ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿವಾರ, 22 ಫೆಬ್ರವರಿ 2020 (08:39 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ಹಲವು ಅಡೆತಡೆಗಳಿದ್ದರೂ ಅದನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಬಾಕಿ ಹಣ ಬಾರದೇ ಚಿಂತೆಯಗಬಹುದು. ಆರೋಗ್ಯದ ಸಮಸ್ಯೆಯಿಂದ ದೇಹ ಹೈರಾಣಾಗಲಿದೆ. ಸಣ್ಣ ಪುಟ್ಟ ವಿಚಾರಗಳಿಗೆ ಕೋಪಗೊಳ್ಳುವುದನ್ನು ಬಿಡಿ. ತಾಳ್ಮೆಯಿರಲಿ.

ವೃಷಭ: ಕಾರ್ಯಕ್ಷೇತ್ರದಲ್ಲಿ ಗುರಿಯೇ ಮುಖ್ಯವಾಗಿರಲಿ. ಬೇರೆ ವಿಚಾರಗಳಿಗೆ ತಲೆಕೆಡಿಸಿಕೊಳ‍್ಳುವುದನ್ನು ಬಿಡಿ. ರಾಜಕೀಯ ವರ್ಗದವರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಸಾಂಸಾರಿಕವಾಗಿ ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸಲು ಮುಂದಾಗುವಿರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಮಿಥುನ: ಸಾಮಾಜಿಕವಾಗಿ ನಿಮ್ಮ ಬುದ್ಧಿವಂತಿಕೆಯಿಂದ ಉನ್ನತ ಸ್ಥಾನ ಮಾನಕ್ಕೇರಬಹುದು. ಮಕ್ಕಳಿಂದ ಉಪಯುಕ್ತ ವಿಚಾರಗಳನ್ನು ತಿಳಿದುಕೊಳ್ಳುವಿರಿ. ಅನಿರೀಕ್ಷಿತವಾಗಿ ಧನಾಗಮನವಾಗಲಿರುವುದರಿಂದ ಸಮಸ್ಯೆಗಳು ನಿವಾರಣೆಯಾಗಲಿವೆ.

ಕರ್ಕಟಕ: ಸಾಂಸಾರಿಕವಾಗಿ ಪತ್ನಿ-ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುವಿರಿ. ನಿಮ್ಮ ಕೆಲಸಗಳಿಗೆ ಕುಟುಂಬದವರ ಬೆಂಬಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದೀತು.

ಸಿಂಹ: ಮಹಿಳೆಯರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ವೈಯಕ್ತಿಕ ಸಮಸ್ಯೆಗಳ ನಿವಾರಣೆಗೆ ಸ್ನೇಹಿತರ ಸಹಾಯ ಪಡೆಯುವಿರಿ. ಸಂಗಾತಿಯ ಮನೋಕಾಮನೆಗಳನ್ನು ಪೂರೈಸುವಿರಿ. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ.

ಕನ್ಯಾ: ಕಾರ್ಯಕ್ಷೇತ್ರದಲ್ಲಿ ವಿಘ‍್ನಗಳು ತೋರಿಬಂದು ಕೈಗೊಂಡ ಕೆಲಸಗಳು ಅರ್ಧಕ್ಕೇ ನಿಲ್ಲಲಿವೆ. ಹಿತಶತ್ರುಗಳ ಕಾಟದಿಂದಾಗಿ ಮಾನಸಿಕ ನೆಮ್ಮದಿಗೆ ಭಂಗವಾದೀತು. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ವ್ಯಾಪಾರ, ವ್ಯವಹಾರದಲ್ಲಿ ಹೂಡಿಕೆ ಮಾಡಲು ಇದು ಸಕಾಲ. ಸಾಂಸಾರಿಕವಾಗಿ ಸಂಗಾತಿಯ ಸಲಹೆ ಸಕಾಲಕ್ಕೆ ಸಿಗುವುದರಿಂದ ಸಮಸ್ಯೆಗಳಿಂದ ಪಾರಾಗುವಿರಿ. ಹಿರಿಯರಿಗೆ ಆಧ‍್ಯಾತ್ಮದ ಕಡೆಗೆ ಒಲವು ಮೂಡಲಿದೆ. ಕಿರು ಸಂಚಾರ ಮಾಡಬೇಕಾಗಬಹುದು.

ವೃಶ್ಚಿಕ: ಮಾನಸಿಕವಾಗಿ ಕಾಡುವ ಗೊಂದಲಗಳಿಗೆ ನೀವೇ ಕಡಿವಾಣ ಹಾಕಿಕೊಳ್ಳಬೇಕು. ಹೊಸ ಚಿಂತನೆಗಳು ಮೂಡಿಬಂದು ಕಾರ್ಯರೂಪಕ್ಕೆ ತರುವಿರಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಧನು: ಉದ್ಯೋಗಸ್ಥರು ಬದಲಾವಣೆಗೆ ಮನಸ್ಸು ಮಾಡುವರು. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗಲಿದೆ. ಆರ್ಥಿಕವಾಗಿ ಆದಾಯದಷ್ಟೇ ಖರ್ಚೂ ಇರುವುದು. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಮಕರ: ಸಾಂಸಾರಿಕವಾಗಿ ನಿಮ್ಮ ಕೆಲವೊಂದು ನಿರ್ಧಾರಗಳು ಮನೆಯ ಇತರ ಸದಸ್ಯರಿಗೆ ಇಷ್ಟವಾಗದೇ ಭಿನ್ನಾಭಿಪ್ರಾಯಗಳು ಬರಬಹುದು. ಸಂಭಾಳಿಸಿಕೊಂಡು ಹೋಗಬೇಕಾಗುತ್ತದೆ. ಉದ್ಯೋಗದಲ್ಲಿ ಮುನ್ನಡೆ ದೊರೆಯಲಿದೆ.

ಕುಂಭ: ಆರ್ಥಿಕವಾಗಿ ಪೈಸೆ ಪೈಸೆಗೂ ಲೆಕ್ಕ ಹಾಕಿ ಖರ್ಚು ಮಾಡಬೇಕಾಗುತ್ತದೆ. ಮುಂದೆ ಬರುವ ಸಮಸ್ಯೆಗಳಿಗೆ ಇಂದೇ ಸಿದ್ಧರಾಗಿ. ನಿರುದ್ಯೋಗಿಗಳಿಗೆ ಅನಿಶ್ಚಿತತೆ ಕಾಡಲಿದೆ. ವಿವಾಹ ಪ್ರಯತ್ನಗಳಿಗೆ ಮುನ್ನಡೆ ಸಿಗಲಿದೆ. ನೂತನ ದಂಪತಿಗಳು ಸಂತೋಷದ ಕ್ಷಣ ಕಳೆಯುವರು.

ಮೀನ: ನಿಮ್ಮ ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಖಂಡಿತಾ. ವೃತ್ತಿರಂಗದಲ್ಲಿ ಹಿತಶತ್ರುಗಳ ಪೀಡೆ ಕಡಿಮೆಯಾಗುವುದು. ಸಂಗಾತಿಯ ಬೇಡಿಕೆ ಇಕ್ಕಟ್ಟಿಗೆ ಸಿಲುಕಿಸಲಿದೆ. ಪ್ರಯತ್ನಕ್ಕೆ ತಕ್ಕ ಫಲ ಸಿಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ