ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 2 ನವೆಂಬರ್ 2022 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಸಮಚಿತ್ತದಿಂದ ಕೈಗೊಳ್ಳುವ ನಿರ್ಧಾರಗಳು ನಿಮಗೆ ಅನುಕೂಲವಾಗಲಿದೆ. ಬೇರೆಯವರ ಕಾರ್ಯವೈಖರಿ ಬಗ್ಗೆ ವಿನಾಕಾರಣ ಅಭಿಪ್ರಾಯ ಹೇಳಲು ಹೋಗಬೇಡಿ. ನೆರೆಹೊರೆಯವರಿಗೆ ಸಹಾಯ ಮಾಡಲಿದ್ದೀರಿ.

ವೃಷಭ: ದೇಹಾರೋಗ್ಯದ ಬಗ್ಗೆ ಉದಾಸೀನ ಪ್ರವೃತ್ತಿ ಬೇಡ. ಸತ್ಕಾರ್ಯಗಳಿಗೆ ಕೈ ಜೋಡಿಸಲಿದ್ದೀರಿ. ಇಷ್ಟಮಿತ್ರರನ್ನು ಬಹಳ ದಿನಗಳ ನಂತರ ಭೇಟಿಯಾಗುವ ಯೋಗ. ಕಾರ್ಯರಂಗದಲ್ಲಿ ಮೇಲಧಿಕಾರಿಗಳ ಪ್ರಶಂಸೆ ವ್ಯಕ್ತವಾಗಲಿದೆ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಮನಸ್ಸು ಬಯಸಲಿದೆ. ಕಾರ್ಯನಿಮಿತ್ತ ದೂರ ಪ್ರಯಾಣ ಮಾಡಬೇಕಾಗುತ್ತದೆ. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ದೇವತಾ ಪ್ರಾರ್ಥನೆ ಮಾಡಲಿದ್ದೀರಿ.

ಕರ್ಕಟಕ: ಯಾವುದೇ ಕೆಲಸಕ್ಕೆ ತೊಡಗಿಸಿಕೊಂಡರೂ ಒಂದು ರೀತಿಯ ಉದಾಸೀನ ಮನೋಭಾವ ಕಂಡುಬರಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಕ್ಕೀತು. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ.

ಸಿಂಹ: ದೂರದ ವ್ಯವಹಾರಗಳು ತ್ರಾಸದಾಯಕವೆನಿಸೀತು. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳಾಗುವ ಸಾಧ‍್ಯತೆ. ಯಾವುದೇ ಕೆಲಸವಾದರೂ ಬೇಗನೇ ಮುಗಿಸುವ ಧಾವಂತ ತೋರಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ಕಾರ್ಯರಂಗದಲ್ಲಿ ನಿಮ್ಮ ಕೆಲಸಗಳನ್ನು ಇತರರು ಗುರುತಿಸಲಿದ್ದಾರೆ. ಆರ್ಥಿಕವಾಗಿ ಧನ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ.

ತುಲಾ: ಆಪ್ತರನ್ನು ಕಳೆದುಕೊಳ್ಳುವ ಭೀತಿ ಎದುರಾದೀತು. ಮಾನಸಿಕವಾಗಿ ಕಾಡುತ್ತಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಲಿದ್ದೀರಿ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ.

ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ ಕಂಡುಬರಲಿದೆ. ಕೆಲವೊಂದು ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ. ಅತೀ ಬುದ್ಧಿವಂತಿಕೆ ತೋರಿಸಲು ಹೋದರೆ ಅನಾಹುತ ಖಂಡಿತಾ. ವಾಹನ ಸಂಚಾರದಲ್ಲಿ ಎಚ್ಚರಿಕೆಯಿರಲಿ.

ಧನು: ಅಂದುಕೊಂಡ ಸಮಯಕ್ಕೆ ಕೆಲಸ ಪೂರ್ತಿಯಾಗದ ನಿರಾಸೆ ಕಾಡೀತು. ವೈವಾಹಿಕ ಸಂಬಂಧಗಳಲ್ಲಿ ಬಿರುಕು ಮೂಡದಂತೆ ಎಚ್ಚರಿಕೆ ವಹಿಸಿ. ಬಂಧು ಮಿತ್ರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ತಾಳ್ಮೆಯಿರಲಿ.

ಮಕರ: ಬರಬೇಕಾಗಾಗಿದ್ದ ಬಾಕಿ ಹಣ ವಸೂಲಾತಿಗೆ ಮುಂದಾಗಲಿದ್ದೀರಿ. ಚಿತ್ತ ಚಾಂಚಲ್ಯ ಕಂಡುಬಂದೀತು. ಆಪ್ತರ ಸಲಹೆಗಳು ಉಪಯೋಗಕ್ಕೆ ಬರಲಿವೆ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಂಡುಬರಲಿದೆ.

ಕುಂಭ: ಸಂದರ್ಭಕ್ಕೆ ತಕ್ಕಂತೆ ನಿಮ್ಮ ಪರಾಕ್ರಮ ತೋರಿಸಬೇಕಾಗುತ್ತದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಮುಂದಾಗಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ಮೀನ: ಆಡುವ ಮಾತಿನಲ್ಲಿ ಸ್ಪಷ್ಟತೆಯಿರಲಿದ್ದು, ಎದುರಾಳಿಗಳನ್ನೂ ಸೋಲಿಸಲಿದ್ದೀರಿ. ಸಾಂಸಾರಿಕ ಸುಖ ಕಂಡುಬರುವುದು. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಚರ್ಚೆಗೆ ಅವಕಾಶ ಕೊಡಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ