ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿವಾರ, 2 ಅಕ್ಟೋಬರ್ 2021 (08:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಪ್ರೀತಿ ಪಾತ್ರರ ಖುಷಿಗಾಗಿ ಕೆಲವೊಂದು ಕೆಲಸ ಮಾಡಬೇಕಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳಾಗಲಿವೆ. ಆತ್ಮೀಯರನ್ನು ಭೇಟಿಯಾಗಲು ಮನಸ್ಸು ಹಾತೊರೆಯಲಿದೆ. ತಾಳ್ಮೆ, ಸಂಯಮವಿರಲಿ.

ವೃಷಭ: ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹಾಯಾಸವಾದೀತು. ಸಾಂಸಾರಿಕವಾಗಿ ತಾಳ್ಮೆ ಅತೀ ಅಗತ್ಯ. ಬೇರೆಯವರ ಜೀವನದಲ್ಲಿ ಮೂಗು ತೂರಿಸುವ ಪ್ರಯತ್ನ ಬೇಡ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಪಡುವ ಕಾಲವಿದು.

ಮಿಥುನ: ಹಿಂದೆ ಅಂದುಕೊಂಡಿದ್ದ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು. ಹಿರಿಯರ ಹಿತೋಪದೇಶಗಳು ಅಪಥ್ಯವೆನಿಸೀತು. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಹೊಸ ವಾತಾವರಣದಲ್ಲಿ ಕೆಲಸ ಮಾಡುವ ಸಂದರ್ಭ ಎದುರಾಗಲಿದೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಮನೆಗೆ ಅತಿಥಿಗಳ ಆಗಮನವಾಗಲಿದೆ. ಹಿರಿಯರು ದೇವತಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವರು.

ಸಿಂಹ: ಅಧ್ಯಯನದಲ್ಲಿ ತೊಡಗಿಸಿಕೊಂಡವರಿಗೆ ಮುನ್ನಡೆಯ ಯೋಗವಿದೆ. ಹೊಸ ವಿಚಾರಗಳಿಗೆ ಮನಸ್ಸು ತೆರೆದುಕೊಳ್ಳಲಿದೆ. ಮಾತಿನ ಮೇಲೆ ನಿಗಾ ಇರಲಿ. ಬೇರೆಯವರಿಗೆ ಸಹಾಯ ಮಾಡಿದರೆ ಅದಕ್ಕೆ ಪ್ರತಿಫಲ ಪಡೆಯಲಿದ್ದೀರಿ.

ಕನ್ಯಾ: ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಸಮಯ ಕಳೆಯುವ ಯೋಗ ನಿಮ್ಮದಾಗಲಿದೆ. ಮಿತ್ರರ ಭೇಟಿಯಾಗಲಿದ್ದೀರಿ. ಇಷ್ಟಭೋಜನ ಸವಿಯುವ ಯೋಗ. ಮಕ್ಕಳಿಂದ ಸಂತೋಷ ಸಿಗುವುದು.

ತುಲಾ: ಅನಿರೀಕ್ಷಿತ ಉಡುಗೊರೆಗಳು ಸಿಗಲಿದ್ದು, ಮನಸ್ಸಿಗೆ ಸಂತೋಷವಾಗಲಿದೆ. ವ್ಯಾಪಾರಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು. ಮಹಿಳೆಯರಿಗೆ ಹೊಸ ಬಗೆಯ ತಿನಿಸು ಮಾಡುವ ಯೋಚನೆ ಬರಲಿದೆ. ಚಿಂತೆ ಬೇಡ.

ವೃಶ್ಚಿಕ: ಸ್ವಯಂ ಉದ್ಯೋಗಿಗಳಿಗೆ ವ್ಯವಹಾರದಲ್ಲಿ ಅಡೆತಡೆಗಳು ಕಂಡುಬಂದೀತು. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು.

ಧನು: ಪಾಲುದಾರಿಕೆ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಕಂಡುಬರಲಿದೆ. ಸನ್ಮಿತ್ರರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯವಾಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದ ಕಡೆಗೆ ಗಮನ ಕೇಂದ್ರೀಕರಿಸಬೇಕಾಗುತ್ತದೆ.

ಮಕರ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಸಾಂಸಾರಿಕ ಸುಖಕ್ಕೆ ಕೊರತೆಯಿರದು. ನೂತನ ಮಿತ್ರರನ್ನು ಸಂಪಾದಿಸಲಿದ್ದೀರಿ. ದೇಹಾರೋಗ್ಯದಲ್ಲಿ ಸಮಸ್ಯೆಗಳು ದೂರವಾಗಿ ನೆಮ್ಮದಿಯಾಗುವುದು.

ಕುಂಭ: ಪತಿ-ಪತ್ನಿಯರರ ನಡುವೆ ಕ್ಷುಲ್ಲುಕ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಮೂಡಿಬರಲಿವೆ. ನಿಮ್ಮ ವಿಚಾರಧಾರೆಗಳನ್ನು ಇತರರ ಮೇಲೆ ಹೇರಲು ಹೋಗಬೇಡಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿ.

ಮೀನ: ಕಾರ್ಯರಂಗದಲ್ಲಿ ಹೆಚ್ಚಿನ ಸಫಲತೆ ಕಂಡುಬರಲಿದೆ. ಮಹಿಳೆಯರಿಗೆ ಬಿಡುವಿನ ದಿನದ ವಿರಾಮ ಸಿಗಲಿದೆ. ವ್ಯವಹಾರಗಳಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಮುಂದಾಗಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ