ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ, 14 ಫೆಬ್ರವರಿ 2022 (08:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಮನಶ್ಶಾಂತಿಗಾಗಿ ಹುಡುಕಾಡುವಂತಹ ಪರಿಸ್ಥಿತಿ ನಿಮ್ಮದಾಗಲಿದೆ. ಸಾಂಸಾರಿಕವಾಗಿ ಮಾತಿನ ಮೇಲೆ ಸಂಯಮವಿರಲಿ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಮನಸ್ಸು ಹಾತೊರೆಯಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ವೃತ್ತಿರಂಗದಲ್ಲಿ ಅನುಕೂಲಕರ ವಾತಾವರಣ ಕಂಡುಬರಲಿದೆ. ಸಹೋದ್ಯೋಗಿಗಳ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಲಿದ್ದೀರಿ.

ಮಿಥುನ: ದೇವತಾನುಗ್ರಹದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ನೂತನ-ಬಂಧು ಮಿತ್ರರ ಸಮಾಗಮವಾಗಲಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಕರ್ಕಟಕ: ಸಂಗಾತಿಗೆ ಅಚ್ಚರಿಯ ಉಡುಗೊರೆಗಳ ಮೂಲಕ ಸಂತೋಷ ನೀಡಲಿದ್ದೀರಿ. ಶ್ರಮದಾಯಕ ಕೆಲಸಗಳಿಂದ ದೇಹಾಯಾಸವಾದೀತು. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಸಿಂಹ: ವಿದ್ಯಾರ್ಜನೆಯಲ್ಲಿ ತಲ್ಲೀನತೆ ಕಂಡುಬರಲಿದ್ದು, ಹೊಸ ವಿಚಾರಗಳಿಗೆ ಮನಸ್ಸು ತೆರೆದುಕೊಳ್ಳಲಿದೆ. ಆರ್ಥಿಕವಾಗಿ ಧನಾದಾಯ ಹೆಚ್ಚಲಿದ್ದು, ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ಕನ್ಯಾ: ಸ್ವಯಂ ವೃತ್ತಿಯವರಿಗೆ ಲಾಭಕರ ದಿನವಾಗಿರಲಿದೆ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ ಕಂಡುಬರುವುದು. ವಿಶೇಷವಾದ ಉಡುಗೊರೆ ಪಡೆಯಲಿದ್ದೀರಿ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವ ಯೋಗ.

ತುಲಾ: ನೆರೆಹೊರೆಯವರು ನಿಮ್ಮ ಗುಟ್ಟು ತಿಳಿದುಕೊಳ್ಳಲು ಪ್ರಯತ್ನಿಸಲಿದ್ದಾರೆ. ಸಾಂಸಾರಿಕವಾಗಿ ಹೆಚ್ಚಿನ ಹೊಣೆಗಾರಿಕೆ ನಿಮ್ಮ ಮೇಲಿರಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಅಧಿಕ ಧನ ಲಾಭ ತರುವ ಯೋಜನೆಗಳ ಬಗ್ಗೆ ಕಾರ್ಯಪ್ರವೃತ್ತರಾಗಲಿದ್ದೀರಿ. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ.

ಧನು: ವ್ಯಾವಹಾರಿಕವಾಗಿ ಮುನ್ನಡೆ ಕಂಡುಬರುವುದು. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಯಂತ್ರೋಪಕರಣಗಳ ಕೆಲಸ ಮಾಡುವಾಗ ಎಚ್ಚರಿಕೆಯಿಂದಿರಿ.

ಮಕರ: ನೀರು-ಅಗ್ನಿಯೊಂದಿಗೆ ಸೆಣಸಾಟ ಸಲ್ಲದು. ಮಹಿಳೆಯರಿಗೆ ಅಡುಗೆ ಮನೆ ಕೆಲಸಗಳು ಖುಷಿ ನೀಡಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಮುನ್ನಡೆಗೆ ಅವಕಾಶ.

ಕುಂಭ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಕೆಲಸ ಕಾರ್ಯದಲ್ಲಿ ಸಂಗಾತಿಯ ಸಹಕಾರ ಕಂಡುಬರಲಿದೆ. ಮಕ್ಕಳ ವಿಚಾರದಲ್ಲಿ ಚಿಂತೆಯಾದೀತು.

ಮೀನ: ಉದ್ಯೋಗ, ವ್ಯವಹಾರದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಕಡೆಗೆ ಚಿಂತನೆ ನಡೆಸಲಿದ್ದಾರೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ