ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ, 10 ಮೇ 2021 (08:55 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಏನೇ ಮಾಡಿದರೂ ನಿತ್ಯದ ಚಿಂತೆ ತಪ್ಪದು. ದೈನಂದಿನ ಕೆಲಸಗಳಿಂದ ದೇಹ ಹೈರಾಣಾಗಲಿದೆ. ಕೌಟುಂಬಿಕವಾಗಿ ತಾಳ್ಮೆಯಿಂದ ಮಾತು, ನಡೆ ಇದ್ದರೆ ಸಮಸ್ಯೆಯಾಗದು. ಆರ್ಥಿಕವಾಗಿ ಖರ್ಚು ವೆಚ್ಚಗಳು ಚಿಂತೆಗೆ ಕಾರಣವಾಗಲಿದೆ.

ವೃಷಭ: ಪ್ರತಿ ಹಂತದಲ್ಲೂ ವಿವೇಚನೆಯಿಂದ ಕೆಲಸ ಮಾಡಬೇಕಾದ ಅಗತ್ಯವಿದೆ. ಕೆಲಸ ಕಾರ್ಯಗಳಲ್ಲಿ ವಿಳಂಬಗತಿ ತೋರಿಬರಲಿದೆ. ಹಣಕಾಸಿನ ಹರಿವು ಕಡಿಮೆಯಾಗಲಿದೆ. ಭವಿಷ್ಯದ ಬಗ್ಗೆ ಎಚ್ಚರಿಕೆಯ ಹೆಜ್ಜೆಯಿಡಬೇಕು.

ಮಿಥುನ: ಮೇಲ್ವರ್ಗದ ಅಧಿಕಾರಿಗಳಿಗೆ ವೃತ್ತಿರಂಗದಲ್ಲಿ ಮುನ್ನಡೆಯ ಯೋಗವಿದೆ. ಕೂಡಿಟ್ಟ ಹಣ ಖರ್ಚಾಗಲಿದೆ. ವಿದ್ಯಾರ್ಥಿಗಳ ಭವಿಷ್ಯ ಅಂತ್ರವಾದೀತು. ದೈಹಿಕ ಆರೋಗ್ಯವನ್ನು ಕಡೆಗಣಿಸದಿರಿ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಅವಿವಾಹಿತರಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಧೈರ್ಯದಿಂದ ಮುನ್ನಡೆದರೆ ಯಶಸ್ಸು ಸಾಧ್ಯ. ಕೃಷಿಕರಿಗೆ ಸಣ್ಣ ಮಟ್ಟಿನ ಲಾಭವಾದೀತು.

ಸಿಂಹ: ಆದಾಯ ವೃದ್ಧಿಯಿಂದ ಮನಸ್ಸಿಗೆ ಸಂತಸವಾದೀತು. ಕೌಟುಂಬಿಕವಾಗಿ ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡೀತು.

ಕನ್ಯಾ: ಮಕ್ಕಳ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಸಂಗಾತಿಯ ಸಲಹೆಗಳು ಉಪಯೋಗಕ್ಕೆ ಬರಲಿವೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಯೋಗವಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ಸಂತಸವಾಗಲಿದೆ.

ತುಲಾ: ಅರ್ಧಕ್ಕೇ ನಿಂತಿದ್ದ ಕೆಲಸಗಳಿಗೆ ಮರು ಚಾಲನೆ ನೀಡಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಮಾಡಿಕೊಡದಿರಿ. ತಾಳ್ಮೆಯಿರಲಿ.

ವೃಶ್ಚಿಕ: ಕಳೆದು ಹೋದ ವಸ್ತುಗಳ ಆಕಸ್ಮಿಕವಾಗಿ ಕೈಗೆ ಸಿಗಲಿದೆ. ಪ್ರೀತಿ ಪಾತ್ರರ ಭೇಟಿಗಾಗಿ ಮನಸ್ಸು ಹಾತೊರೆಯಲಿದೆ. ಪ್ರೇಮಿಗಳಿಗೆ ಅಗಲುವಿಕೆಯ ನೋವು ಕಾಡಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಧನು: ನಿಮಗೆ ಪ್ರೀತಿ ಪಾತ್ರರು ಎನಿಸಿಕೊಂಡವರ ಬಗ್ಗೆ ಚಾಡಿ ಮಾತು ಕೇಳಿಬಂದೀತು. ನೆರೆಹೊರೆಯವರೊಂದಿಗೆ ನೀರಿಗಾಗಿ ಸಂಘರ್ಷವಾದೀತು. ತಾಳ್ಮೆ, ಸಂಯವಿರಲಿ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ವಹಿಸಬೇಕು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ನಿಮ್ಮ ಬೆನ್ನ ಹಿಂದೆ ಪಿತೂರಿ ನಡೆಸುತ್ತಿದ್ದ ಶತ್ರುಗಳು ನಾಶವಾಗಲಿದ್ದಾರೆ. ನಿಮ್ಮ ಒಳ್ಳೆಯ ಕೆಲಸಗಳಿಗೆ ತಕ್ಕ ಮನ್ನಣೆ ಸಿಗುವುದು. ಕಷ್ಟದಲ್ಲಿರುವ ಮಿತ್ರರಿಗೆ ಸಹಾಯ ಮಾಡಲಿದ್ದೀರಿ. ಕಾರ್ಯನಿಮಿತ್ತ ಕಿರು ಓಡಾಟ ನಡೆಸುವಿರಿ.

ಕುಂಭ: ಕ್ರಿಯಾಶೀಲ ಕೆಲಸಗಳಿಂದ ಮನಸ್ಸಿಗೂ ದೇಹಕ್ಕೂ ಉಲ್ಲಾಸ ಸಿಗಲಿದೆ. ಬಂಧುಮಿತ್ರರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಶುಭ ಮಂಗಲ ಕಾರ್ಯಗಳನ್ನು ಅನಿವಾರ್ಯವಾಗಿ ಮುಂದೂಡಲಿದ್ದೀರಿ. ತಾಳ್ಮೆಯಿರಲಿ.

ಮೀನ: ಕುಟುಂಬದ ಒಳಿತಿಗಾಗಿ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಡಬೇಕಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಸಂಗಾತಿಯ ಕಷ್ಟಗಳಿಗೆ ಹೆಗಲು ಕೊಡಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ