ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 17 ಸೆಪ್ಟಂಬರ್ 2020 (08:56 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಾಂಸಾರಿಕ ಜೀವನದಲ್ಲಿ ಕೊಂಚ ಅಸಮಾಧಾನಗಳು, ಭಿನ್ನಾಭಿಪ್ರಾಯಗಳು ತೋರಿಬಂದೀತು. ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಸೂಕ್ತ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ನಿಮ್ಮ ಹಿತ ಶತ್ರುಗಳ ಹುನ್ನಾರಗಳು ಬಯಲಿಗೆ ಬರಲಿದೆ. ಆರ್ಥಿಕವಾಗಿ ಹಣಕಾಸಿನ ಅಡಚಣೆಗಳಿದ್ದರೂ ನಿಮ್ಮ ಕಾರ್ಯಸಾಧನೆಗೆ ತೊಂದರೆಯಾಗದು. ಹಿರಿಯರ ಪ್ರೀತ್ಯರ್ಥವಾಗಿ ಕೆಲವು ಕೆಲಸ ಮಾಡಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಮಿಥುನ: ವೃತ್ತಿರಂಗದಲ್ಲಿ ನಿಮ್ಮ ಗಮನ ಬೇರೆಡೆ ಸೆಳೆಯುವಂತಹ ಘಟನೆಗಳಾದೀತು. ಮಾನಸಿಕವಾಗಿ ದೃಢವಾಗಿರಬೇಕು. ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ಸುಧಾರಣೆಯಾಗಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ಕರ್ಕಟಕ: ವಾರಂತ್ಯದ ವಿನೋದ ಯಾತ್ರೆಗೆ ತಯಾರಿ ನಡೆಸಲಿದ್ದೀರಿ. ನಿಮ್ಮ ನೇರ ಮಾತುಗಳು ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ನಿಮಗನಿಸಿದ್ದನ್ನು ಮಾಡುವುದರಿಂದ ಮನಸ್ಸಿಗೂ ನೆಮ್ಮದಿ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ಬಂಧು ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಯೋಗ್ಯ ವಯಸ್ಕರಿಗೆ ಸೂಕ್ತ ಸಂಬಂಧ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಕನ್ಯಾ: ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಬಿಡಿ. ವಾದ ವಿವಾದಗಳಿಂದ ದೂರವಿದ್ದರೆ ಉತ್ತಮ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳಾದೀತು. ದೇವತಾ ಪ್ರಾರ್ಥನೆ ಮರೆಯದಿರಿ.

ತುಲಾ: ಆಸ್ತಿ ವಿಚಾರವಾಗಿ ದಾಯಾದಿ ಕಲಹಗಳು ತೋರಿಬಂದೀತು. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಲು ನಿಮ್ಮ ತಾಳ್ಮೆ ಮುಖ್ಯವಾಗುತ್ತದೆ. ಕಾರ್ಯನಿಮಿತ್ತ ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ವೃಶ್ಚಿಕ: ಪ್ರಬುದ್ಧರಾಗಿ ಯೋಚನೆ, ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.

ಧನು: ನಿಮ್ಮ ಜೀವನ ಶೈಲಿ ಬದಲಾಯಿಸುವುದರಿಂದ ಕೆಲವೊಂದು ಲಾಭಗಳಾಗಲಿವೆ. ಕಷ್ಟದ ಸಮಯದಲ್ಲಿ ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸಂಗಾತಿಯ ಮಾತಿಗೆ ಕಿವಿಗೊಡಿ. ಮಕ್ಕಳಿಂದ ಸಂತಸದ ವಾರ್ತೆ ಕೇಳಿಬರಲಿದೆ.

ಮಕರ: ಸಾಂಸಾರಿಕ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಸಂಗಾತಿಯ ಕಷ್ಟಗಳಿಗೆ ಜತೆಯಾಗಲಿದ್ದೀರಿ. ಕ್ರಿಯಾತ್ಮಕ ಯೋಚಿಸುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಉದ್ಯೋಗದಲ್ಲಿ ಸ್ಥಾನಪಲ್ಲಟವಾಗುವ ಸಾಧ‍್ಯತೆಗಳಿವೆ.

ಕುಂಭ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಉಂಟಾಗಬಹುದು. ಇಷ್ಟ ದೇವರ ಪ್ರಾರ್ಥನೆಯಿಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಸುಸ್ರೂತ್ರವಾಗಿ ನಡೆಯಲಿದೆ. ಅನಿರೀಕ್ಷಿತವಾಗಿ ಹಳೆಯ ಮಿತ್ರನ ಭೇಟಿಯಿಂದ ಸಂತಸವಾಗಲಿದೆ.

ಮೀನ: ಸಾಂಸಾರಿಕವಾಗಿ ಕಡಿದುಹೋಗಿದ್ದ ಸಂಬಂಧಗಳು ಮರಳಿ ಬೆಸೆಯಲಿವೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ದೇವತಾ ಪ್ರಾರ್ಥನೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ