ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 10 ಜನವರಿ 2021 (08:58 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಒಳ್ಳೆಯ ವಿಚಾರಗಳಿಗೆ ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಆದರೆ ಒಳ್ಳೆಯತನ ದುರುಪಯೋಗಪಡಿಸಿಕೊಳ್ಳುವವರ ಬಗ್ಗೆ ಎಚ್ಚರಿಕೆಯಿರಲಿ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆಯಿಂದಿರಿ.

ವೃಷಭ: ಮಾನಸಿಕವಾಗಿ ಪ್ರಯಾಸಕರವೆನಿಸುವ ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ನಿಮ್ಮ ಸಂಗಾತಿಯ ಬೆಂಬಲ ನಿಮಗೆ ಸಿಗುವುದು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.

ಮಿಥುನ: ಇಷ್ಟಪಟ್ಟಿದ್ದನ್ನು ಪಡೆಯಬೇಕಾದರೆ ಕಷ್ಟಪಡಲೇಬೇಕಾಗುತ್ತದೆ. ಧನಾದಾಯ ಉತ್ತಮವಾಗಿರಲಿದೆ. ವ್ಯವಹಾರದಲ್ಲಿ ಮುನ್ನಡೆ ಕಂಡುಬರುವುದು. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಪ್ರಸ್ತಾಪಗಳು ಬರಲಿವೆ. ಪ್ರೇಮಿಗಳಿಗೆ ಶುಭ ದಿನ.

ಕರ್ಕಟಕ: ವೈಯಕ್ತಿಕ ವಿಚಾರಗಳನ್ನು ಆಪ್ತೇಷ್ಟರೊಂದಿಗೆ ಹಂಚಿಕೊಳ್ಳಲಿದ್ದೀರಿ. ನಿಮ್ಮ ಮನಸ್ಸಿಗೆ ಖುಷಿ ಕೊಡುವ ಕೆಲಸ ಮಾಡಲಿದ್ದೀರಿ. ಮನೆಗೆ ನೆಂಟರಿಷ್ಟರ ಆಗಮನವಾಗಲಿದೆ. ಮಕ್ಕಳ ಬೇಡಿಕೆ ಪೂರೈಸಲಿ ಧನವ್ಯಯವಾಗಲಿದೆ.

ಸಿಂಹ: ಮಹಿಳೆಯರಿಗೆ ತವರಿನ ಕಡೆಯವರನ್ನು ಭೇಟಿಯಾದ ಸಂತೋಷ ಸಿಗುವುದು. ಅನಿರೀಕ್ಷಿತವಾಗಿ ಹಳೆಯ ಮಿತ್ರರ ಭೇಟಿಯಾಗಲಿದ್ದೀರಿ. ಇಷ್ಟಭೋಜನ ಮಾಡುವ ಯೋಗವಿದೆ. ಆದರೆ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ.

ಕನ್ಯಾ: ಎಂದಿನ ಕಾರ್ಯದೊತ್ತಡಕ್ಕೆ ಕೊಂಚ ಬಿಡುವು ನೀಡಲಿದ್ದೀರಿ. ಪ್ರೀತಿ ಪಾತ್ರರೊಂದಿಗೆ ಸುಂದರ ಸಮಯ ಕಳೆಯಲಿದ್ದೀರಿ. ಹಿರಿಯರಿಗೆ ನಿಮ್ಮ ಮೇಲೆ ಅಭಿಮಾನವುಂಟಾಗಲಿದೆ. ವೈಯಕ್ತಿಕ ಸಂತೋಷದ ಕಡೆಗೆ ಗಮನ ಕೊಡಲಿದ್ದೀರಿ.

ತುಲಾ: ವ್ಯಾಪಾರಿಗಳಿಗೆ ತಮ್ಮ ವ್ಯವಹಾರಗಳಲ್ಲಿ ವಿಘ್ನಗಳು ತೋರಿಬಂದೀತು. ಆದರೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ತಾಳ್ಮೆ ಬೆಳೆಸಿಕೊಳ್ಳಬೇಕು. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ ಭವಿಷ್ಯಕ್ಕೆ ಕೂಡಿಡುವುದು ಉತ್ತಮ.

ವೃಶ್ಚಿಕ: ವ್ಯಾವಹಾರಿಕ ಸಂಬಂಧಗಳು ಇನ್ನಷ್ಟು ಹತ್ತಿರವಾಗಲಿದೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಐಡಿಯಾಗಳು ಹೊಳೆಯಲಿವೆ. ಹಿರಿಯರ ಸಲಹೆಗಳನ್ನು ಉಪೇಕ್ಷೆ ಮಾಡಬೇಡಿ. ಕುಟುಂಬ ಸದಸ್ಯರ ಸಹಕಾರ ನಿಮಗೆ ಸಿಗುವುದು.

ಧನು: ನಿಮ್ಮ ಧಾರಾಳತನವೇ ನಿಮಗೆ ಮುಳುವಾಗಬಹುದು. ಅನ್ಯರ ಕಷ್ಟಕ್ಕೆ ಸ್ಪಂದಿಸಲು ಹೋಗಿ ನೀವೇ ತೊಂದರೆಗೆ ಸಿಲುಕಿಕೊಳ್ಳುವ ಪ್ರಸಂಗ ಎದುರಾದೀತು. ಎಚ್ಚರಿಕೆಯಿರಲಿ. ಆದಾಯಕ್ಕೆ ಕೊರತೆಯಿರದು. ದೇವತಾ ಪ್ರಾರ್ಥನೆ ಮಾಡಿ.

ಮಕರ: ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ವಾಹನ, ಭೂಮಿ ಖರೀದಿ ಮಾಡುವ ನಿಮ್ಮ ಯೋಜನೆಗಳಿಗೆ ಚಾಲನೆ ನೀಡಲಿದ್ದೀರಿ. ಅಪರಿಚಿತರನ್ನು ನಂಬಿ ವ್ಯವಹರಿಸಲು ಹೋಗಬೇಡಿ. ದೇಹಾರೋಗ್ಯದಲ್ಲಿ ಸುಧಾರಣೆಯಾಗುವುದು.

ಕುಂಭ: ಇಷ್ಟಮಿತ್ರರ ಭೇಟಿ, ಭೋಜನ ಮನಸ್ಸಿಗೆ ನೆಮ್ಮದಿ ಕೊಡುವುದು. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಸಂತಾನ ಹೀನ ದಂಪತಿಗಳು ದೇವರ ಮೊರೆಹೋಗಲಿದ್ದಾರೆ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ.

ಮೀನ: ಮಹಿಳೆಯರಿಗೆ ಶೀಘ್ರದಲ್ಲೇ ಚಿನ್ನಾಭರಣ ಖರೀದಿ ಯೋಗವಿದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಆದರೆ ಎಚ್ಚರಿಕೆಯಿಂದ ಖರ್ಚು ಮಾಡಿ. ಮನಸ್ಸಿಗೆ ಇಷ್ಟವಾದವರ ಜೊತೆಗೆ ಭಾವನೆ ಹಂಚಿಕೊಳ್ಳಲಿದ್ದೀರಿ. ಅನಗತ್ಯ ಚಿಂತೆ ಬೇಡ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ