ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 5 ಫೆಬ್ರವರಿ 2021 (08:45 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವಿದ್ಯಾರ್ಥಿಗಳಿಗೆ ತಾವು ಬಯಸಿದ ವಿಚಾರದಲ್ಲಿ ಉನ್ನತ ವ್ಯಾಸಂಗ ಮಾಡುವ ಅವಕಾಶಗಳು ದೊರೆಯಲಿವೆ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಆದರೆ ಇಷ್ಟವಸ್ತುಗಳನ್ನು ಖರೀದಿಸಲು ಅಡ್ಡಿ ಆತಂಕಗಳು ಎದುರಾಗಲಿವೆ.

ವೃಷಭ: ವೃತ್ತಿರಂಗದಲ್ಲಿ ಪ್ರತಿಕೂಲ ವಾತಾವರಣದಿಂದಾಗಿ ನೀವಂದುಕೊಂಡ ಕೆಲಸಗಳು ನೆರವೇರದು. ಆದರೆ ತಾಳ್ಮೆ, ಸಂಯಮವಿರಲಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಕಿರು ಸಂಚಾರ ಮಾಡಬೇಕಾಗುತ್ತದೆ.

ಮಿಥುನ: ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಸ್ಥಾನಕ್ಕೇರುವ ಯೋಗವಿದೆ. ಸರಕಾರಿ ನೌಕರರಿಗೆ ನಿಮ್ಮ ಸ್ಥಾನವರ್ಧನೆಗೆ ಅವಕಾಶಗಳು ಸಿಗಲಿವೆ. ಆರ್ಥಿಕವಾಗಿ ಹಣಕಾಸಿನ ವಿಚಾರದಲ್ಲಿ ಅನಗತ್ಯ ಖರ್ಚುಗಳಾಗದಂತೆ ಎಚ್ಚರಿಕೆ ವಹಿಸಿ.

ಕರ್ಕಟಕ: ಪಾಲು ಬಂಡವಾಳ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಕೆಲವು ದಿನ ಕಾಯುವುದು ಉತ್ತಮ. ಕಾರ್ಯಕ್ಷೇತ್ರದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ದಾರಿಗಳು ಕಂಡುಬರಲಿವೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಸಿಂಹ: ಕಾರ್ಯಕ್ಷೇತ್ರದಲ್ಲಿ ಸ್ಥಾನ ಮಾನಕ್ಕೆ ತೊಂದರೆಯಾಗದು. ಆದರೆ ಹೊಸ ಜವಾಬ್ಧಾರಿಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಹಿರಿಯರಿಗೆ ದೇಹಾರೋಗ್ಯದಲ್ಲಿ ಏರುಪೇರಾದೀತು. ಕಾಳಜಿ ಅಗತ್ಯ.

ಕನ್ಯಾ: ನಿಮ್ಮ ಕೋಪ ತಾಪಕ್ಕೆ ಕೊಂಚ ಕಡಿವಾಣ ಹಾಕುವುದು ಉತ್ತಮ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದ್ದು, ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ತುಲಾ: ಸಾಂಸಾರಿಕವಾಗಿ ಹೊಸ ಅತಿಥಿಗಳ ಸ್ವಾಗತಕ್ಕೆ ಸಿದ್ಧರಾಗಲಿದ್ದೀರಿ. ಶುಭ ಮಂಗಲ ಕಾರ್ಯಗಳಿಗಾಗಿ ಸಿದ್ಧತೆ ನಡೆಸಲಿದ್ದೀರಿ. ಕೃಷಿಕರಿಗೆ ವ್ಯವಹಾರದಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗದು. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗ.

ವೃಶ್ಚಿಕ: ನಿಮ್ಮ ಬಹುದಿನಗಳ ಕನಸು ನನಸಾಗಿಸಲು ಪ್ರಯತ್ನಿಸಲಿದ್ದೀರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುನ್ನಡೆಗೆ ಸಹಕಾರಿಯಾಗಬಲ್ಲ ಅವಕಾಶಗಳು ಬರಲಿವೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗ ಮಾಡುವುದರಿಂದ ಲಾಭ ಕಂಡುಕೊಳ್ಳಬಹುದು.

ಧನು: ಸಮಾಧಾನ ಚಿತ್ತದಿಂದ ಯೋಚನೆ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ವೈಯಕ್ತಿಕ ವಿಚಾರಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುವ ಮೊದಲು ಎಚ್ಚರಿಕೆ ವಹಿಸಿ. ಸಂಗಾತಿಗೆ ಸೂಕ್ತ ಸಲಹೆ ನೀಡಲಿದ್ದೀರಿ.

ಮಕರ: ಅಧಿಕಾರಿ ವರ್ಗದವರಿಂದ ಕಿರಿ ಕಿರಿ ತಪ್ಪದು. ಆದರೆ ನಿಮ್ಮ ಮುನ್ನಡೆಯನ್ನು ಯಾರಿಂದಲೂ ತಡೆಯಲು ಸಾಧ‍್ಯವಿಲ್ಲ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಅಗತ್ಯ. ಪ್ರೇಮಿಗಳು ಮನೆಯವರ ಎದುರು ಪ್ರೇಮ ವಿಚಾರ ಹೇಳಿಕೊಳ್ಳಲಿದ್ದಾರೆ.

ಕುಂಭ: ಮನೆಯಲ್ಲಿ ಸಂಭ್ರಮದ ವಾತಾವರಣಿರಲಿದ್ದು, ಅತಿಥಿಗಳ ಆಗಮನವಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಸಂತಾನಹೀನ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಮೀನ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಮನೆ, ಕಟ್ಟಡ ಕಾಮಗಾರಿ ನಿರ್ಮಾಣ ಕೆಲಸಗಳಿಗೆ ಚಾಲನೆ ನೀಡಲು ಸಕಾಲ. ಮಹಿಳೆಯರಿಗೆ ಕೌಟುಂಬಿಕ ಜವಾಬ್ಧಾರಿಗಳು ಹೆಚ್ಚಲಿವೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ