ಮೇಷ: ಹಿರಿಯರಿಂದ ಸುಖ-ಸಂತೋಷ ಸಿಗುವುದು. ಮನೆಯಲ್ಲಿ ಸಣ್ಣ ಪುಟ್ಟ ರಿಪೇರಿ ಕೆಲಸಗಳಿಗೆ ಹಣ ಖರ್ಚಾಗಲಿದೆ. ಇಷ್ಟಮಿತ್ರರೊಂದಿಗೆ ಇಷ್ಟ ಭೋಜನ ಮಾಡುವ ಯೋಗ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ವೃಷಭ: ಸರಕಾರೀ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಗಣ್ಯರ ಸಹಾಯದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡುಬರಲಿದೆ. ಸಹೋದ್ಯೋಗಿಗಳ ಸಹಕಾರ ಕಂಡುಬರುವುದು. ಕಿರು ಸಂಚಾರ ಮಾಡಲಿದ್ದೀರಿ.
ಮಿಥುನ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರಲಿದೆ. ಸರಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ಯೋಗ. ಸ್ವ ಸಾಮರ್ಥ್ಯದಿಂದ ಧನ ಸಂಪಾದನೆ ಮಾಡಲಿದ್ದೀರಿ. ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ.
ಕರ್ಕಟಕ: ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಅನ್ಯರ ಮಾತು ನಂಬಿ ವಂಚನೆಗೊಳಗಾಗಬೇಡಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಾರ್ಯವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ.
ಸಿಂಹ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ವ್ಯವಹಾರ ಮಾಡುವಾಗ ಕೊಂಚ ಕಠೋರವಾಗಿರಬೇಕಾಗುತ್ತದೆ. ಮಹಿಳೆಯರಿಗೆ ಮಂಗಲ ವಸ್ತು ಖರೀದಿ ಯೋಗ. ಅನಗತ್ಯ ಮಾತಿಗೆ ಕಡಿವಾಣವಿರಲಿ.
ಕನ್ಯಾ: ಸಂಶೋಧನಾತ್ಮಕ ವೃತ್ತಿಯಲ್ಲಿರುವವರಿಗೆ ಸಮಯ ಮೀರಿ ಕೆಲಸ ಮಾಡಬೇಕಾಗುತ್ತದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.
ತುಲಾ: ಸಾಂಸಾರಿಕವಾಗಿ ಸುಖ ವೃದ್ಧಿ, ಮಕ್ಕಳಿಂದ ಸಂತೋಷ ವಾರ್ತೆ ಕೇಳಿಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ಸೌಲಭ್ಯ ಸಿಗಲಿದೆ. ಹಿರಿಯರಿಗೆ ನಿಮ್ಮ ಕೆಲವೊಂದು ನಿರ್ಧಾರಗಳು ಕಿರಿ ಕಿರಿ ತಂದೀತು. ತಾಳ್ಮೆ, ಸಂಯಮ ಅಗತ್ಯ.
ವೃಶ್ಚಿಕ: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ಪರಿಹಾರವಾಗಲಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾದೀತು. ವ್ಯಾಪಾರಿಗಳಿಗೆ ಉನ್ನತಿಯ ಯೋಗ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಧನು: ಸರಕಾರಿ ಕೆಲಸಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ದೂರದ ನೆಂಟರಿಷ್ಟರಿಂದ ನಿಮಗೆ ಅನುಕೂಲವಾದೀತು. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮಕರ: ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ವಂಚನೆಗೊಳಗಾಗುವ ಸಾಧ‍್ಯತೆ. ಇನ್ನೊಬ್ಬರ ಬಗ್ಗೆ ನಿಮ್ಮ ಯೋಚನಾ ಲಹರಿ ಬದಲಾದೀತು. ಸಾಂಸಾರಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.
ಕುಂಭ: ನಿಮ್ಮ ವಾಕ್ಚತುರತೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಲಿದ್ದೀರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನವಾಗಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.
ಮೀನ: ಸಹೋದರ ಸಮಾನರಿಂದ ಸಕಾಲದಲ್ಲಿ ನೆರವು ಸಿಗಲಿದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭ ಕಂಡುಬರುವುದು. ಕುಲದೇವರ ಪ್ರಾರ್ಥನೆ ಮಾಡಿ.