ಮೇಷ: ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿಯುಂಟಾಗಿ ಮನಸ್ಸಿಗೆ ನಿರಾಳವಾಗಲಿದೆ. ಆದರೆ ಸಂಗಾತಿಯ ದೇಹಾರೋಗ್ಯ ಮನಸ್ಸಿಗೆ ಕಿರಿ ಕಿರಿ ಉಂಟುಮಾಡಬಹುದು. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚವಾಗಿ ಚಿಂತೆಯಾಗಬಹುದು. ತಾಳ್ಮೆ ಅಗತ್ಯ.
ಮಿಥುನ: ವೃತ್ತಿರಂಗದ ಕೆಲಸ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ನಿವಾರಣೆಯಾಗಲಿವೆ. ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು ತೋರಿಬಂದೀತು. ಪತ್ನಿ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ.
ಕರ್ಕಟಕ: ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡುಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡುಬರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಕಿರು ಓಡಾಟ ನಡೆಸಬೇಕಾಗುತ್ತದೆ.
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನೀವೇ ನಿರ್ಣಾಯಕ ಪಾತ್ರ ವಹಿಸಲಿದ್ದೀರಿ. ನಿಮ್ಮ ಯೋಚನೆಗಳಿಗೆ ಬೆಲೆ ಸಿಗಲಿದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಸಂಗಾತಿಯ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಿ.
ಕನ್ಯಾ: ಹಿರಿಯರೊಂದಿಗೆ ವಾದ ವಿವಾದ ಮಾಡಿಕೊಳ್ಳಬೇಡಿ. ಮಾತಿನ ಮೇಲೆ ನಿಗಾ ಇರಲಿ. ಕೋರ್ಟು ಕಚೇರಿ ವ್ಯವಹಾರಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಅಧಿಕವಾಗಲಿದೆ.
ತುಲಾ: ವ್ಯಾಪಾರ, ವ್ಯವಹಾರದಲ್ಲಿ ಅಡಚಣೆ ಉಂಟಾಗಲಿದೆ. ಆರ್ಥಿಕವಾಗಿ ಲಾಭ ಮಾಡಿಕೊಳ್ಳಲು ಅಡ್ಡಿಗಳು ಎದುರಾದೀತು. ಸಾಲಗಾರರ ಭಯ ಕಾಡುವುದು. ಹಿರಿಯರ ಸಲಹೆಗಳಿಗೆ ಕಿವಿಗೊಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
ವೃಶ್ಚಿಕ: ದಾಯಾದಿ ಕಲಹಗಳಿಂದ ಮನಸ್ಸಿಗೆ ಕಿರಿ ಕಿರಿಯಾಗುವುದು. ಕಾರ್ಮಿಕ ವರ್ಗದವರಿಗೆ ಉದ್ಯೋಗ ಉಳಿಸಿಕೊಳ್ಳುವ ಚಿಂತೆ ಎದುರಾಗಲಿದೆ. ಅಪರಿಚಿತರಿಗೆ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಲುಕುವ ಅಪಾಯವಿದೆ. ತಾಳ್ಮೆಯಿರಲಿ.
ಧನು: ಬಹಳ ದಿನಗಳಿಂದ ಅಂದುಕೊಂಡಿದ್ದ ಕೆಲಸಗಳನ್ನು ಇಂದು ನೆರವೇರಿಸಲಿದ್ದೀರಿ. ಮಕ್ಕಳ ವಿಚಾರದಲ್ಲಿ ಅನಗತ್ಯವಾಗಿ ಚಿಂತೆ ಮಾಡುವುದು ಬೇಡ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗಕ್ಕೆ ತೃಪ್ತಿಪಟ್ಟುಕೊಳ್ಳಬೇಕು.
ಮಕರ: ನೀವು ಆಡುವ ಮಾತಿನಿಂದ ಪ್ರೀತಿ ಪಾತ್ರರ ಮನಸ್ಸಿಗೆ ನೋವಾಗಬಹುದು. ನೂತನ ದಂಪತಿಗಳಿಗೆ ಸಂತೋಷದ ಕ್ಷಣ ಕಳೆಯುವ ಯೋಗ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಕುಂಭ: ದೇವರ ಅನುಗ್ರಹದಿಂದ ನಿಮ್ಮ ಮನೋಕಾಮನೆಗಳು ಅಚ್ಚರಿಯ ರೀತಿಯಲ್ಲಿ ಪೂರ್ತಿಯಾಗಲಿದೆ. ಆರ್ಥಿಕವಾಗಿ ಹಂತ ಹಂತವಾಗಿ ಚೇತರಿಕೆ ಕಂಡುಬರಲಿದೆ. ಕ್ರೀಡಾ ಕ್ಷೇತ್ರದಲ್ಲಿರುವವರು ಸಫಲರಾಗಲಿದ್ದಾರೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
ಮೀನ: ವ್ಯಾಪಾರಿ ವರ್ಗದವರಿಗೆ ತಕ್ಕ ಮಟ್ಟಿನ ಲಾಭ ಕಂಡುಬರಲಿದೆ. ಆದಾಯದ ಮೂಲ ಹೆಚ್ಚಿಸಲು ನಾನಾ ಮಾರ್ಗ ಕಂಡುಕೊಳ್ಳಲಿದ್ದೀರಿ. ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸುವಿರಿ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.