ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 28 ಏಪ್ರಿಲ್ 2021 (09:13 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಶುಭ ಕಾರ್ಯಗಳಿಗೆ ವಿಘ್ನ ಭಯ ತೋರಿಬರಲಿದೆ. ಮನೆಯಲ್ಲಿ ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾದೀತು. ಸಾಂಸಾರಿಕವಾಗಿ ಅನಗತ್ಯ ವಿಚಾರಗಳು ನೆಮ್ಮದಿ ಹಾಳುಮಾಡೀತು. ಮಾತಿನ ಮೇಲೆ ಸಂಯಮವಿರಲಿ.

ವೃಷಭ: ಅಗತ್ಯಕ್ಕೆ ತಕ್ಕಂತೆ ಅವಕಾಶಗಳು ಸಿಗದೇ ನಿರುದ್ಯೋಗಿಗಳಿಗೆ ನಿರಾಸೆಯಾದೀತು. ಸ್ವಯಂ ವ್ಯಾಪಾರಿಗಳಿಗೆ ವ್ಯವಹಾರಕ್ಕೆ ಅಡೆತಡೆಯಾಗಲಿದೆ. ಭವಿಷ್ಯದ ಬಗ್ಗೆ ಚಿಂತೆಯಾದೀತು. ದೂರ ಸಂಚಾರವನ್ನು ರದ್ದುಗೊಳಿಸಲಿದ್ದೀರಿ.

ಮಿಥುನ: ವೃತ್ತಿರಂಗದಲ್ಲಿ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ತೋರಿಬರಲಿದೆ. ಬಳಸಿಕೊಳ್ಳಿ.

ಕರ್ಕಟಕ: ಸಾಂಸಾರಿಕವಾಗಿ ಹೊಸ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಸರಕಾರಿ ಉದ್ಯೋಗಿಗಳಿಗೆ ಹಿನ್ನಡೆಯಾದೀತು.

ಸಿಂಹ: ಅಂದುಕೊಂಡ ಕೆಲಸ ಕಾರ್ಯಗಳು ನೆರವೇರದೇ ಹತಾಶೆಯಾದೀತು. ಸಾಂಸಾರಿಕವಾಗಿ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಮನಸ್ಸಿನ ಮಾತುಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಲಿದ್ದೀರಿ.

ಕನ್ಯಾ: ಕಾರ್ಯಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಂಡುಬರಲಿದೆ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳು ಕಂಡುಬರಲಿವೆ. ಭೂಮಿ, ವಾಹನ ಖರೀದಿ ವ್ಯವಹಾರಗಳನ್ನು ಮುಂದೂಡುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಸತತವಾಗಿ ಪ್ರಯತ್ನಪಟ್ಟಲ್ಲಿ ಕಾರ್ಯಗಳು ಸುಗಮವಾಗಿ ನೆರವೇರಲಿದೆ. ಹಣಕಾಸಿನ ಹರಿವಿದ್ದರೂ ಅಷ್ಟೇ ಖರ್ಚು ವೆಚ್ಚಗಳಾಗಲಿವೆ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿ.

ವೃಶ್ಚಿಕ: ಅಂದುಕೊಂಡ ಕೆಲಸಗಳನ್ನು ಅನಿವಾರ್ಯವಾಗಿ ಮುಂದೂಡಬೇಕಾದೀತು. ರಾಜಕೀಯ ವರ್ಗದವರಿಗೆ ಕಾರ್ಯದೊತ್ತಡ ಅಧಿಕವಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದೀತು. ಸಾಲಗಾರರಿಂದ ಮುಕ್ತಿ.

ಧನು: ಎಷ್ಟೇ ಸಮಾಧಾನವಿದ್ದರೂ, ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಯಾಗಲಿದೆ. ಅಧಿಕ ಓಡಾಟದಿಂದ ದೇಹಾಯಾಸವಾದೀತು. ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ತಾಳ್ಮೆಯಿರಲಿ.

ಮಕರ: ಕಳೆದು ಹೋದ ಸಂಬಂಧಗಳು ಮರಳಿ ಕೂಡಿಕೊಳ್ಳಲಿವೆ. ಸಾಂಸಾರಿಕವಾಗಿ ನೆಮ್ಮದಿಯ ದಿನವಾಗಲಿದೆ. ಆದರೆ ಕಾರ್ಯಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ಅರ್ಧಕ್ಕೇ ಸ್ಥಗಿತಗೊಳ್ಳಲಿವೆ. ಭವಿಷ್ಯದ ಬಗ್ಗೆ ಚಿಂತೆಯಾದೀತು.

ಕುಂಭ: ವ್ಯಾಪಾರ, ವ್ಯವಹಾರದಲ್ಲಿ ಏರುಪೇರು ಕಂಡುಬರಲಿದೆ. ಶುಭ ಮಂಗಲ ಕಾರ್ಯಗಳನ್ನು ನೆರವೇರಿಸಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುವ ಯೋಗವಿದೆ. ನಿಮ್ಮ ದೈನಂದಿನ ಕೆಲಸಕ್ಕೆ ಅಡೆತಡೆಯಾದೀತು.

ಮೀನ: ಸಂಗಾತಿಯ ದೇಹಾರೋಗ್ಯ ಚಿಂತೆಗೆ ಕಾರಣವಾಗಲಿದೆ. ಬಂಧು ಮಿತ್ರರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ