ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 14 ನವೆಂಬರ್ 2021 (08:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮ್ಮ ಪರಿಶ್ರಮದ ಫಲ ಇನ್ನೊಬ್ಬರ ಪಾಲಾದೀತು. ಮನಸ್ಸಿಗೆ ಬೇಸರ ಮಾಡಿಕೊಳ್ಳದೇ ಕರ್ತವ್ಯದ ಕಡೆಗೆ ಗಮನ ಕೊಡಿ. ಸಾಂಸಾರಿಕವಾಗಿ ಗಂಡ-ಹೆಂಡಿರ ನಡುವೆ ಸಂಘರ್ಷಗಳಾದೀತು. ತಾಳ್ಮೆ, ಸಂಯಮ ಅಗತ್ಯ.

ವೃಷಭ: ಮನೆಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಮನಸ್ಸಿನ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಬಗ್ಗೆ ಚಿಂತನೆ ನಡೆಸಲಿದ್ದೀರಿ.

ಮಿಥುನ: ವೃತ್ತಿರಂಗದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಿಸಲು ಪ್ರಯತ್ನ ಮಾಡಲಿದ್ದೀರಿ. ಪ್ರೇಮಿಗಳು ಮನಸ್ಸು ಬಿಚ್ಚಿ ಭಾವನೆಗಳನ್ನು ಹಂಚಿಕೊಳ್ಳಲಿದ್ದೀರಿ. ವ್ಯಾಪಾರಿಗಳಿಗೆ ಹಿತಶತ್ರುಗಳ ಕಾಟ ಕಂಡುಬರುವುದು. ತಾಳ್ಮೆಯಿರಲಿ.

ಕರ್ಕಟಕ: ಆಸ್ತಿ ಕಲಹಗಳಿಗೆ ಹಿರಿಯರ ಮಧ್ಯಸ್ಥಿಕೆಯಿಂದ ಪರಿಹಾರ ಕಂಡುಕೊಳ್ಳಲಿದ್ದೀರಿ. ಧಾರ್ಮಿಕ ಕೆಲಸಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ದೂರದ ಸಂಬಂಧಿಗಳನ್ನು ಭೇಟಿ ಮಾಡಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿ.

ಸಿಂಹ: ಹೊಸ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಲಿದ್ದೀರಿ. ಅನಗತ್ಯವಾಗಿ ಸಂಗಾತಿಯ ಮುನಿಸಿಗೆ ಕಾರಣವಾಗದಿರಿ. ನಾಜೂಕಾಗಿ ಸಂಬಂಧಗಳನ್ನು ನಿಭಾಯಿಸಬೇಕು. ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ.

ಕನ್ಯಾ: ಮಕ್ಕಳ ಸಂತೋಷಕ್ಕಾಗಿ ಕೆಲವೊಂದು ಕೆಲಸ ಮಾಡಲಿದ್ದೀರಿ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಅಡೆತಡೆಗಳು ಬಂದೀತು. ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚಾದೀತು. ಆದರೆ ಸಕಾಲದಲ್ಲಿ ಹಣಕಾಸಿನ ನೆರವು ಬರಲಿದೆ.

ತುಲಾ: ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆಗೆ ಭಂಗ ಉಂಟಾದೀತು. ಬೇರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಸ್ನೇಹಿತರಿಂದ ಸಹಾಯ ಸಿಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ವೃಶ್ಚಿಕ: ತಾಳ್ಮೆಯಿಂದ ಕೆಲಸ ನಿರ್ವಹಿಸಿದರೆ ಹಣಕಾಸಿನ ಲಾಭ ಗಳಿಸಬಹುದು. ವ್ಯಾಪಾರಿಗಳಿಗೆ ನಿರೀಕ್ಷೆಗೂ ಮೀರಿದ ಲಾಭ  ಸಿಗುವುದು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.

ಧನು: ಸಾಂಸಾರಿಕವಾಗಿ ನಿಮ್ಮ ಕೆಲವೊಂದು ನಿರ್ಧಾರಗಳು ಇತರರ ಅಸಮಾಧಾನಕ್ಕೆ ಗುರಿಯಾದೀತು. ವೈಯಕ್ತಿಕ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಹಿಂಜರಿಯಲಿದ್ದೀರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ಮಕರ: ಕಾರ್ಯ ನಿಮಿತ್ತ ಪರವೂರಿಗೆ ಪ್ರಯಾಣ ಬೆಳೆಸುವ ಅನಿವಾರ್ಯತೆ ಎದುರಾಗಲಿದೆ. ದೇಹಾರೋಗ್ಯದ ವಿಚಾರದಲ್ಲಿ ಉದಾಸೀನ ಮನೋಭಾವ ಬೇಡ. ಹಿರಿಯರ ಮಾತಿಗೆ ಬೆಲೆಕೊಡಿ. ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ಕುಂಭ: ಯೋಚಿಸಿದ ರೀತಿಯಲ್ಲೇ ಕೆಲಸಗಳು ಸಾಗಲಿದ್ದು, ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಬಂಧು ಮಿತ್ರರಿಂದ ಸಹಕಾರ ಕಂಡುಬರುವುದು. ನಿರೀಕ್ಷೆಗೂ ಮೀರಿ ಆದಾಯ ವೃದ್ಧಿಯಾಗಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಮೀನ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಉದ್ಯಮಿಗಳಿಗೆ ಅನುಕೂಲಕರ ವಾತಾವರಣವಿರಲಿದೆ. ಕಿರು ಓಡಾಟ ನಡೆಸಲಿದ್ದೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ