ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 24 ಫೆಬ್ರವರಿ 2021 (08:45 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮನಸ್ಸಿನಲ್ಲಿ ಕೊರೆಯುತ್ತಿರುವ ಕೆಲವೊಂದು ವಿಚಾರಗಳು ನಿಮ್ಮ ಆತಂಕ ಹೆಚ್ಚಿಸಲಿವೆ. ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ವೃಷಭ: ಅಪರಿಚಿತರೊಡನೆ ಅನಗತ್ಯ ಸ್ನೇಹ ಮಾಡಿಕೊಳ್ಳಲು ಹೋಗದಿರುವುದೇ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸ್ಥಾನ ಮಾನಗಳನ್ನು ಯಾರೂ ಕಸಿದುಕೊಳ್ಳಲು ಆಗದು. ವಿದ್ಯಾರ್ಥಿಗಳಿಗೆ ಮುನ್ನಡೆಗೆ ಅವಕಾಶ ತೋರಿಬರಲಿದೆ.

ಮಿಥುನ: ನಿಮ್ಮ ಇಚ್ಛೆಗೆ ಅನುಸಾರವಾಗಿ ಎಲ್ಲಾ ಕೆಲಸಗಳು ನಡೆಯಬೇಕೆಂದು ಬಯಸುವುದು ತಪ್ಪಾಗುತ್ತದೆ. ಅತಿಯಾದ ನಿರೀಕ್ಷೆಯೂ ನಿರಾಸೆಗೆ ಕಾರಣವಾದೀತು. ಆರ್ಥಿಕವಾಗಿ ಹಣ ಗಳಿಕೆಗೆ ನಾನಾ ಮಾರ್ಗಗಳು ಕಂಡುಕೊಳ್ಳಲಿದ್ದೀರಿ.

ಕರ್ಕಟಕ: ವೃತ್ತಿರಂಗದಲ್ಲಿ ಹೊಸ ಜನರ ಭೇಟಿಯಿಂದ ನಿಮ್ಮ ಕಾರ್ಯಸಾಧನೆ ಸುಗಮವಾಗಲಿದೆ. ಇಷ್ಟ ಮಿತ್ರರೊಂದಿಗೆ ಇಷ್ಟ ಭೋಜನ, ಪ್ರವಾಸಕ್ಕೆ ತೆರಳುವ ಕನಸು ಸದ್ಯದಲ್ಲೇ ನನಸಾಗುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಸಿಂಹ: ಸಾಮಾಜಿಕ ರಂಗದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಾಗುವುದು. ನಿಮ್ಮ ಕ್ರಿಯಾಶೀಲ ಕೆಲಸಗಳಿಗೆ ಜನಮನ್ನಣೆ ಸಿಗಲಿದೆ. ಹಿತಶತ್ರುಗಳ ಕಾಟದಿಂದ ಪಾರಾಗಲಿದ್ದೀರಿ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಯಾರನ್ನೂ ನಂಬದ ಸ್ಥಿತಿ ನಿಮ್ಮದಾಗುವುದು. ಮೇಲಧಿಕಾರಿಗಳಿಂದ ಸಿಕ್ಕ ಆಶ್ವಾಸನೆಗಳು ಸುಳ್ಳು ಎನಿಸಬಹುದು. ಆದರೆ ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ. ನಿಮ್ಮ ಪ್ರತಿಭೆಗೆ ತಕ್ಕ ಬೆಲೆ ಸಿಕ್ಕೇ ಸಿಗುತ್ತದೆ.

ತುಲಾ: ಹೊಸದಾಗಿ ಹೊಳೆಯುವ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುವಿರಿ. ಅನವಶ್ಯಕ ಮಾತಿನಿಂದ ಸಂಗಾತಿಯ ಕೋಪಕ್ಕೆ ಗುರಿಯಾಗದಿರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ವೃಶ್ಚಿಕ: ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಗೆ ಅವಕಾಶಗಳು ಒದಗಿಬರಲಿವೆ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಬೇಕಾದರೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಸಾಂಸಾರಿಕವಾಗಿ ಇದುವರೆಗೆ ಇದ್ದ ಸಮಸ್ಯೆ ಸರಿಪಡಿಸಿಕೊಳ್ಳುವಿರಿ.

ಧನು: ವ್ಯಾಪಾರ, ವ್ಯವಹಾರದಲ್ಲಿ ಲಾಭದಾಯಕ ದಿನಗಳಿವು. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ್ದು, ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗ ಸದ್ಯದಲ್ಲೇ ಕೂಡಿಬರುವುದು.

ಮಕರ: ಪ್ರೀತಿ ಪಾತ್ರರನ್ನು ಭೇಟಿ ಮಾಡಲಿದ್ದೀರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಸಿದ್ಧತೆ ನಡೆಯಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ದೇವರ ಪ್ರಾರ್ಥನೆ ಮಾಡಿ.

ಕುಂಭ: ವೃತ್ತಿರಂಗದಲ್ಲಿ ಮುನ್ನಡೆಯಬೇಕೆಂದಾಗ ಕೆಲವೊಂದು ಅಡ್ಡಿ ಆತಂಕಗಳು ಎದುರಾದೀತು. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ತಾಳ್ಮೆಯಿರಲಿ. ಮಕ್ಕಳ ದೇಹಾರೋಗ್ಯದಲ್ಲಿ ಏರುಪೇರಾದೀತು, ಎಚ್ಚರಿಕೆ ವಹಿಸಿ.

ಮೀನ: ನಿರ್ಧಾರ ಕೈಗೊಳ್ಳುವಾಗ ಗೊಂದಲ ಕಾಡಿಬಂದೀತು. ಹಿರಿಯರ ಸಮಯೋಚಿತ ಸಲಹೆ ಉಪಯೋಗಕ್ಕೆ ಬರುವುದು. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡುಬಂದೀತು. ಚಿಂತೆ ಬೇಡ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ