ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 30 ಮಾರ್ಚ್ 2021 (08:50 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೈಚಾರಿಕವಾಗಿ ಭಿನ್ನತೆಯಿದ್ದರೂ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಏಳಿಗೆಗೆ ಪೂರಕವಾದ ಬೆಳವಣಿಗೆಗಳು ನಡೆಯಲಿವೆ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು.

ವೃಷಭ: ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಉದ್ಯೋಗ ಸಂಬಂಧೀ ಅಡೆತಡೆಗಳು ನಿವಾರಣೆಯಾಗಲಿವೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರುವುದು. ತಾಳ್ಮೆಯಿರಲಿ.

ಮಿಥುನ: ನಿಮ್ಮ ಏಳಿಗೆಗೆ ಅಡ್ಡಿ ಉಂಟುಮಾಡುವವರನ್ನು ಎದುರಿಸಲು ಕಲಿಯಬೇಕು. ಸರಕಾರಿ ಕೆಲಸದಲ್ಲಿರುವವರಿಗೆ ಕಾರ್ಯದೊತ್ತಡವಿದ್ದೀತು. ಮಹಿಳೆಯರಿಗೆ ಮುಖ್ಯವಾಗಿ ತಾಳ್ಮೆ ಅಗತ್ಯ. ದುಡುಕು ಮಾತಿನಿಂದ ಸಂಬಂಧ ಹಾಳುಮಾಡಿಕೊಳ್ಳಬೇಡಿ.

ಕರ್ಕಟಕ: ಒಳ್ಳೆಯ ಕೆಲಸಗಳಿಗೆ ಕೈ ಹಾಕಲು ಎಷ್ಟೋ ದಿನದಿಂದ ಕಾಯುತ್ತಿದ್ದ ಶುಭ ಗಳಿಗೆ ಇಂದು ಕೂಡಿಬರಲಿದೆ. ಪ್ರೀತಿಪಾತ್ರರ ಸಲಹೆ, ಸೂಚನೆಗಳು ಉಪಯೋಗಕ್ಕೆ ಬಂದೀತು. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ.

ಸಿಂಹ: ಪಿತೃ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಹಿವಹಿಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮ ಕಾರ್ಯಸಾಧನೆಯಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ನಿಮ್ಮ ಇಷ್ಟ-ಕಷ್ಟಗಳಿಗೆ ಸಂಗಾತಿ ಹೆಗಲುಕೊಡಲಿದ್ದಾರೆ. ಯಾವುದೇ ವಿಚಾರವಾದರೂ ಕುಟುಂಬದವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಬೇರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ.

ತುಲಾ: ಮನಸ್ಸಿನ ಮಾತುಗಳನ್ನು ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಲಿದ್ದೀರಿ. ವ್ಯಾವಹಾರಿಕವಾಗಿ ನಿಮ್ಮ ಕೆಲಸಗಳು ಯಶಸ್ವಿಯಾಗಲಿವೆ. ಕೋರ್ಟು ಕಚೇರಿ ಕೆಲಸಗಳಲ್ಲಿ ಮುನ್ನಡೆ ಸಿಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ವೃಶ್ಚಿಕ: ನಿಮ್ಮ ವೈಯಕ್ತಿಕ ಅಭಿಪ್ರಾಯಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಬೆಲೆ ಸಿಗದೇ ನಿರಾಸೆಯಾದೀತು. ಮೇಲಧಿಕಾರಿಗಳ ಸಲಹೆ ಪಾಲಿಸುವುದು ಉತ್ತಮ. ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯ ಯೋಗವಿದೆ. ತಾಳ್ಮೆಯಿರಲಿ.

ಧನು: ನಿಮ್ಮ ಅವಕಾಶ ಬರುವವರೆಗೂ ಕಾಯಬೇಕಾಗುತ್ತದೆ. ವಿದ್ಯಾರ್ಥಿಗಳು ಹೊಸ ಸವಾಲುಗಳನ್ನು ಎದುರಿಸಲಿದ್ದಾರೆ. ಕೃಷಿಕರಿಗೆ ವ್ಯವಹಾರದಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗದು. ಅಧಿಕ ಖರ್ಚು ವೆಚ್ಚಗಳಿಗೆ ನಿಯಂತ್ರಣ ವಿಧಿಸಿ.

ಮಕರ: ಮನೋಭಿಲಾಷೆ ಪೂರೈಸಲು ಖರ್ಚು ವೆಚ್ಚಗಳಾದೀತು. ಆದಾಯಕ್ಕೆ ಹೊಸ ಮೂಲಗಳನ್ನು ಹುಡುಕಲಿದ್ದೀರಿ. ಸಂಗಾತಿಯ ಕೆಲವೊಂದು ಮಾತುಗಳು ನಿಮ್ಮಲ್ಲಿ ಅಸಮಾಧಾನ ತಂದೀತು. ಮಂಗಲ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ಕುಂಭ: ಮಹಿಳೆಯರಿಗೆ ತವರಿನ ಕಡೆಯಿಂದ ಶುಭ ಸಮಾಚಾರ ಕೇಳಿಬಂದೀತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಹೊಡೆತ ಬೀಳಲಿದೆ. ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ.

ಮೀನ: ಉದ್ಯೋಗ ಕ್ಷೇತ್ರದಲ್ಲಿನ ಅಸಮಾಧಾನಗಳನ್ನು ಮನೆಯವರ ಮೇಲೆ ತೋರಿಸಲು ಹೋಗಬೇಡಿ. ಇದರಿಂದ ಕೌಟುಂಬಿಕ ನೆಮ್ಮದಿ ಹಾಳಾದೀತು. ನೆರೆಹೊರೆಯವರಿಂದ ಕಷ್ಟದ ಸಮಯದಲ್ಲಿ ನೆರವು ಸಿಗಲಿದೆ. ಚಿಂತೆ ಬೇಡ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ