ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ, 18 ಮೇ 2020 (08:53 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದುರ್ಜನರ ಸಹವಾಸದಿಂದ ತೊಂದರೆಗೀಡಾಗುವಿರಿ. ಎಚ್ಚರಿಕೆಯ ಹೆಜ್ಜೆಯಿಡಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಸಲಹೆ, ಸೂಚನೆ ಪಾಲಿಸಬೇಕಾಗುತ್ತದೆ. ಹಳೆಯ ಮಿತ್ರರು, ಪ್ರೀತಿ ಪಾತ್ರರ ಭೇಟಿ ಮನಸ್ಸಿಗೆ ಸಂತೋಷ ನೀಡಲಿದೆ.

ವೃಷಭ: ಸಾಂಸಾರಿಕ ಸುಖ ಅನುಭವಿಸಲಿದ್ದೀರಿ. ನಿಮ್ಮ ಮಾತಿಗೆ ಪತ್ನಿಯ ಸಹಮತ ಸಿಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಸ್ಥಾನ ಮಾನದ ಯೋಗವಿದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.

ಮಿಥುನ: ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಾದರೂ ಚಿಂತೆಯಾಗುವುದು. ಹೂಡಿಕೆ ವ್ಯವಹಾರದಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ. ವೃತ್ತಿರಂಗದಲ್ಲಿ ಉನ್ನತಾಧಿಕಾರದ ಯೋಗವಿದೆ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ.

ಕರ್ಕಟಕ: ನೂತನ ದಂಪತಿಗಳಿಗೆ ಹೊಂದಾಣಿಕೆ ಸಮಸ್ಯೆ ಎದುರಾಗಲಿದೆ. ಪ್ರೀತಿ ಪಾತ್ರರ ಅಗಲುವಿಕೆ ಮನಸ್ಸಿಗೆ ಬೇಸರವುಂಟು ಮಾಡಲಿದೆ. ಮೇಲ್ವರ್ಗದ ಅಧಿಕಾರಿಗಳಿಗೆ ಜವಾಬ್ಧಾರಿ ಹೆಚ್ಚಲಿದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಾಣಲಿದ್ದೀರಿ.

ಸಿಂಹ: ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಪ್ರೇಮಿಗಳ ಗುಟ್ಟು ಮನೆಯವರ ಎದುರು ಬಹಿರಂಗಗೊಂಡು ರದ್ದಾಂತವಾಗಬಹುದು. ಆರ್ಥಿಕವಾಗಿ ಸರಿಯಾದ ಲೆಕ್ಕಾಚಾರದೊಂದಿಗೆ ಹೆಜ್ಜೆಯಿಡದೇ ಇದ್ದರೆ ಮುಂದೆ ತೊಂದರೆ ಅನುಭವಿಸಬೇಕಾದೀತು.

 
ಕನ್ಯಾ: ಸಹೋದರರೊಂದಿಗೆ ವಿನಾಕಾರಣ ವಾಗ್ವಾದಕ್ಕಿಳಿಯಬೇಡಿ. ಕುಟುಂಬ ಸದಸ್ಯರೊಂದಿಗೆ ಹೊಸ ಯೋಜನೆಗಳ ಬಗ್ಗೆ ಚರ್ಚಿಸಿ ಮುನ್ನಡೆಯಿರಿ. ಸಾಲಗಾರರ ಕಾಟ ಕಾಡಲಿದೆ. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಕುಲದೇವರ ಪ್ರಾರ್ಥನೆ ಮಾಡಿ.

ತುಲಾ: ಅನವಶ್ಯಕವಾಗಿ ಕೂಡಿಟ್ಟ ಹಣ ಖರ್ಚಾಗಲಿದೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಕೆಲಸ ಕಾರ್ಯಗಳಲ್ಲಿ ತೊಂದರೆ ಕಂಡುಬಂದರೂ ಅಂತಿಮ ಜಯ ನಿಮ್ಮದಾಗಬಹುದು. ಕಾರ್ಯನಿಮಿತ್ತ  ಕಿರು ಸಂಚಾರ ಮಾಡುವಿರಿ. 

ವೃಶ್ಚಿಕ: ಜಠರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಾಡಲಿವೆ. ನಿಮ್ಮ ನಾಲಿಗೆ ಚಪಲಕ್ಕೆ ಕಡಿವಾಣ ಹಾಕಬೇಕಾಗುತ್ತದೆ. ಬಹಳ ದಿನಗಳ ನಂತರ ಮಿತ್ರರ ಭೇಟಿ ಮನಸ್ಸಿಗೆ ಸಂತಸ ನೀಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಲಾಭವಾಗಲಿದೆ. ತಾಳ್ಮೆಯಿರಲಿ.

ಧನು: ಸರಕಾರಿ ಅಧಿಕಾರಿ ವರ್ಗದವರಿಗೆ ಜವಾಬ್ಧಾರಿ ಹೆಚ್ಚಲಿದೆ. ಕೆಲಸ ಕಾರ್ಯಗಳಿಗಾಗಿ ಓಡಾಟ ನಡೆಸುವುದರಿಂದ ದೇಹಾಯಾಸವಾಗಬಹುದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಸಾಂಸಾರಿಕ ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹರಿಸಿಕೊಳ್ಳಬೇಕು.

ಮಕರ: ಪಾಲು ವ್ಯವಹಾರದಲ್ಲಿ ಭಿನ್ನಾಭಿಪ್ರಾಯಗಳಿಂದಾಗಿ ನಷ್ಟವಾಗಬಹುದು. ಹಿತ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಕೆಳ ಹಂತದ ನೌಕರರಿಗೆ ಅನೇಕ ತೊಂದರೆಗಳು ಎದುರಾಗಲಿವೆ. ಸರಿಯಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಮಾನಸಿಕ ಕಿರಿ ಕಿರಿ ಉಂಟಾಗಲಿದೆ. ತಾಳ್ಮೆ, ಸಂಯಮ ಅಗತ್ಯ. ಹಿರಿಯರ ಸಲಹೆ ಸೂಚನೆಗಳನ್ನು ಪಾಲಿಸಿದಲ್ಲಿ ಉತ್ತಮ. ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸಲಿದ್ದೀರಿ. ಆರ್ಥಿಕ ವಿಚಾರದಲ್ಲಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.

ಮೀನ: ವೃತ್ತಿರಂಗದಲ್ಲಿ ನೀವು ಆತುರದಲ್ಲಿ ಕೈಗೊಳ್ಳುವ ನಿರ್ಧಾರಗಳು ಮುಂದೆ ನಿಮಗೇ ತೊಂದರೆ ನೀಡಬಹುದು. ವಿವೇಚನೆಯಿಂದ ಯೋಜನೆ ರೂಪಿಸಿ. ಸಾಮಾಜಿಕ ಕೆಲಸಗಳಿಗೆ ಜನಮನ್ನಣೆ ಸಿಗಲಿದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಮುನ್ನಡೆ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ