ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 7 ಫೆಬ್ರವರಿ 2023 (08:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳು ಎದುರಾದೀತು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟ ಮಿತ್ರರನ್ನು ಭೇಟಿಯಾಗುವ ಯೋಗ. ನೆರೆಹೊರೆಯವರ ಕಷ್ಟಕ್ಕೆ ನೆರವಾಗಲಿದ್ದೀರಿ.

ವೃಷಭ: ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆಯ ಯೋಗ. ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಸ್ಥಿತಿ ಗತಿ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ.

ಮಿಥುನ: ವ್ಯಾಪಾರೀ ವರ್ಗದವರಿಗೆ ಉನ್ನತಿಯ ಯೋಗ. ಕಾರ್ಯರಂಗದಲ್ಲಿ ಹಲವು ಆಯ್ಕೆಗಳು ಬರಲಿದ್ದು, ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಕರ್ಕಟಕ: ಅನುಭವವೇ ನಿಮಗೆ ಪಾಠ ಕಲಿಸಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಕೈಗಾರಿಕೋದ್ಯಮಿಗಳಿಗೆ ಲಾಭವಾದೀತು. ಅನಗತ್ಯ ಚಿಂತೆ ಬೇಡ.

ಸಿಂಹ: ವಿರೋಧಿಗಳಿಂದ ನಿಮ್ಮ ಶಾಂತಿ, ಸಮಾಧಾನಕ್ಕೆ ಧಕ್ಕೆಯಾಗಲಿದೆ. ವಿರೋಧಿಗಳ ಮುಂದೆ ಹತಾಶೆ ತೋರಿಸಿಕೊಳ್ಳಬೇಡಿ. ಹೊಸದಾಗಿ ಪರಿಚಿತರಾಗಿರುವವರಿಂದ ನಿಮಗೆ ಅನುಕೂಲವಾದೀತು. ತಾಳ್ಮೆಯಿರಲಿ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಅನಗತ್ಯ ಸಂಘರ್ಷಕ್ಕೆ ಎಡೆಮಾಡಿಕೊಡಬೇಡಿ. ಇನ್ನೊಬ್ಬರಿಗೆ ಉಪಕಾರ ಮಾಡುವಾಗ ಪೂರ್ವಾಪರ ತಿಳಿದು ಮುನ್ನಡೆಯಿರಿ. ಕುಲದೇವರ ಪ್ರಾರ್ಥನೆಯಿಂದ ನೆಮ್ಮದಿ ಸಿಗಲಿದೆ.

ತುಲಾ: ಹಿರಿಯರಿಗೆ ಧಾರ್ಮಿಕ ಸ್ಥಳಗಳ ಸಂದರ್ಶನ ಯೋಗ. ನಿಮ್ಮ ಬಹುದಿನಗಳ ಆಸೆ ಸದ್ಯದಲ್ಲೇ ಕೂಡಿಬರಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಕೂಡಿಟ್ಟ ಹಣ ಅಗತ್ಯಕ್ಕೆ ಖರ್ಚಾಗಿ ಹೋದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ನಿಮಗೆ ಆಗಿಬರಲ್ಲ ಎಂದುಕೊಂಡವರಿಂದಲೇ ಇಂದು ನಿಮ್ಮ ಕೆಲಸಕ್ಕೆ ಸಹಾಯವಾದೀತು. ಗುರುಹಿರಿಯರಿಂದ ಉಪಯುಕ್ತ ಸಲಹೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣವಿರಲಿದೆ. ಚಿಂತೆ ಬೇಡ.

ಧನು: ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಕಂಡುಬರಲಿದೆ. ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಸಲಹೆ ಪಾಲಿಸಬೇಕಾಗುತ್ತದೆ. ವ್ಯವಹಾರದಲ್ಲಿ ಚುರುಕುತನವಿದ್ದರೆ ನಿಮಗೆ ಅನುಕೂಲವಾದೀತು.

ಮಕರ: ಸರಕಾರಿ ಉದ್ಯೋಗಿಗಳಿಗೆ ಬಡ್ತಿ ಅವಕಾಶಕ್ಕೆ ಮೇಲಧಿಕಾರಿಗಳಿಂದಲೇ ಅಡ್ಡಿ ಉಂಟಾದೀತು. ಮನಸ್ಸಿನ ಹತಾಶೆಯನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ.

ಕುಂಭ: ನಿಮ್ಮ ಮೆಚ್ಚಿನ ವ್ಯಕ್ತಿಗಳನ್ನು ಭೇಟಿಯಾದ ಸಂತೋಷ ನಿಮಗೆ ಸಿಗಲಿದೆ. ಕೌಟುಂಬಿಕವಾಗಿ ಪರಸ್ಪರ ಸಹಕಾರ, ಸಂತೋಷವಿರಲಿದೆ. ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನ ಸಾಧ್ಯತೆ. ದಿನದಂತ್ಯಕ್ಕೆ ನೆಮ್ಮದಿ.

ಮೀನ: ಕುಟುಂಬ ಸದಸ್ಯರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ರಾಜಕೀಯ ರಂಗದಲ್ಲಿರುವವರಿಗೆ ಉನ್ನತಿಯ ಯೋಗ. ದಾಂಪತ್ಯದಲ್ಲಿ ಅನುರಾಗ ವೃದ‍್ಧಿಯಾಗಲಿದೆ. ಮಕ್ಕಳ ಭವಿಷ್ಯಕ್ಕಾಗಿ ಕೆಲವೊಂದು ಮಹತ್ವದ ತೀರ್ಮಾನ ಕೈಗೊಳ‍್ಳಲಿದ್ದೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ