ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸೋಮವಾರ, 26 ಡಿಸೆಂಬರ್ 2022 (08:50 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಇನ್ನೊಬ್ಬರ ವಿಚಾರಗಳಿಗೆ ಮೂಗು ತೂರಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ.  ಪರರ ವಸ್ತುಗಳ ಬಗ್ಗೆ ಮೋಹ ಬೇಡ. ತಾಂತ್ರಿಕ ವೃತ್ತಿಯಲ್ಲಿರುವವರಿಗೆ ಮುನ್ನಡೆ. ಸರಕಾರೀ ಕೆಲಸಗಳಲ್ಲಿ ಜಯ ಸಿಗುವುದು.

ವೃಷಭ: ಪರರ ಸಂಪತ್ತಿನ ವ್ಯವಹಾರದಲ್ಲಿ ಎಚ್ಚರಿಕೆ. ಸ್ತ್ರೀಯರಿಂದ ಕೆಲಸಗಳಿಗೆ ಸಹಾಯ ಸಿಗಲಿದೆ. ಮಕ್ಕಳ ವಿದ್ಯಾಭ‍್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ಭೂಮ್ಯಾದಿ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿ.

ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆಗೆ ಸಿದ್ಧರಾಗಬೇಕಾಗುತ್ತದೆ. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರಲಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ ಸಿಗುವುದು. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ಕರ್ಕಟಕ: ಹಣಕಾಸಿನ ವಿಚಾರದಲ್ಲಿ ಕೊಂಚ ಎಚ್ಚರ ತಪ್ಪಿದರೂ ವಂಚನೆಗೊಳಗಾಗುವ ಸಾಧ‍್ಯತೆ. ಅಧ್ಯಯನಶೀಲರಿಗೆ ಉನ್ನತ ಅವಕಾಶಗಳು ಸಿಗಲಿವೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ತಾಳ್ಮೆಯಿರಲಿ.

ಸಿಂಹ: ಮನಸ್ಸಿನಲ್ಲಿರುವ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟ ಭೋಜನ ಮಾಡುವ ಯೋಗ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕಿದರೆ ಉತ್ತಮ.

ಕನ್ಯಾ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರಲಿದೆ. ಮನಸ್ಸಿಗೆ ಸಂತೋಷ ಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಪಾಲುದಾರಿಕೆ ವ್ಯವಹಾರದಲ್ಲಿ ನಂಬಿಕೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಿ.

ತುಲಾ: ಹೊಸದಾಗಿ ಪರಿಚಯವಾದ ವ್ಯಕ್ತಿಗಳಿಂದ ನಿಮ್ಮ ಭವಿಷ್ಯಕ್ಕೆ ಅನುಕೂಲವಾಗಲಿದೆ. ಬಾಡಿಗೆ ಮನೆಯಲ್ಲಿರುವವರಿಗೆ ಮಾಲಿಕರಿಂದ ಕಿರಿ ಕಿರಿ ಉಂಟಾದೀತು. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ಹಿಂದೆ ಮಾಡಿದ ಒಳ್ಳೆಯ ಕೆಲಸಗಳ ಫಲ ಅನುಭವಿಸಲಿದ್ದೀರಿ. ಹಿರಿಯರ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಧಾರ್ಮಿಕ ಕಾರ್ಯಗಳಿಗೆ ನೇತೃತ್ವ ವಹಿಸಲಿದ್ದೀರಿ. ಅನಗತ್ಯ ಚಿಂತೆ ಬೇಡ.

ಧನು: ನಿಮ್ಮಿಂದ ಹಿಂದೆ ಸಹಾಯ ಪಡೆದವರಿಂದ ಪ್ರತ್ಯುಪಕಾರ ಲಭಿಸಲಿದೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಮುನ್ನಡೆ.

ಮಕರ: ಕೌಟುಂಬಿಕವಾಗಿ ಸುಖ, ಸಮೃದ್ಧಿಯಿರಲಿದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ತೋರಿಬಂದೀತು. ವ್ಯಾವಹಾರಿಕವಾಗಿ ಮುನ್ನಡೆಯಿದ್ದರೂ ಹಿತಶತ್ರುಗಳ ಕಾಟ ಕಂಡುಬರಲಿದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡುವಿರಿ.

ಕುಂಭ: ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷಗಳಾಗದಂತೆ ಎಚ್ಚರಿಕೆ ವಹಿಸಿ. ಕಾರ್ಯರಂಗದಲ್ಲಿ ನಿಮ್ಮ ಅನುಕೂಲಕ್ಕಾಗಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆಯಿರಲಿದೆ.

ಮೀನ: ಸರಕಾರೀ ನೌಕರರಿಗೆ ಕಾರ್ಯದೊತ್ತಡ ಕಂಡುಬಂದೀತು. ಮಹಿಳೆಯರಿಗೆ ಉನ್ನತ ಸ್ಥಾನ ಮಾನದ ನಿರೀಕ್ಷೆ. ಕೈಗೊಂಡ ಕೆಲಸಗಳಿಗೆ ತೊಡಕುಂಟಾದರೂ ಅಂತಿಮ ಜಯ ನಿಮ್ಮದಾಗಲಿದೆ. ಅನಗತ್ಯ ಚಿಂತೆ ಬೇಡ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ