ಮೇಷ: ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಬಹಳ ದಿನಗಳ ನಂತರ ಆತ್ಮೀಯರನ್ನು ಭೇಟಿ ಮಾಡುವ ಸಂತೋಷ ನಿಮ್ಮದಾಗುವುದು. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ. ಅನಗತ್ಯ ಚಿಂತೆ ಬೇಡ.
ವೃಷಭ: ನಿಮಗನಿಸಿದ್ದನ್ನು ಸ್ಪಷ್ಟವಾಗಿ ಹೇಳಲು ತಡವರಿಸುವ ಪರಿಸ್ಥಿತಿಯಾದೀತು. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ಕಾರ್ಯರಂಗದಲ್ಲಿ ನಿಮಗೆ ಪೈಪೋಟಿ ಎದುರಾದೀತು. ಕುಟುಂಬದವರ ಪ್ರೋತ್ಸಾಹ ಕಂಡುಬರಲಿದೆ.
ಮಿಥುನ: ನೂತನ ಮಿತ್ರರ ಸಮಾಗಮವಾಗಲಿದೆ. ಆಹಾರೋದ್ಯಮಿಗಳಿಗೆ ಉನ್ನತಿಯ ಯೋಗ. ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಲಿದ್ದೀರಿ. ಸಂಗಾತಿಯೊಂದಿಗೆ ಅನಗತ್ಯ ವಾದ ವಿವಾದ ಬೇಡ. ತಾಳ್ಮೆಯಿರಲಿ.
ಕರ್ಕಟಕ: ರಾಜಕೀಯ ರಂಗದಲ್ಲಿರುವವರಿಗೆ ಉನ್ನತಿಯ ಯೋಗ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಕುಟುಂಬ ಸದಸ್ಯರೊಂದಿಗೆ ಸುಂದರ ಕ್ಷಣ ಕಳೆಯುವ ಯೋಗ. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ.
ಸಿಂಹ: ಹೊಸದಾಗಿ ಆರಂಭಿಸಿರುವ ಕೆಲಸಗಳಿಗೆ ಅಡೆತಡೆಗಳು ಬಂದೀತು. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಪ್ರೀತಿ ಪಾತ್ರರೊಂದಿಗೆ ಮನದಾಳ ತೆರೆದಿಡಲಿದ್ದೀರಿ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.
ಕನ್ಯಾ: ಉದ್ಯೋಗ, ವ್ಯವಹಾರದಲ್ಲಿ ನಿಮ್ಮ ಸ್ಥಾನ ಸುಧಾರಣೆಗೆ ಪ್ರಯತ್ನ ಪಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ನೆರೆಹೊರೆಯವರೊಂದಿಗೆ ಸಂಬಂಧ ಸುಧಾರಣೆಯಾಗಲಿದೆ. ಚಿಂತೆ ಬೇಡ.
ತುಲಾ: ಮಕ್ಕಳ ಸಂತೋಷಕ್ಕಾಗಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭ ಮಾಡಿಕೊಳ್ಳಲು ದಾರಿ ಸಿಗಲಿದೆ. ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನ ಸಾಧ‍್ಯತೆಯಿದೆ.
ವೃಶ್ಚಿಕ: ಮನೆ, ವಾಹನ ಇತ್ಯಾದಿ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚಗಳಾಗಲಿವೆ. ಮಹಿಳೆಯರಿಗೆ ಚಿನ್ನ, ವಸ್ತ್ರಾಭರಣ ಖರೀದಿ ಮಾಡುವ ಯೋಗ. ವೈವಾಹಿಕ ಜೀವನದಲ್ಲಿ ಸಂಘರ್ಷಗಳು ಸಾಮಾನ್ಯ. ನಾಜೂಕಾಗಿ ನಿಭಾಯಿಸಿ.
ಧನು: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ಸುಧಾರಣೆಯಾಗಲಿವೆ. ಆತ್ಮೀಯರನ್ನು ಭೇಟಿಯಾಗುವ ಸಂತೋಷ ನಿಮ್ಮದಾಗುವುದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ.
ಮಕರ: ಪಾಲುದಾರಿಕಾ ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಇಷ್ಟ ಭೋಜನ ಮಾಡುವ ಯೋಗ ನಿಮ್ಮದಾಗಲಿದೆ. ಕ್ರಯ-ವಿಕ್ರಯ ಕೆಲಸಗಳಲ್ಲಿ ಲಾಭವಾಗುವುದು. ಬರಬೇಕಾಗಿದ್ದ ಸಾಲ ಮರುಪಾವತಿಯಾಗಲಿದೆ. ನೆಮ್ಮದಿಯಿರಲಿದೆ.
ಕುಂಭ: ಮನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ವಾಹನ ಖರೀದಿಸುವ ನಿಮ್ಮ ಕನಸು ಕೊಂಚ ಮಟ್ಟಿಗೆ ಮುಂದೂಡಿಕೆಯಾಗಬಹುದು. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಐಡಿಯಾ ಸಿಗಲಿದೆ.
ಮೀನ: ಕಟ್ಟಡ-ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಕಾರ್ಯನಿಮಿತ್ತ ಓಡಾಟ ನಡೆಸಲಿದ್ದೀರಿ.