ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 11 ನವೆಂಬರ್ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಬಗ್ಗೆ ಅತಿಯಾದ ಚಿಂತೆ ಬೇಡ. ಹಿತ ಮಿತವಾದ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಸಮಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

ವೃಷಭ: ಬೇರೆಯವರ ವ್ಯವಹಾರದಲ್ಲಿ ಮೂಗು ತೂರಿಸಲು ಹೋಗಬೇಡಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಹಿರಿಯರ ಮಾತಿಗೆ ಕಿವಿಗೊಡುವುದು ಉತ್ತಮ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಧಾರ್ಮಿಕ ಕೆಲಸಗಳಿಂದ ಮಾನಸಿಕ ನೆಮ್ಮದಿ ಕಂಡುಬರಲಿದೆ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ ಕಂಡುಬರುವುದು. ಕೃಷಿಕರಿಗೆ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾದೀತು. ತಾಳ್ಮೆ ಅಗತ್ಯ.

ಕರ್ಕಟಕ: ನಿರಂತರ ಅಧ್ಯಯನ ಶೀಲರಾಗಿರುವವರಿಗೆ ಹೊಸ ದಾರಿಗಳು ಕಂಡುಬರಲಿದೆ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಮಾನ ವೃದ್ಧಿಯಾಗಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ.

ಸಿಂಹ: ದೈಹಿಕವಾಗಿ ಆರೋಗ್ಯವಿದ್ದರೂ ಮಾನಸಿಕವಾಗ ಹಲವು ಚಿಂತೆಗಳು ಹೈರಾಣಾಗಿಸಲಿದೆ. ಧನ ವೃದ್ಧಿಗಾಗಿ ಹಲವು ದಾರಿಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಸಾಂಸಾರಿಕವಾಗಿ ಸುಖ ಸಮೃದ್ಧಿ ಪಡೆಯಲಿದ್ದೀರಿ.

ಕನ್ಯಾ: ಹಿರಿಯರಿಗೆ ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ. ಮಿತ್ರರ ಸಹಾಯದಿಂದ ಸಂಭಾವ್ಯ ಸಮಸ್ಯೆಗಳಿಂದ ಪಾರಾಗಲಿದ್ದೀರಿ.

ತುಲಾ: ನಿಮ್ಮ ಹಳೆಯ ಯೋಜನೆಗಳು ಫಲಪ್ರದವಾಗಲಿದೆ. ಸಹೋದರ ಸಂಬಂಧಿಗಳೊಂದಿಗೆ ವೈಮನಸ್ಯಗಳಾಗದಂತೆ ಎಚ್ಚರಿಕೆ ವಹಿಸಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಯೋಚನೆಗಳು ಬರಲಿವೆ. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ದಾಂಪತ್ಯದಲ್ಲಿ ಹೊಂದಾಣಿಕೆಯಿರದೇ ಹೋದರೆ ವೈಮನಸ್ಯಗಳಾದೀತು. ಮಕ್ಕಳ ದೇಹಾರೋಗ್ಯದ ಬಗ್ಗೆ ಚಿಂತೆಯಾದೀತು. ಕೆಳ ಹಂತದ ನೌಕರರಿಗೆ ಮುಂಬಡ್ತಿ ಯೋಗ ಕೂಡಿಬರಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಧನು: ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಪ್ರಯತ್ನ ನಡೆಸಲಿದ್ದೀರಿ.  ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಮನಸ್ಸು ಹಾತೊರೆಯುವುದು. ಭೂಮಿ, ವಾಹನ ಖರೀದಿ ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ.

ಮಕರ: ಬಂಧು ಮಿತ್ರರೊಂದಿಗೆ ಅನಗತ್ಯ ಚರ್ಚೆ ಬೇಡ. ನಿಮ್ಮ ಮಾತಿನ ವೈಖರಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಚಿಂತೆ ಬೇಡ.

ಕುಂಭ: ಮನಸ್ಸಿನಲ್ಲಿರುವ ಮಾತುಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಕುಲದೇವರಿಗೆ ಬಾಕಿಯಿದ್ದ ಹರಕೆ ಪೂರ್ತಿ ಮಾಡಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ. ಆಪ್ತರ ಭೇಟಿ ಸಾಧ್ಯತೆ.

ಮೀನ: ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿರಲಿ. ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ. ಸಾಂಸಾರಿಕವಾಗಿ ಸಂಗಾತಿಯ ಪ್ರೀತ್ಯಾಧರಗಳಿಗೆ ಕಾರಣರಾಗಲಿದ್ದೀರಿ. ಮನೆಗೆ ನೆಂಟರಿಷ್ಟರ ಆಗಮನ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ