ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 25 ಫೆಬ್ರವರಿ 2022 (08:32 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮ್ಮ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲೂ ಆಗದೆ ಸಂದಿಗ್ಧ ಪರಿಸ್ಥಿತಿ ಎದುರಿಸುವಿರಿ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳು ಕಂಡುಬರಲಿದೆ. ಸಂಗಾತಿಯಿಂದ ಸಾಂತ್ವನ ಸಿಗಲಿದೆ. ತಾಳ್ಮೆ ಅಗತ್ಯ.

ವೃಷಭ: ಹಳೆಯ ದೇಹಾರೋಗ್ಯದ ಸಮಸ್ಯೆಗಳು ಮತ್ತೆ ಕಂಡುಬಂದೀತು. ಹಿರಿಯರೊಂದಿಗೆ ವಿನಯದಿಂದ ವರ್ತಿಸಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಾದೀತು. ಸರಕಾರಿ ಲೆಕ್ಕಪತ್ರಗಳನ್ನು ಜೋಪಾನ ಮಾಡಿ.

ಮಿಥುನ: ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ಮಾನಸಿಕವಾಗಿ ಒತ್ತಡ ತರುವ ವಿಚಾರಗಳನ್ನು ಕೇಳಲಿದ್ದೀರಿ. ಕೌಟುಂಬಿಕವಾಗಿ ಕುಟುಂಬ ಸದಸ್ಯರ ಸಹಕಾರ ನಿಮಗೆ ಸಿಗಲಿದೆ.

ಕರ್ಕಟಕ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಉನ್ನತಾಧಿಕಾರದ ಯೋಗ ಕೂಡಿಬರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಯೋಗ್ಯ ವಯಸ್ಕರು ಸೂಕ್ತ ವೈವಾಹಿಕ ಸಂಬಂಧಕ್ಕಾಗಿ ಕಾಯುವುದು ಉತ್ತಮ.

ಸಿಂಹ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಪಡೆಯಲು ಶ್ರಮವಹಿಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಧನ ಲಾಭವಾಗಲಿದೆ. ಹೊಸ ಯೋಜನೆಗಳಿಗೆ ಕೈಹಾಕಲಿದ್ದೀರಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡುವಿರಿ.

ಕನ್ಯಾ: ಹೊಸದಾಗಿ ಆರಂಭಿಸಿದ್ದ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಕಂಡುಬರಲಿದ್ದು, ಮನಸ್ಸಿಗೆ ನೆಮ್ಮದಿಯಾಗಲಿದೆ. ಮಕ್ಕಳ ವಿಚಾರದಲ್ಲಿ ಬಯಸಿದ್ದೇ ನಡೆಯಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಪಡೆಯಲಿದ್ದೀರಿ. ಚಿಂತೆ ಬೇಡ.

ತುಲಾ: ದೈವಾನುಕೂಲದಿಂದ ಇಂದು ನೀವು ಕೈಗೊಳ್ಳುವ ಕೆಲಸಗಳು ಸುಗಮವಾಗಿ ನೆರವೇರಲಿದೆ. ಹೊಸದಾಗಿ ಆರಂಭಿಸಿದ್ದ ಉದ್ದಿಮೆಗಳಲ್ಲಿ ಕಷ್ಟ ನಷ್ಟಗಳು ಸಾಮಾನ್ಯ. ಆತ್ಮವಿಶ್ವಾಸದಿಂದ ಎದುರಿಸಲು ಕಲಿಯಬೇಕು.

ವೃಶ್ಚಿಕ: ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಕಂಡುಬರಲಿದೆ. ಹಳೆಯ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ. ಪ್ರೀತಿ ಪಾತ್ರರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಧನು: ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಅಂದುಕೊಂಡ ಕೆಲಸಗಳು ತಾನಾಗಿಯೇ ನೆರವೇರಲಿದೆ. ಸಂಗಾತಿಯ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.

ಮಕರ: ವೃತ್ತಿರಂಗದಲ್ಲಿ ಇತರರೂ ಅಸೂಯೆ ಪಡುವಂತೆ ಮೇಲುಗೈ ಸಾಧಿಸಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಯಂತ್ರೋಪಕರಣಗಳ ಕೆಲಸ ಮಾಡುವಾಗ ಎಚ್ಚರಿಕೆಯಿಂದಿರಿ. ದಿನದಂತ್ಯಕ್ಕೆ ನೆಮ್ಮದಿಯಾಗುವುದು.

ಕುಂಭ: ಕಷ್ಟದ ಸಮಯದಲ್ಲಿ ಮಿತ್ರರ ಸಹಾಯವೊದಗಿಬರಲಿದೆ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಪುನರ್ ಚಾಲನೆ ನೀಡಲಿದ್ದೀರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ಮೀನ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ