀದಿ ಮಾಡುವಿರಿ. ಪಾಲು ಬಂಡವಾಳ ಹೂಡಿಕೆ ಮಾಡಲು ಸಕಾಲ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರುವುದು. ಕಿರು ಸಂಚಾರ ಮಾಡಬೇಕಾಗಬಹುದು.

ಕುಂಭ: ಅನವಶ್ಯಕವಾಗಿ ಮಾನಸಿಕ ಉದ್ವೇಗಕ್ಕೊಳಗಾಗಬೇಡಿ. ಕೋಪದ ಕೈಗೆ ಬುದ್ಧಿ ಕೊಟ್ಟು ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಅನಿರೀಕ್ಷಿತವಾಗಿ ಕೆಲಸ ಕಾರ್ಯಗಳು ನೆರವೇರಲಿವೆ. ವೃತ್ತಿರಂಗದಲ್ಲಿ ಬದಲಾವಣೆಗೆ ಮನಸ್ಸು ಮಾಡುವಿರಿ. ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು.

ಮೀನ: ಆಗಾಗ ಆರೋಗ್ಯದಲ್ಲಿ ಏರುಪೇರಾಗಲಿದ್ದು, ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ. ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗಾವಕಾಶಗಳು ಒದಗಿ ಬರಲಿವೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ