ಮೇಷ: ವಾಹನ, ಭೂಮಿ ಖರೀದಿ ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ. ಸರಕಾರೀ ವ್ಯವಹಾರಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಕೌಟುಂಬಿಕವಾಗಿ ತಾಳ್ಮೆ, ಸಮಾಧಾನದಿಂದ ಸಮಸ್ಯೆ ಬಗೆಹರಿಸಬೇಕಾಗುತ್ತದೆ.
ವೃಷಭ: ಜವಾಬ್ಧಾರಿಯುತವಾಗಿ ಕೆಲಸ ನಿಭಾಯಿಸಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾಗಲಿವೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.
ಮಿಥುನ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ಬಾರದಂತೆ ಎಚ್ಚರಿಕೆ ವಹಿಸಿ. ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳಿದ್ದರೂ ಅಂತಿಮ ಜಯ ನಿಮ್ಮದಾಗಲಿದೆ. ಕೌಟುಂಬಿಕವಾಗಿ ಸಮೃದ್ಧಿ, ನೆಮ್ಮದಿ ಕಂಡುಬರುವುದು. ತಾಳ್ಮೆಯಿರಲಿ.
ಕರ್ಕಟಕ: ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನವಾಗಲಿದ್ದು, ಸಂತೋಷದ ವಾತಾವರಣವಿರಲಿದೆ. ದೈಹಿಕವಾಗಿ ಶ್ರಮದಾಯಕ ಕೆಲಸ ಮಾಡಲಿದ್ದೀರಿ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಉನ್ನತಿಯ ಯೋಗವಿದೆ.
ಸಿಂಹ: ಮನಸ್ಸಿನಲ್ಲಿ ಅಂದುಕೊಂಡಿದ್ದ ಕೆಲಸವನ್ನು ಪೂರ್ತಿ ಮಾಡುವ ಅವಕಾಶ ನಿಮ್ಮದಾಗಲಿದೆ. ಸಾಂಸಾರಿಕವಾಗಿ ಸುಖ ಸಮೃದ್ಧಿ ಕಂಡುಬರಲಿದೆ. ಆಸ್ತಿ ವಿಚಾರದಲ್ಲಿ ಸಹೋದರರೊಂದಿಗೆ ಅನಗತ್ಯ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆಯಿರಲಿ.
ಕನ್ಯಾ: ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಆಸ್ತಿ ವಿಚಾರದಲ್ಲಿ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ. ವಾಹನ ರಿಪೇರಿ ಕೆಲಸಗಳಿಗಾಗಿ ಖರ್ಚು ವೆಚ್ಚಗಳಾದೀತು. ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ.
ತುಲಾ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಅಸಹಾಕಾರದಿಂದ ಮನಸ್ಸಿಗೆ ಬೇಸರವಾದೀತು. ಸಂಗಾತಿಯೊಂದಿಗೆ ಮನಸ್ಸಿನ ಮಾತು ಹಂಚಿಕೊಳ್ಳಲಿದ್ದೀರಿ. ಗೃಹ, ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಪ್ರಗತಿ ಕಂಡುಬರಲಿದೆ.
ವೃಶ್ಚಿಕ: ಸಕಾಲದಲ್ಲಿ ಹಣಕಾಸಿನ ನೆರವು ಬರಲಿದ್ದು, ಸಂಭಾವ್ಯ ಸಮಸ್ಯೆಗಳಿಂದ ದೂರವಾಗಲಿದ್ದೀರಿ. ಕಾರ್ಯರಂಗದಲ್ಲಿ ಹಿತಶತ್ರುಗಳ ಪೀಡೆ ದೂರವಾಗಲಿದೆ. ವಿದ್ಯಾರ್ಥಿಗಳಿಗೆ ಅಧ್ಯಯನ ನಿಮಿತ್ತ ಪರವೂರಿಗೆ ಸಂಚರಿಸಬೇಕಾದೀತು.
ಧನು: ಹೊಸದಾಗಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಮುನ್ನಡೆ ಕಂಡುಬರಲಿದೆ. ಮಕ್ಕಳ ಸಂಸಾರದಲ್ಲಿ ಅನಗತ್ಯ ಮೂಗು ತೂರಿಸಲು ಹೋಗಬೇಡಿ. ಮಾತಿನ ಮೇಲೆ ನಿಗಾ ಇರಲಿ. ನೆರೆಹೊರೆಯವರಿಗೆ ಸಹಾಯ ಮಾಡಲಿದ್ದೀರಿ.
ಮಕರ: ನಿಮ್ಮ ಕೆಲವು ಅನಗತ್ಯ ಮಾತುಗಳು ಇತರರ ಮನಸ್ಸಿಗೆ ಬೇಸರವುಂಟು ಮಾಡೀತು. ದೀರ್ಘ ಪ್ರಯಾಣ ಮಾಡಬೇಕಾಗಿ ಬರುತ್ತದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ದೇವತಾ ಪ್ರಾರ್ಥನೆ ಮಾಡಿದರೆ ಉತ್ತಮ.
ಕುಂಭ: ಮಕ್ಕಳಿಗೆ ಸರಿಯಾದ ಸಲಹೆಗಳನ್ನು ಕೊಡಲಿದ್ದೀರಿ. ಆದರೆ ಸಂಗಾತಿಯ ಕೋಪಕ್ಕೆ ಗುರಿಯಾಗಬೇಕಾದ ಸಂದರ್ಭ ಎದುರಾದೀತು. ಆಸ್ತಿ, ವಾಹನಾದಿ ಖರೀದಿ ವಿಚಾರದಲ್ಲಿ ಪರಾಮರ್ಶಿಸುವುದು ಉತ್ತಮ. ತಾಳ್ಮೆಯಿರಲಿ.
ಮೀನ: ಉದ್ಯೋಗ ಸಂಬಂಧವಾದ ಸಮಸ್ಯೆಗಳನ್ನು ಕ್ರಿಯಾತ್ಮಕ ರೀತಿಯಲ್ಲಿ ಪರಿಹರಿಸಿಕೊಳ್ಳಲಿದ್ದೀರಿ. ದೇಹಾರೋಗ್ಯದ ವಿಚಾರದಲ್ಲಿ ನಿರ್ಲ್ಯಕ್ಷ ಮಾಡಬೇಡಿ. ನೆರೆಹೊರೆಯವರೊಂದಿಗೆ ಅನಗತ್ಯ ಸಂಘರ್ಷ ಬೇಡ. ದಿನದಂತ್ಯಕ್ಕೆ ನೆಮ್ಮದಿ.