ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ, 21 ನವೆಂಬರ್ 2022 (08:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಸಾಂಸಾರಿಕವಾಗಿ ಸುಖ, ತೃಪ್ತಿದಾಯಕ ವಾತಾವರಣ. ಆದರೆ ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಸಿದ್ಧರಾಗಬೇಕಾಗುತ್ತದೆ. ವ್ಯಾಪಾರಿಗಳಿಗೆ ಹಿತಶತ್ರುಗಳ ಕಾಟ ಕಂಡುಬರಲಿದೆ. ತಾಳ್ಮೆಯಿರಲಿ.

ವೃಷಭ: ಹೃದಯದಿಂದ ಆಶಿಸಿ ಮಾಡುವ ಕೆಲಸಗಳು ಯಶಸ್ವಿಯಾಗಲಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ವಿದ್ಯಾರ್ಥಿಗಳಿಗೆ ನಾಯಕತ್ವ ವಹಿಸುವ ಅವಕಾಶ. ಕೋರ್ಟು ಕಚೇರಿ ಕೆಲಸಗಳಲ್ಲಿ ಮುನ್ನಡೆ.

ಮಿಥುನ: ಮಾನಸಿಕವಾಗಿ ಕೆಲವೊಂದು ವಿಚಾರಗಳು ನಿಮ್ಮ ಚಿಂತೆ ಹೆಚ್ಚಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ನಿಮಿತ್ತ ದೂರ ಪ್ರಯಾಣ ಮಾಡುವ ಅನಿವಾರ್ಯತೆ. ಸ್ವಯಂ ವೃತ್ತಿಯವರಿಗೆ ಲಾಭವಾಗಲಿದೆ. ಚಿಂತೆ ಬೇಡ.

ಕರ್ಕಟಕ: ದಾಂಪತ್ಯದಲ್ಲಿ ಸಾಮರಸ್ಯ ವೃದ್ಧಿಯಾಗಲಿದೆ. ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಮಕ್ಕಳ ವಿಚಾರದಲ್ಲಿ ಜವಾಬ್ಧಾರಿ ಹೆಚ್ಚಲಿದೆ.

ಸಿಂಹ: ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಕುಟುಂಬದವರ ಜೊತೆ ಚರ್ಚಿಸಿ ಮುನ್ನಡೆಯುವುದು ಉತ್ತಮ. ಇಷ್ಟಮಿತ್ರರೊಂದಿಗೆ ಕಾಲ ಕಳೆಯುವ ಅವಕಾಶ. ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನ ಸಾಧ‍್ಯತೆ.

ಕನ್ಯಾ: ವಾಹನ ಸಂಚಾರ ಮಾಡುವಾಗ ನಿಯಮ ಉಲ್ಲಂಘನೆ ಅಪವಾದ ಬಂದೀತು. ಎಚ್ಚರಿಕೆಯಿರಲಿ. ಕಚೇರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ ಸಿಗುವುದು.

ತುಲಾ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಆರ್ಥಿಕವಾಗಿ ಧನಾಗಮನವಿದ್ದರೂ ಖರ್ಚಿಗೆ ನಾನಾ ದಾರಿಗಳು ಕಂಡುಬರಲಿದೆ. ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆ ನೀಡಲಿದ್ದೀರಿ. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ.

ವೃಶ್ಚಿಕ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾಣದೇ ನಿರಾಸೆಯಾದೀತು. ಗುರುಹಿರಿಯರ ಸಲಹೆ ಪಾಲಿಸುವುದು ಉತ್ತಮ. ಮಕ್ಕಳ ಶ್ರೇಯಸ್ಸಿಗಾಗಿ ಕೆಲವು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಧನು: ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಗೆ ಒತ್ತು ನೀಡಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹ ಬಾಧೆಯಾದೀತು. ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ.

ಮಕರ: ಅವಿವಾಹಿತರಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯಗಳಾದೀತು. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ತಾಳ್ಮೆಯಿರಲಿ.

ಕುಂಭ: ವಿಶೇಷ ವ್ಯಕ್ತಿಗಳು ನಿಮ್ಮ ಜೀವನಕ್ಕೆ ಇಂದು ಮಹತ್ವದ ತಿರುವು ನೀಡಲಿದ್ದಾರೆ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ಧೀರಿ. ಸಾಮಾಜಿಕ ಕೆಲಸಗಳಿಂದ ನಿಮ್ಮ ಕೀರ್ತಿ ಹೆಚ್ಚಾಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಮೀನ: ಅನ್ಯರ ಮಾತಿಗೆ ಮರುಳಾಗಿ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ಆಸ್ತಿ ವಿಚಾರಗಳಲ್ಲಿ ಹಿರಿಯರ ಮಧ್ಯಸ್ಥಿಕೆ ಪಡೆದುಕೊಳ್ಳುವುದು ಉತ್ತಮ. ಸ್ವಂತ ಪರಿಶ್ರಮದ ಕೆಲಸಕ್ಕೆ ತಕ್ಕ ಫಲ ಪಡೆಯಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ