ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 18 ಮಾರ್ಚ್ 2022 (08:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಸಮಾಧಾನ ಚಿತ್ತದಿಂದ ವಿಚಾರ ಮಾಡಿದರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದೀತು. ಮಕ್ಕಳ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ಮಾತಿನ ಮೇಲೆ ಸಂಯಮವಿರಲಿ.

ವೃಷಭ: ವ್ಯಾವಹಾರಿಕವಾಗಿ ನಿಮಗೆ ಅಡ್ಡಿ ಆತಂಕಗಳು ಎದುರಾದರೂ ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ಪ್ರೀತಿ ಪಾತ್ರರಿಗೆ ಉಡುಗೊರೆಗಳ ಮೂಲಕ ಸಂತೋಷ ಕೊಡಲಿದ್ದೀರಿ. ಹಿರಿಯರಿಗೆ ಮನಸ್ಸಿಗೆ ನೆಮ್ಮದಿಯಾಗಲಿದೆ.

ಮಿಥುನ: ವೈಯಕ್ತಿಕ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ವ್ಯಾಪಾರಿಗಳಿಗೆ ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.

ಕರ್ಕಟಕ: ಮನೆಗೆ ವಿಶೇಷ ಆಹ್ವಾನಿತರ ಆಗಮನವಾಗಲಿದೆ. ಮನಸ್ಸಿನಲ್ಲಿರುವ ಗೊಂದಲಗಳಿಗೆ ಉತ್ತರ ಕಂಡುಕೊಳ್ಳಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು.

ಸಿಂಹ: ಮನಸ್ಸಿನಲ್ಲಿರುವುದನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ಮಹಿಳೆಯರಿಗೆ ವಿಶೇಷವಾಗಿ ಅಲಂಕರಿಸುವ ಮನಸ್ಸಾಗಲಿದೆ. ನಿಮ್ಮ ಮಾತು, ನಡೆಯಿಂದ ಇತರರ ಗಮನ ಸೆಳೆಯಲಿದ್ದೀರಿ. ಅನಗತ್ಯ ಚಿಂತೆ ಬೇಡ.

ಕನ್ಯಾ: ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಬಹಳ ದಿನಗಳ ನಂತರ ಇಷ್ಟಭೋಜನ ಮಾಡುವ ಯೋಗ ನಿಮ್ಮದಾಗಲಿದೆ. ಜೀವನದಲ್ಲಿ ಪರೀಕ್ಷೆಗಳು ಎದುರಾದಾಗ ಅದನ್ನು ಸಮಾಧಾನ ಚಿತ್ತದಿಂದ ಎದುರಿಸಬೇಕಾಗುತ್ತದೆ.

ತುಲಾ: ನೀವು ಬೇಡವೆಂದರೂ ಕೆಲವೊಂದು ವ್ಯಕ್ತಿಗಳು, ಸಂದರ್ಭಗಳನ್ನು ಎದುರಿಸುವ ಅನಿವಾರ್ಯತೆ ಎದುರಾಗಲಿದೆ. ಮಾನಸಿಕವಾಗಿ ಹೊಸ ಸವಾಗಲುಗಳಿಗೆ ಸಿದ್ಧರಾಗಬೇಕಾಗುತ್ತದೆ. ನೆರೆಹೊರೆಯವರೊಂದಿಗೆ ಸಂಘರ್ಷ ಬೇಡ.

ವೃಶ್ಚಿಕ: ಯಾವುದೇ ವಿಚಾರವಾದರೂ ವಸ್ತುನಿಷ್ಠವಾಗಿ ಮಾತನಾಡಲಿದ್ದೀರಿ. ಇನ್ನೊಬ್ಬರ ಪ್ರೀತಿ ಗಳಿಸಲು ಕಷ್ಟಪಡಬೇಕಾಗುತ್ತದೆ. ಯೋಗ್ಯ ವಯಸ್ಕರಿಗೆ ವೈವಾಹಿಕ ಸಂಬಂಧಗಳು ಅರಸಿ ಬರಲಿವೆ.

ಧನು: ಸ್ವಯಂ ಉದ್ಯೋಗಿಗಳಿಗೆ ಆರ್ಥಿಕವಾಗಿ ಲಾಭವಾದೀತು. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಬಹುದು. ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಸರಕಾರಿ ಉದ್ಯೋಗಿಗಳಿಗೆ ಕೊಂಚ ಬಿಡುವಿನ ಸಮಯ ದೊರೆಯಲಿದೆ.

ಮಕರ: ನಿಮ್ಮ ಕೆಲವೊಂದು ನಿರ್ಧಾರಗಳು ಪ್ರೀತಿ ಪಾತ್ರರಿಗೆ ಇಷ್ಟವಾಗದೇ ಹೋಗಬಹುದು. ಕಾರ್ಯರಂಗದಲ್ಲಿ ನಿಮ್ಮ ಮುನ್ನಡೆ ಯಾರಿಂದಲೂ ತಡೆಯಲು ಸಾಧ‍್ಯವಿಲ್ಲ. ವ್ಯಾಪಾರಿಗಳಿಗೆ ಅನುಕೂಲಕರ ವಾತಾವರಣವಿರಲಿದೆ.

ಕುಂಭ: ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ತಕ್ಕ ಫಲ ಕಂಡುಬರಲಿದೆ. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ. ಮಕ್ಕಳ ಪ್ರೀತಿಗೆ ಪಾತ್ರರಾಗಲಿದ್ದೀರಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹಾಯಾಸವಾದೀತು.

ಮೀನ: ಉದ್ಯೋಗ, ವ್ಯವಹಾರದಲ್ಲಿ ನೀವು ಕೈಗೊಳ್ಳುವ ಹೊಸ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಂಡುಬಂದೀತು. ಹೊಸ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ