ಮೇಷ: ವೃತ್ತಿಸಂಬಂಧವಾಗಿ ಸಮಸ್ಯೆಗಳು ನಿಮ್ಮನ್ನು ಹೈರಾಣಾಗಿಸಲಿದೆ. ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಹಣಕಾಸಿನ ಲೆಕ್ಕಪತ್ರಗಳನ್ನು ಜೋಪಾನವಾಗಿ ಕಾಯ್ದುಕೊಳ್ಳಿ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸ್ಥಾನ ಭದ್ರಪಡಿಸಲು ಅಗತ್ಯ ಕೆಲಸ ಮಾಡಲಿದ್ದೀರಿ. ಸರಕಾರಿ ಕೆಲಸಗಳಲ್ಲಿ ಜಯ ಸಿಗಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುನ್ನಡೆ ಕಂಡುಬಂದರೂ ಭವಿಷ್ಯದ ಚಿಂತೆ ಕಾಡೀತು.
ಮಿಥುನ: ಅತಿಯಾದ ಬುದ್ಧಿವಂತಿಕೆಯೂ ಕೆಲವೊಮ್ಮೆ ಅನಾಹುತಕ್ಕೆ ಕಾರಣವಾದೀತು. ಹಿರಿಯರಿಂದ ಬಂದ ಬಳವಳಿ ಸಂರಕ್ಷಿಸಲಿದ್ದೀರಿ. ಅಧ್ಯಯನ ನಿಮಿತ್ತ ಪರವೂರಿಗೆ ಸಂಚಾರ ಮಾಡಲಿದ್ದೀರಿ. ತಾಳ್ಮೆ, ಸಂಯಮವಿರಲಿ.
ಕರ್ಕಟಕ: ನಿರುದ್ಯೋಗಿಗಳಿಗೆ ಸದವಕಾಶಗಳು ಬಂದಾಗ ಸರಿಯಾಗಿ ಉಪಯೋಗಿಸಿಕೊಳ್ಳಬೇಕಾಗುತ್ತದೆ. ಗೃಹ, ಆಸ್ತಿ ಖರೀದಿ ಇತ್ಯಾದಿ ಖರೀದಿ ವ್ಯವಹಾರಗಳಿಗೆ ಮಾತುಕತೆ ನಡೆಸಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.
ಸಿಂಹ: ವೃತ್ತಿರಂಗದಲ್ಲಿ ನೀವು ಹಿಂದೆ ಪಟ್ಟ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ವ್ಯಾವಹಾರಿಕವಾಗಿ ಅಪರಿಚಿತರಿಂದಲೂ ನಿಮಗೆ ಅನುಕೂಲವಾದೀತು. ಹಣಕಾಸಿನ ಮುಗ್ಗಟ್ಟುಗಳು ದೂರವಾಗಲಿದೆ. ಕಿರು ಓಡಾಟ ನಡೆಸಲಿದ್ದೀರಿ.
ಕನ್ಯಾ: ನಿಮ್ಮ ಕೆಲಸ ಕಾರ್ಯಗಳಿಂದ ಕುಟುಂಬಸ್ಥರಿಂದ ಪ್ರೋತ್ಸಾಹ, ಸಹಾಯ ಸಿಗಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ ಕಾದಿದೆ.
ತುಲಾ: ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ. ಮಿತ್ರರ ಕಷ್ಟಗಳಿಗೆ ಸ್ಪಂದಿಸಲು ಹೋಗಲಿದ್ದೀರಿ. ಉದ್ಯೋಗ ವ್ಯವಹಾರದಲ್ಲಿ ಜವಾಬ್ಧಾರಿಯುತವಾಗಿ ವರ್ತಿಸಬೇಕಾಗುತ್ತದೆ. ಅನಗತ್ಯ ಮಾತುಕತೆಗೆ ಅವಕಾಶ ಕೊಡದಿರಿ.
ವೃಶ್ಚಿಕ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಹೊಸ ಮಿತ್ರರನ್ನು ಸಂಪಾದಿಸಲಿದ್ದೀರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುನ್ನಡೆ ಕಂಡುಬರಲಿದೆ.
ಧನು: ನೆರೆಹೊರೆಯವರು ನಿಮ್ಮ ಗುಟ್ಟು ತಿಳಿದುಕೊಳ್ಳಲು ಪ್ರಯತ್ನಿಸಲಿದ್ದಾರೆ. ಉದ್ಯೋಗ ವ್ಯವಹಾರದಲ್ಲಿ ಧನಾದಾಯ ಹೆಚ್ಚುವುದು. ಹೊಸ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ.
ಮಕರ: ನಿಮ್ಮ ಹಳೆಯ ಯೋಜನೆಗಳಿಗೆ ಮರುಜೀವ ನೀಡಲಿದ್ದೀರಿ. ಕ್ರಿಯಾತ್ಮಕವಾಗಿ ಯೋಚಿಸುವುದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಕುಂಭ: ಸರಕಾರಿ ನೌಕರರಿಗೆ ಸ್ಥಾನ ಪಲ್ಲಟ ಭೀತಿ ಕಾಡಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ. ದಾಂಪತ್ಯದಲ್ಲಿ ಮಧ್ಯಮ ಸುಖ. ನೆಂಟರಿಷ್ಟರ ಆಗಮನ ಸಾಧ್ಯತೆಯಿದೆ. ಚಿಂತೆ ಬೇಡ.
ಮೀನ: ದಾಯಾದಿ ಕಲಹಗಳು ಕಂಡುಬರಬಹುದು. ಮಾತಿನ ಮೇಲೆ ನಿಗಾ ಇರಲಿ. ವಿದ್ಯಾರ್ಥಿಗಳು, ನಿರುದ್ಯೋಗಿಗಳಿಗೆ ವಿಫುಲ ಅವಕಾಶ ಕಂಡುಬರಲಿದೆ. ಸರಿಯಾದ ಯೋಚನೆ, ಮತ್ತು ನಿರ್ಧಾರ ಕೈಗೊಳ್ಳುವುದು ಮುಖ್ಯ.