ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 23 ಸೆಪ್ಟಂಬರ್ 2020 (08:54 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಾರ್ವಜನಿಕವಾಗಿ ನಿಮ್ಮ ಕೆಲಸಗಳಿಗೆ ಜನಮನ್ನಣೆ ಸಿಗಲಿದೆ. ನಿಮ್ಮ ಮಾತುಗಳಿಗೆ ಗೌರವ ಸಿಗಲಿದೆ. ಸಹೋದ್ಯೋಗಿಗಳ ಕಷ್ಟಗಳಿಗೆ ನೆರವಾಗಲಿದ್ದಾರೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.

ವೃಷಭ: ನಿಮ್ಮ ಮೃದು ಸ್ವಭಾವವನ್ನು ದುರುಪಯೋಗಪಡಿಸಿಕೊಳ್ಳುವವರಿರುತ್ತಾರೆ. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಆರೋಗ್ಯದಲ್ಲಿ ಏರುಪೇರಾಗಲಿದ್ದು, ಕಾಳಜಿ ವಹಿಸಬೇಕು. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಮನಸ್ಸಿನ ಭಾವನೆಗಳಿಗೆ ಬೆಲೆಕೊಡಿ. ನಿಮ್ಮ ಯೋಜನೆಗಳಿಗೆ ವಿಘ್ನಗಳು ಎದುರಾದರೂ ಅಂತಿಮವಾಗಿ ಜಯ ನಿಮ್ಮದಾಗಲಿದೆ. ಮನೆಯಲ್ಲಿ ಪತ್ನಿ-ಮಕ್ಕಳೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವಿನಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ತೋರಿಬರಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ.

ಸಿಂಹ: ಯೋಗ್ಯ ವಯಸ್ಕರಿಗೆ ಶೀಘ್ರವೇ ಉತ್ತಮ ಸಂಬಂಧ ಕೂಡಿಬರಲಿದೆ. ಅನಿವಾರ್ಯ ಕಾರಣಗಳಿಗೆ ದೂರ ಸಂಚಾರ ದಿಡೀರ್ ರದ್ದಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ.

ಕನ್ಯಾ: ದೈವಾನುಕೂಲದಿಂದ ನೀವು ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರಲಿದೆ. ಹಳೆಯ ಮಿತ್ರರ ಭೇಟಿ ಮನಸ್ಸಿಗೆ ಸಂತಸ ನೀಡಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಇಷ್ಟ ಭೋಜನ ಯೋಗವಿದೆ.

ತುಲಾ: ಕಾರ್ಯರಂಗದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಆರ್ಥಿಕವಾಗಿ ಇದುವರೆಗೆ ಇದ್ದ ಹಣಕಾಸಿನ ಸಮಸ್ಯೆಗಳು ದೂರವಾಗಲಿದ್ದು, ಹಂತ ಹಂತವಾಗಿ ಚೇತರಿಕೆ ಕಂಡುಬರಲಿದೆ. ಮನಸ್ಸಿಗೆ ಅಂದುಕೊಂಡಿದ್ದನ್ನು ಮಾಡಲಿದ್ದೀರಿ.

ವೃಶ್ಚಿಕ: ಗೃಹಿಣಿಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ. ಪ್ರೀತಿ ಪಾತ್ರರಿಗೆ ಅನಿರೀಕ್ಷಿತ ಉಡುಗೊರೆ ನೀಡಲಿದ್ದೀರಿ. ಕೌಟುಂಬಿಕವಾಗಿ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಧನು: ಹಿರಿಯರ ಸೇವೆ ಮಾಡುವ ಸೌಭಾಗ್ಯ ಒದಗಿಬರಲಿದೆ. ಆರ್ಥಿಕವಾಗಿ ಕೊಂಚ ಹಣಕಾಸಿನ ಮುಗ್ಗಟ್ಟು ತೋರಿಬಂದರೂ ನಿಮ್ಮ ಕಾರ್ಯ ಸಾಧನೆಗೆ ತೊಂದರೆಯಾಗದು. ಸಂಗಾತಿಯ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಉದಾಸೀನ ಪ್ರವೃತ್ತಿ ಬಿಡುವುದು ಉತ್ತಮ.

ಮಕರ: ಮಕ್ಕಳೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ಮನಸ್ಸಿಗೆ ಉಲ್ಲಾಸ ನೀಡುವ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ಸರಕಾರಿ ಕೆಲಸದಲ್ಲಿರುವವರಿಗೆ ಉದ್ಯೋಗದೊತ್ತಡ ಹೆಚ್ಚಬಹುದು. ಕಿರು ಸಂಚಾರ ಮಾಡಬೇಕಾಗುತ್ತದೆ.

ಕುಂಭ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಅಧಿಕ ಓಡಾಟ ನಡೆಸಬೇಕಾಗುತ್ತದೆ. ಇದರಿಂದಾಗಿ ದೇಹಾಯಾಸವಾಗಬಹುದು. ಶುಭ ಮಂಗಲ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಮೀನ: ಬಂಧು ವರ್ಗದವರಿಂದ ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ವ್ಯಂಗ್ಯದ ಮಾತು ಕೇಳಿಬಂದೀತು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಮುಂದುವರಿಯಿಸಿ. ಹೂಡಿಕೆ ವ್ಯವಹಾರಗಳಿಂದ ಲಾಭ ಪಡೆಯಲಿದ್ದೀರಿ. ಮಹಿಳೆಯರಿಗೆ ಬಿಡುವಿನ ಖುಷಿ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ