ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 14 ಜುಲೈ 2020 (08:59 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಮಸ್ಯೆಗಳು ಮೇಲೆ ತೋರಿಬಂದಷ್ಟು ಸುಲಭವೆನಿಸದು. ಕಠಿಣ ಪರಿಶ್ರಮದಿಂದ ಅಂದುಕೊಂಡ ಗುರಿ ಸಾಧನೆ ಮಾಡುವಿರಿ. ಹಳೆಯ ಮಿತ್ರರಿಂದ ಸಹಾಯವಾಗಲಿದೆ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಆಸ್ತಿ ಸಂಬಂಧ ವ್ಯವಹಾರಗಳಿಂದ ಲಾಭ ಪಡೆಯಬಹುದು. ಆದರೆ ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ವಾಹನ ಸವಾರರಿಗೆ ಚಾಲೆನಯಲ್ಲಿ ಎಚ್ಚರಿಕೆ ಅಗತ್ಯ. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ನಡೆದುಕೊಳ್ಳಿ.

ಮಿಥುನ: ಹಣಕಾಸಿನ ಅಡಚಣೆಗಳು ಕಂಡುಬಂದೀತು. ಆದರೂ ವೃತ್ತಿರಂಗದಲ್ಲಿ ಸಮಾಧಾನಕರ  ವಾತಾವರಣವಿರಲಿದೆ. ದೂರ ಪ್ರಯಾಣ ಅನಿವಾರ್ಯವಾಗಿ ಮುಂದೂಡಬೇಕಾಗುತ್ತದೆ. ಉದ್ಯಮಿಗಳಿಗೆ ತಕ್ಕ ಮಟ್ಟಿಗಿನ ಲಾಭ ಕಂಡುಬರಲಿದೆ. ಅವಸರದ ತೀರ್ಮಾನ ಬೇಡ.

ಕರ್ಕಟಕ: ನಿಮ್ಮ ಕೌಶಲ್ಯ ಪ್ರದರ್ಶಿಸಲು ಇದು ಸೂಕ್ತ ಸಮಯ. ಆದರೆ ನಿರ್ಧಾರ ತೆಗೆದುಕೊಳ್ಳುವಾಗ ಸಾಕಷ್ಟು ಯೋಚನೆ ಮಾಡಿ ಮುಂದಡಿಯಿಡಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದರಿಂದ ಖರ್ಚಿನ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಪ್ರೀತಿ ಪಾತ್ರರಿಂದ ದೂರವಾಗುವ ನೋವು, ಬೇಸರ ಕಾಡಲಿದೆ. ಉದ್ಯೋಗದ ಬಗ್ಗೆ ಚಿಂತೆ ಕಾಡಲಿದೆ. ಧನ ಗಳಿಕೆಗೆ ನಾನಾ ಮಾರ್ಗಗಳನ್ನು ಹುಡುಕಾಡಲಿದ್ದೀರಿ. ಮಹಿಳೆಯರು ಗೃಹಕೃತ್ಯಗಳಲ್ಲಿ ಮುಳುಗಿಹೋಗಲಿದ್ದಾರೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರುವುದು.

ಕನ್ಯಾ: ಚಿಂತಿತ ಕಾರ್ಯಗಳನ್ನು ಕಾರ್ಯ ರೂಪಕ್ಕೆ ತರಲು ಅಡೆತಡೆಗಳು ಬಂದೀತು. ದೇಹಾರೋಗ್ಯದ ಬಗ್ಗೆ ಚಿಂತೆಯಾದೀತು. ಮಾನಸಿಕವಾಗಿ ಋಣಾತ್ಮಕ ಚಿಂತೆಗಳನ್ನು ಬಿಡಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ.

ತುಲಾ: ದೈವಾನುಕೂಲದಿಂದ ವ್ಯವಹಾರಗಳು ಕೈ ಹಿಡಿಯಲಿದ್ದು, ಉದ್ಯೋಗದಲ್ಲಿ ಉತ್ತಮ ಸ್ಥಾನ ಮಾನ ಪಡೆಯಲಿದ್ದೀರಿ. ಅವಿವಾಹಿತರ ವಿವಾಹ ಮಾತುಕತೆಗಳು ಮುಂದೂಡಿಕೆಯಾಗಬಹುದು. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ.

ವೃಶ್ಚಿಕ: ವೃತ್ತಿ ಜೀವನದಲ್ಲಿ ಶಿಸ್ತು ಇಟ್ಟುಕೊಂಡರೆ ಯಾರಿಗೂ ಹೆದರಬೇಕಾಗಿಲ್ಲ. ನಿಮ್ಮ ಕ್ರಿಯಾತ್ಮಕ ಯೋಚನೆಗಳಿಂದ ಬರುವಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಪರಸ್ಥಳಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ಎಚ್ಚರಿಕೆ ಅಗತ್ಯ.

ಧನು: ಅವಿವಾಹಿತರಿಗೆ ತೀವ್ರ ಪ್ರಯತ್ನಪಟ್ಟರೆ ಮಾತ್ರ ಸೂಕ್ತ ವಿವಾಹ ಸಂಬಂಧಗಳು ಕೂಡಿಬರಬಹುದು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಮಾತಿನ ಮೇಲೆ ನಿಗಾ ಇರಲಿ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು. ಚಿಂತೆ ಬೇಡ.

ಮಕರ: ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಹಣ ಗಳಿಕೆಯ ಮಾರ್ಗಗಳು ಗೋಚರವಾಗಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಸಿಗಲಿದೆ. ವೃತ್ತಿರಂಗದಲ್ಲಿ ಉನ್ನತ ಸ್ಥಾನಕ್ಕೇರುವ ಅವಕಾಶವಿದೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶ ಬಳಸಿಕೊಳ್ಳಬೇಕು.

ಕುಂಭ: ಆರ್ಥಿಕವಾಗಿ ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಗೃಹ ರಿಪೇರಿ ಇತ್ಯಾದಿ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸಬೇಕು. ಕುಲದೇವರಿಗೆ ಸಲ್ಲಿಸಬೇಕಾದ ಹರಕೆ ತೀರಿಸಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಮೀನ: ಸಾರ್ವಜನಿಕವಾಗಿ ನೀವು ಕೈಗೊಂಡ ಉತ್ತಮ ಕೆಲಸಗಳು ಗುರುತಿಸಲ್ಪಡುವುದು. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾದೀತು. ವೃತ್ತಿರಂಗದಲ್ಲಿ ಆಲಸ್ಯತನದಿಂದ ಕೆಲಸಗಳಲ್ಲಿ ನಿರಾಸಕ್ತಿ ಮೂಡಲಿದೆ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ