ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 17 ಏಪ್ರಿಲ್ 2020 (09:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಬಳಿ ಇರುವ ಸೌಕರ್ಯದಲ್ಲೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಸಾಂಸಾರಿಕವಾಗಿ ತಾಳ್ಮೆಯಿಂದಿದ್ದರೆ ಸಮಾಧಾನಕರ ವಾತಾವರಣವಿರಲಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ವೃಷಭ: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಕಾರ್ಯರಂಗದಲ್ಲಿ ನಿಮ್ಮ ಉತ್ಸಾಹಕ್ಕೆ ಭಂಗ ತರುವ ಘಟನೆಗಳು ನಡೆಯಬಹುದು. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಕಡೆಗೆ ಗಮನ ಹರಿಸಲಿದ್ದಾರೆ.

ಮಿಥುನ: ಮುಖ್ಯವಾಗಿ ಆರೋಗ್ಯದ ಕಡೆಗೆ ಗಮನಹರಿಸಬೇಕಾಗುತ್ತದೆ. ಪತ್ನಿಯ ಸಲಹೆ, ಸೂಚನೆಗಳು ಉಪಯೋಗಕ್ಕೆ ಬರುವುದು. ವಿದ್ಯಾರ್ಥಿಗಳಿಗೆ ಶುಭ ಸಮಾಚಾರ ಕಾದಿದೆ. ಮನಸ್ಸಿಗೆ ಇಷ್ಟವಾಗುವ ಕೆಲಸ ಮಾಡಲಿದ್ದೀರಿ. ಖರ್ಚಿನ ಬಗ್ಗೆ ನಿಗಾ ಇರಲಿ.

ಕರ್ಕಟಕ: ರಾಜಕೀಯ ರಂಗದಲ್ಲಿರುವವರಿಗೆ ಜವಾಬ್ಧಾರಿ ಹೆಚ್ಚಲಿದೆ. ಕೃಷಿಕರಿಗೆ ಕೃಷಿಕ ಚಟುವಟಿಕೆಯಲ್ಲಿ ಮುನ್ನಡೆ ತೋರಿಬರಲಿದೆ. ಮಹಿಳೆಯರಿಗೆ ಉದ್ಯೋಗ ನಷ್ಟದ ಭೀತಿ ಎದುರಾಗಲಿದೆ. ಬಂಧು ಮಿತ್ರರ ಸಹಕಾರ ಸಿಗಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.

ಸಿಂಹ: ಕೊಂಚ ಎಚ್ಚರ ತಪ್ಪಿದರೂ ನಿಮ್ಮದಲ್ಲದ ತಪ್ಪಿಗೂ ಬೆಲೆ ತೆರಬೇಕಾದೀತು. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ಆರ್ಥಿಕವಾಗಿ ಆದಾಯ ಕುಂಠಿತವಾಗಲಿದೆ. ದೂರ ಸಂಚಾರ ರದ್ದುಪಡಿಸಬೇಕಾಗುತ್ತದೆ.

ಕನ್ಯಾ: ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳನ್ನು ನೆರವೇರಿಸುವಿರಿ. ವಿದ್ಯಾರ್ಥಿಗಳಿಗೆ ದೈವಾನುಗ್ರಹ ಸಿಗಲಿದೆ. ವೃತ್ತಿರಂಗದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಮೇಲ್ವರ್ಗದ ಅಧಿಕಾರಿಗಳಿಗೆ ಮುನ್ನಡೆಯ ಭಾಗ್ಯವಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ವ್ಯಾಪಾರ ವ್ಯವಹಾರದಲ್ಲಿ ಕೊಂಚ ಚೇತರಿಕೆ ಕಂಡುಬರಲಿದ್ದು, ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗಲಿದೆ. ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಉತ್ತಮ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ.

ವೃಶ್ಚಿಕ: ಸಕಾಲದಲ್ಲಿ ಧನಾಗಮನವಾಗುವುದರಿಂದ ಚಿಂತಿತ ಕೆಲಸಗಳನ್ನು ಪೂರ್ತಿ ಮಾಡುವಿರಿ. ಕೆಳ ಹಂತದ ನೌಕರರಿಗೆ ಭವಿಷ್ಯದ ಚಿಂತೆ ಕಾಡಲಿದೆ. ಕುಟುಂಬದಲ್ಲಿ ನಿಮ್ಮ ಕೆಲವೊಂದು ನಿರ್ಧಾರಗಳಿಂದ ಭಿನ್ನಾಭಿಪ್ರಾಯಗಳು ಮೂಡಬಹುದು. ತಾಳ್ಮೆಯಿರಲಿ.

ಧನು: ಮಾನಸಿಕವಾಗಿ ಗೊಂದಲ ಮೂಡಲಿದ್ದು, ನಿರ್ಧಾರ ಕೈಗೊಳ್ಳುವಾಗ ಎಡವುತ್ತೀರಿ. ನಿರುದ್ಯೋಗಿಗಳಿಗೆ ನಿರಾಶೆ ಕಾದಿದೆ. ಸಮಸ್ಯೆಗಳಿಗೆ ನಿಮ್ಮ ಕ್ರಿಯಾಶೀಲತೆಯಿಂದಲೇ ಉತ್ತರ ಕಂಡುಕೊಳ್ಳಲಿದ್ದೀರಿ. ಸಹೋದರರ ಪ್ರೀತಿಗೆ ಭಾಜನರಾಗಲಿದ್ದೀರಿ.

ಮಕರ: ಮುಂದಿನ ಕಷ್ಟದ ದಿನಗಳಿಗೆ ಇಂದೇ ಸಿದ್ಧರಾಗಬೇಕಾಗುತ್ತದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಆರ್ಥಿಕವಾಗಿ ಉತ್ತಮ ಯೋಜನೆ ಹಾಕಿಕೊಳ್ಳಿ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡಬೇಡಿ. ದೇಹಾರೋಗ್ಯದ ಬಗ್ಗೆ ಗಮನಕೊಡಿ.

ಕುಂಭ: ದೊರೆತ ಕಾರ್ಯದಲ್ಲಿ ತೃಪ್ತಿ, ಸಮಾಧಾನ ಪಟ್ಟುಕೊಳ್ಳಬೇಕಾಗುತ್ತದೆ. ವೈವಾಹಿಕ ಸಂಬಂಧದಲ್ಲಿ ಬಿರುಕು ಸಾಧ‍್ಯತೆ, ಹೊಂದಾಣಿಕೆ ಅಗತ್ಯ. ಹಿರಿಯರು ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುವ ಸಂಭವ. ಅತಿಯಾದ ಮಾನಸಿಕ ಒತ್ತಡ ತಂದುಕೊಳ್ಳಲಿ.

ಮೀನ: ಕಿರಿಯರ ಕೆಲವೊಂದು ನಿರ್ಧಾರಗಳು ಹಿರಿಯರ ಮನಸ್ಸಿಗೆ ಪಥ್ಯವಾಗದೇ ಹೋಗಬಹುದು. ನೂತನ ದಂಪತಿಗಳು ಹೊಂದಾಣಿಕೆ ಕೊರತೆ ಅನುಭವಿಸಲಿದ್ದಾರೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ದುಂದು ವೆಚ್ಚ ಬೇಡ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ