ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 29 ಅಕ್ಟೋಬರ್ 2020 (09:16 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮಾಡುವ ಕೆಲಸದ ಮೇಲೆ ಏಕಾಗ್ರತೆ ವಹಿಸಲು ಕಷ್ಟವಾಗಬಹುದು. ಮನೆಯ ವಿಚಾರಗಳಿಗೆ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆಯುವುದು ಮುಖ್ಯ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಾವಕಾಶಕ್ಕಾಗಿ ಹುಡುಕಾಟ ನಡೆಸಬೇಕಾಗುತ್ತದೆ.

ವೃಷಭ: ಎಷ್ಟೋ ದಿನಗಳಿಂದ ಮಾಡಬೇಕೆಂದಿದ್ದ ಕೆಲಸಗಳಿಗೆ ಇಂದು ಚಾಲನೆ ನೀಡುವಿರಿ. ಹೊಸ ವೃತ್ತಿ ಕಟ್ಟಿಕೊಳ್ಳುವವರಿಗೆ ಉತ್ತಮ ಅವಕಾಶಗಳು ಎದುರಾಗಲಿವೆ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಮಿಥುನ: ವ್ಯಾಪಾರ, ವ್ಯವಹಾರದಲ್ಲಿ ಆರ್ಥಿಕವಾಗಿ ಲಾಭವಾಗಲಿದೆ. ಹೊಸದಾಗಿ ಪರಿಚಯವಾಗುವ ಗೆಳೆಯರಿಂದ ಹೊಸ ಯೋಚನೆ, ಯೋಜನೆಗಳನ್ನು ಕಂಡುಕೊಳ್ಳಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಕರ್ಕಟಕ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶ ಯಾನ ಮಾಡುವ ಅವಕಾಶ ಲಭ್ಯವಾಗಲಿದೆ. ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಹಿರಿಯರಿಗೆ ಸಾಧು ಸಂತರ ಭೇಟಿಯ ಯೋಗವಿದೆ. ಹೆಚ್ಚಿನ ಧನಾರ್ಜನೆಗೆ ನಾನಾ ಮಾರ್ಗ ಹುಡುಕುವಿರಿ.

ಸಿಂಹ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹಿನ್ನಡೆಯ ಭೀತಿ ಎದುರಾಗಲಿದೆ. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ತಪ್ಪದು. ಆದರೆ ಅವರಿಗೆ ನಿಮ್ಮ ಅವಶ್ಯಕತೆಯ ಅರಿವಾಗಲಿದೆ. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಆಸ್ತಿ ಸಂಬಂಧವಾದ ವಿವಾದಗಳು ಬಗೆಹರಿಯಲಿವೆ. ಕಿರು ಸಂಚಾರ ಯೋಗವಿದೆ.

ತುಲಾ: ವ್ಯಾಪಾರ, ವ್ಯವಹಾರದಲ್ಲಿ ಹಣಕಾಸಿನ ಅಡಚಣೆಯಿಂದಾಗಿ ಅಡ್ಡಿ ಆತಂಕಗಳು ಎದುರಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಪ್ರಶಂಸೆ ಸಿಗಲಿದೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗದಿಂದ ಲಾಭ ಕಂಡುಕೊಳ್ಳಬಹುದು.

ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ಮನೆಯಲ್ಲಿ ಕಳ್ಳತನದ ಭೀತಿಯಿದೆ. ಹಿರಿಯರಿಂದ ಬಂದ ಬಳವಳಿಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಹೊಸ ವ್ಯವಹಾರ ಶುರು ಮಾಡಲು ಸಕಾಲ.

ಧನು: ನಿಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೊಳಿಸಲು ಸಕಾಲ. ನಾಟಕೀಯ ವರ್ತನೆ ತೋರುವವರ ಜತೆ ಎಚ್ಚರಿಕೆಯಿಂದ ವ್ಯವಹರಿಸಿ. ಸರಕಾರಿ ಕೆಲಸದಲ್ಲಿರುವವರಿಗೆ ಮುಂಬಡ್ತಿ ಯೋಗವಿದೆ. ಹಿರಿಯರ ಸಲಹೆಯನ್ನು ಪಾಲಿಸಿದರೆ ಉತ್ತಮ.

ಮಕರ: ಬರೀ ಯೋಜನೆಗಳನ್ನೇ ಹಾಕುತ್ತಿದ್ದರೇ ಪ್ರಯೋಜನವಾಗದು. ನಿಮ್ಮ ಪಾಲಿಗೆ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗುವುದು. ಮಹಿಳೆಯರಿಗೆ ಉದ್ಯೋಗದಲ್ಲಿ ಮುನ್ನಡೆಯ ಯೋಗವಿದೆ.

ಕುಂಭ: ಆರ್ಥಿಕವಾಗಿ ಚೇತರಿಕೆ ಕಂಡುಬಂದು ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆಯಿಂದಿರಬೇಕು. ಕ್ರಯ ವಿಕ್ರಯ ವ್ಯವಹಾರಗಳು ಲಾಭ ತಂದುಕೊಡಲಿವೆ. ಸಂಗಾತಿಗಾಗಿ ಚಿನ್ನಾಭರಣ ಖರೀದಿ ಮಾಡಲಿದ್ದೀರಿ.

ಮೀನ: ಸರಿಯಾದ ತಯಾರಿ ನಡೆಸಿ ಹೆಜ್ಜೆಯಿಡುವುದರಿಂದ ಗುರಿ ತಲುಪಬಹುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ಅವಿವಾಹಿತರ ವಿವಾಹ ಪ್ರಸ್ತಾಪಗಳು ಸ್ವಲ್ಪದರಲ್ಲೇ ಕೈ ತಪ್ಪಿಹೋಗಲಿವೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ