ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 29 ಸೆಪ್ಟಂಬರ್ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೆಲಸ ಕಾರ್ಯಗಳಲ್ಲಿ ನಿಮ್ಮದೇ ಮುಂದಾಳತ್ವವಿರಲಿದೆ. ಸರಕಾರಿ ಕೆಲಸದವರಿಗೆ ಕಾರ್ಯದೊತ್ತಡ ಕಂಡುಬಂದೀತು. ಕೊಡು-ಕೊಳ್ಳುವಿಕೆ ವ್ಯವಹಾರದಲ್ಲಿ ನಿಮ್ಮ ಜಾಣತನ ಪ್ರದರ್ಶಿಸಬೇಕು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.

ವೃಷಭ: ಪ್ರೀತಿ ಪಾತ್ರರನ್ನು ಭೇಟಿಯಾಗಲು ಮನಸ್ಸು ಹಾತೊರೆಯುವುದು. ವೃತ್ತಿರಂಗದಲ್ಲಿ ಮುನ್ನಡೆಗೆ ಅವಕಾಶಗಳು ಸಿಕ್ಕಾಗ ಮೀನ ಮೇಷ ಎಣಿಸುತ್ತಾ ಕೂರಬೇಡಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಬರಲಿದೆ.

ಮಿಥುನ: ಭೂ ವ್ಯವಹಾರಗಳು ಸುಗಮವಾಗಿ ನಡೆದು ಹೋಗಲಿವೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ.

ಕರ್ಕಟಕ: ಸಾಂಸಾರಿಕವಾಗಿ ಹೊಂದಾಣಿಕೆಯಿಂದ ನಡೆದುಕೊಂಡರೆ ಭಿನ್ನಾಭಿಪ್ರಾಯಗಳನ್ನು ತಪ್ಪಿಸಬಹುದು. ವೃತ್ತಿ ಜೀವನದಲ್ಲಿ ನಿಮ್ಮ ಕೆಲಸಗಳು ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಲಿದೆ. ತಾಳ್ಮೆ, ಸಂಯಮವಿರಲಿ.

ಸಿಂಹ: ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಲಿದೆ. ಕ್ರಿಯಾಶೀಲರಾಗಿ ಕೆಲಸ ಮಾಡಲಿದ್ದೀರಿ. ಇನ್ನೊಬ್ಬರ ಬಗ್ಗೆ ಕಾಳಜಿ ಮಾಡಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಬೇಕು.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು. ಅನಗತ್ಯವಾಗಿ ಇನ್ನೊಬ್ಬರ ನಿಷ್ಠುರ ಕಟ್ಟಿಕೊಳ್ಳಬೇಡಿ. ಮಹಿಳೆಯರಿಗೆ ಸಮಾನ ಮನಸ್ಕರೊಂದಿಗೆ ಬೆರೆಯುವ ಯೋಗ. ಕಾರ್ಯನಿಮಿತ್ತ ಪರವೂರಿಗೆ ಸಂಚಾರ ಮಾಡುವಿರಿ.

ತುಲಾ: ಕಾರ್ಯಾರಂಭದಲ್ಲಿ ಇದ್ದ ಉತ್ಸಾಹ ಕಡಿಮೆಯಾದಂತೆ ಅನಿಸಬಹುದು. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಯೋಗ್ಯ ವಯಸ್ಕರಿಗೆ ಸೂಕ್ತ ಸಂಬಂಧಕ್ಕಾಗಿ ಕೆಲವು ದಿನ ಕಾಯುವುದು ಉತ್ತಮ. ತಾಳ್ಮೆಯಿರಲಿ.

ವೃಶ್ಚಿಕ: ಕೋಪದ ಭರದಲ್ಲಿ ಇತರರ ಮೇಲೆ ಕೂಗಾಡುವ ಸಂದರ್ಭಗಳು ಎದುರಾದೀತು. ಸಂಬಂಧಗಳನ್ನು ಸೂಕ್ಷ್ಮವಾಗಿ ನಿಭಾಯಿಸಿ. ಹಣಕಾಸಿನ ವ್ಯವಹಾರದಲ್ಲಿ ಲಾಭವಿಲ್ಲದಿದ್ದರೂ ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ.

ಧನು: ಮಕ್ಕಳಿಂದ ನಿಮಗೆ ಶ್ರೇಯೋಭಿವೃದ್ಧಿಯಾಗಲಿದೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಸಾಂಸಾರಿಕ ಸುಖಕ್ಕೆ ಕೊರತೆಯಿರದು. ಎಲ್ಲರೂ ನಿಮ್ಮ ಮಾತಿಗೆ ಸಹಮತ ವ್ಯಕ್ತಪಡಿಸಲಿದ್ದಾರೆ. ದೇವರ ಪ್ರಾರ್ಥನೆ ಮರೆಯದಿರಿ.

ಮಕರ: ಹೊಸ ಸಂಬಂಧ ಬೆಸೆಯಲಿದ್ದು, ಹಳೆಯ ಕಹಿ ವಿಚಾರಗಳನ್ನು ಮರೆತು ಮುನ್ನಡೆಯಲಿದ್ದೀರಿ. ಮಾನಸಿಕವಾಗಿ ಉಲ್ಲಾಸ ಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ.

ಕುಂಭ: ಸಂಶೋಧನಾ ವೃತ್ತಿಯಲ್ಲಿ ತೊಡಗಿಕೊಂಡವರಿಗೆ ಇನ್ನಷ್ಟು ತಲ್ಲೀನರಾಗಿ ಕೆಲಸ ಮಾಡುವ ಅನಿವಾರ್ಯತೆ.  ಸಾಂಸಾರಿಕವಾಗಿ ಸುಖ-ದುಃಖ ಎರಡೂ ಸಮಾನವಾಗಿರಲಿದೆ. ನಿರೀಕ್ಷಿತ ಮೂಲಗಳಿಂದ ಧನಾಗಮನವಾಗಲಿದೆ.

ಮೀನ: ಇನ್ನೊಬ್ಬರಿಗೆ ಸಹಾಯ ಮಾಡಿ ನಿಮ್ಮ ಕೀರ್ತಿ ಹೆಚ್ಚಿಸಿಕೊಳ್ಳಲಿದ್ದೀರಿ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಬಗ್ಗೆ ಚಿಂತನೆ ನಡೆಸಲಿದ್ದಾರೆ. ದೈಹಿಕ ಶ್ರಮದ ಕೆಲಸದಿಂದ ದೇಹಾಯಾಸವಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ