ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 1 ಜೂನ್ 2022 (08:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಪಾರದರ್ಶಕ ವ್ಯವಹಾರವಿರಲಿ. ನಿರೀಕ್ಷಿತ ಧನಾಗಮನದಿಂದ ಕಾರ್ಯದಲ್ಲಿ ಯಾವುದೇ ತೊಂದರೆಗಳಾಗದು. ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ.  ಯಶಸ್ಸಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ.

ವೃಷಭ: ವ್ಯಾವಹಾರಿಕವಾಗಿ ಲಾಭವಿದ್ದರೂ ನಯವಂಚಕರಿಂದ ದೂರವಿರುವುದೇ ಉತ್ತಮ. ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಕೊಂಕು ಮಾತನಾಡುವವರಿರುತ್ತಾರೆ. ತಾಳ್ಮೆ, ಸಂಯಮದಿಂದ ನಿಭಾಯಿಸಿ. ದಿನದಂತ್ಯಕ್ಕೆ ಸಂತೋಷದ ಸುದ್ದಿ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಏನೇ ಕೆಲಸ ಮಾಡಿದರೂ ಏನೋ ಒಂದು ರೀತಿಯ ಅತೃಪ್ತಿ ಕಂಡುಬರಲಿದೆ. ಪಾಲುದಾರಿಕೆ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಕರ್ಕಟಕ: ನಿರುದ್ಯೋಗಿಗಳಿಗೆ ಒಳ್ಳೆಯ ಕಾಲ ಸದ್ಯದಲ್ಲೇ ಕೂಡಿಬರುವುದು. ಹಿರಿಯರಿಗೆ ವಂಚನೆಯ ಭೀತಿಯಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.

ಸಿಂಹ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಜವಾಬ್ಧಾರಿ ಹೆಚ್ಚಾಗಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ ಕಂಡುಬರಲಿದೆ. ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆಯ ಯೋಗ. ವಾಹನ ಸಂಚಾರದಲ್ಲಿ ಎಚ್ಚರಕೆ ಅಗತ್ಯ.

ಕನ್ಯಾ: ವೃತ್ತಿರಂಗದಲ್ಲಿ ನಿಮ್ಮ ಎದುರಾಳಿಗಳನ್ನು ಮೀರಿಸಿ ಮುನ್ನಡೆಯಲಿದ್ದೀರಿ. ಸಹೋದ್ಯೋಗಿಗಳೊಂದಿಗೆ ನಿಮ್ಮ ವರ್ತನೆ ಹಿತಮಿತವಾಗಿರಲಿದೆ. ಆಸ್ತಿ, ವಾಹನ ಖರೀದಿ ವಿಚಾರದಲ್ಲಿ ಮುನ್ನಡೆ ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ತುಲಾ: ನಿಮ್ಮ ಬಗ್ಗೆ ಬೇರೆಯವರಿಗೆ ಸದಭಿಪ್ರಾಯ ಮೂಡಿಸಲು ಪ್ರಯತ್ನ ನಡೆಸಲಿದ್ದೀರಿ. ಅತೀ ಉದಾರತೆಯಿಂದಲೂ ತೊಂದರೆಗೆ ಸಿಲುಕಿಕೊಳ್ಳುವ ಸಂಭವವಿದೆ. ಎಚ್ಚರಿಕೆ ಅಗತ್ಯ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು.

ವೃಶ್ಚಿಕ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಮನೆಯಲ್ಲಿ ಸಂತೋಷ, ಸಮೃದ್ಧಿಯಿರಲಿದೆ. ಬಹುದಿನಗಳ ಕನಸು ನನಸು ಮಾಡಲಿದ್ದೀರಿ.

ಧನು: ಬೇರೆಯವರ ಜೀವನದ ಬಗ್ಗೆ ಅತಿಯಾಗಿ ಆಸಕ್ತಿ ತೋರಲು ಹೋದರೆ ತೊಂದರೆ ಎದುರಾದೀತು. ಸರಕಾರಿ ನೌಕರರಿಗೆ ಉನ್ನತ ಸ್ಥಾನ ಮಾನದ ಯೋಗ. ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರಿಂದ ಪ್ರಶಂಸೆ ಸಿಗಲಿದೆ.

ಮಕರ: ಕಾರ್ಯರಂಗದಲ್ಲಿ ವಿಶೇಷಾಧಿಕಾರದ ಯೋಗವಿದೆ. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗುವ ಸಂಭವ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ.

ಕುಂಭ: ಜಲೋತ್ಪನ್ನಗಳ ಖರೀದಿ ವಿಚಾರದಲ್ಲಿ ಲಾಭವಾಗಲಿದೆ. ವೈದ್ಯಕೀಯ ವೃತ್ತಿಯವರಿಗೆ ಕೀರ್ತಿ ಸಂಪಾದಿಸುವ ಯೋಗ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ, ಇಷ್ಟ ಭೋಜನ ಮಾಡುವ ಯೋಗ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮೀನ: ಅನಿರೀಕ್ಷಿತವಾಗಿ ಅಧಿಕಾರ ಪ್ರಾಪ್ತಿಯಾಗುವ ಯೋಗ. ಪಾಲಿಗೆ ಬಂದ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ.  ನಿಮ್ಮ ಕಾರ್ಯಚತುರತೆ ಇತರರ ಗಮನ ಸೆಳೆಯಲಿದೆ. ಕುಲದೇವರ ಪ್ರಾರ್ಥನೆ ಮರೆಯದಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ