ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 7 ಅಕ್ಟೋಬರ್ 2022 (08:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವಿಶೇಷವಾದ ವ್ಯಕ್ತಿಗಳ ಭೇಟಿಯಿಂದ ನಿಮ್ಮ ದಿನ ವಿಶೇಷವಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆ ಅಗತ್ಯ. ತಾಳ್ಮೆಯಿರಲಿ.

ವೃಷಭ: ಹೊಸದಾಗಿ ಉದ್ಯೋಗ, ವ್ಯವಹಾರ ಆರಂಭಿಸಿದ್ದರೆ ಮುನ್ನಡೆ ಕಂಡುಬಂದೀತು. ಧಾರ್ಮಿಕ ಮುಖಂಡರ ಆಶೀರ್ವಾದ ಪಡೆಯಲಿದ್ದೀರಿ. ಕೌಟುಂಬಿಕವಾಗಿ ಸುಖ, ಸಮೃದ್ಧಿಯಿರಲಿದೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ಮಿಥುನ: ವ್ಯಾಪಾರ, ವ್ಯವಹಾರದಲ್ಲಿ ನಿಮ್ಮ ವಾಕ್ಚತುರತೆ ಉಪಯೋಗಕ್ಕೆ ಬರಲಿದೆ. ಆಸ್ತಿ ವಿಚಾರದಲ್ಲಿ ಸಹೋದರಾದಿ ಸಂಬಂಧಿಗಳೊಂದಿಗೆ ಘರ್ಷಣೆಗಳಾಗದಂತೆ ಎಚ್ಚರಿಕೆ ವಹಿಸಿ. ವಾಹನ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಕರ್ಕಟಕ: ಪರರ ಸಹಾಯದಿಂದ ವ್ಯವಹಾರದಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಸ್ನೇಹಿತರೊಂದಿಗೆ ಹಳೆಯ ವೈಮನಸ್ಯ ಮರೆತು ಸಂಬಂಧ ಸುಧಾರಣೆಯಾಗಲಿದೆ.

ಸಿಂಹ: ಹೊಸ ಯೋಜನೆಗಳು ಕೈ ಹಿಡಿಯಲಿದ್ದು, ಆರ್ಥಿಕವಾಗಿ ಮುನ್ನಡೆಯ ಯೋಗ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿದೆ. ವ್ಯಾಪಾರೀ ವರ್ಗದವರಿಗೆ ಸಾಲಗಾರರ ಕಾಟದಿಂದ ಮುಕ್ತಿ.

ಕನ್ಯಾ: ಎಷ್ಟೋ ದಿನದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳನ್ನು ಪೂರ್ತಿ ಮಾಡಲು ಪ್ರಯತ್ನಿಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಇತರರ ಸಹಾಯ ಪಡೆಯಲಿದ್ದೀರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಮಾತಿನ ಮೇಲೆ ನಿಗಾ ಇರಲಿ.

ತುಲಾ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಾಗ ಅಡೆತಡೆಗಳು ಸಾಮಾನ್ಯ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಸ್ವಯಂ ವೃತ್ತಿಯವರಿಗೆ ಲಾಭದಾಯಕ ದಿನವಾಗಿರಲಿದೆ. ಚಿಂತೆ ಬೇಡ.

ವೃಶ್ಚಿಕ: ದೈವಾನುಕೂಲದಿಂದ ಇಂದು ನೀವು ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರಲಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗ.

ಧನು: ನಿಮ್ಮ ಮನಸ್ಸಿನ ಮಾತುಗಳನ್ನು ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಹಣ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಮಕರ: ಆಸ್ತಿ ವಿಚಾರದಲ್ಲಿ ಹಿರಿಯರ ಅಭಿಪ್ರಾಯ ಕೇಳಿ ಮುನ್ನಡೆಯುವುದು ಉತ್ತಮ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡದಿಂದ ಅಲ್ಪ ವಿರಾಮ ಸಿಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾದೀತು.

ಕುಂಭ: ಕೃಷಿ ಸಲಕರಣೆಗಳ ಕೆಲಸ ಮಾಡುವವರು, ಕೃಷಿಕರಿಗೆ ವ್ಯವಹಾರದಲ್ಲಿ ಲಾಭವಾದೀತು. ಪಾಲುದಾರಿಕೆ ವ್ಯವಹಾರದಿಂದ ಅಭಿವೃದ್ಧಿ ನಿರೀಕ್ಷಿಸಬಹುದು. ಹೊಸ ಜನರ ಸಂಪರ್ಕ, ಸ್ನೇಹ ಸಂಪಾದಿಸಲಿದ್ದೀರಿ.

ಮೀನ: ಸಾಂಸಾರಿಕವಾಗಿ ತೃಪ್ತಿದಾಯಕ ದಿನಗಳಾಗಿರಲಿವೆ. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರಲಿದೆ. ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಕಂಡುಬರುವುದು. ದೇವತಾ ಪ್ರಾರ್ಥನೆ ಮರೆಯದಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ