ಮೇಷ: ದೈವಾನುಗ್ರಹದಿಂದ ಮನೆಯಲ್ಲಿ ಸಂತೋಷ, ಸಮೃದ್ಧಿಯಿರಲಿದೆ. ಆದರೆ ಹಣಕಾಸಿನ ವಿಚಾರದಲ್ಲಿ ಅಪರಿಚಿತರನ್ನು ನಂಬಿ ಮೋಸ ಹೋಗಬೇಡಿ. ಭವಿಷ್ಯದ ಬಗ್ಗೆ ಯೋಜನೆ ರೂಪಿಸಬೇಕಾಗುತ್ತದೆ. ತಾಳ್ಮೆಯಿರಲಿ.
ವೃಷಭ: ನಿಮ್ಮ ಆಪ್ತರ ಬಗ್ಗೆ ಬೇರೆಯವರು ಚಾಡಿ ಮಾತು ಹೇಳಿಯಾರು. ಮನಸ್ಸಿನ ಮಾತು ಕೇಳಿ ಮುಂದುವರಿಯಿರಿ. ಹಿರಿಯರ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭ.
ಮಿಥುನ: ಹೊಸ ಉದ್ಯೋಗಕ್ಕೆ ಸೇರಿಕೊಂಡಿದ್ದರೆ ಸವಾಲುಗಳು ಎದುರಾದೀತು. ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಇಷ್ಟ ಭೋಜನ ಮಾಡುವ ಯೋಗವಿದೆ.
ಕರ್ಕಟಕ: ಮನಸ್ಸು ಬಯಸಿದ್ದೇ ಆಗುವ ಸುದಿನ ಇಂದು. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಹಣಕಾಸಿನ ಸಮಸ್ಯೆಗಳು ತೀರಲಿವೆ. ವ್ಯಾಪಾರಿಗಳು ನಯ ವಂಚಕರಿಂದ ದೂರವಿರುವುದು ಉತ್ತಮ.
ಸಿಂಹ: ಮನಸ್ಸಿನಲ್ಲಿರುವ ಕಾರ್ಯ ನೆರವೇರಿಸಲು ಕೆಲವು ಅಡೆತಡೆಗಳು ಬಂದೀತು. ಹಿರಿಯರ ಅಭಿಪ್ರಾಯ ಆಲಿಸುವುದು ಉತ್ತಮ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಕಂಡುಬಂದೀತು. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೀರಿ.
ಕನ್ಯಾ: ನಿಮ್ಮ ಸಂಸಾರದಲ್ಲಿ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ. ಕಾರ್ಯರಂಗದಲ್ಲಿ ನಿಮ್ಮ ಏಳಿಗೆ ಇತರರೂ ಅಸೂಯೆ ಪಡುವಂತಿರಲಿದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ದೂರವಾಗಲಿದೆ.
ತುಲಾ: ಮನೆಯಲ್ಲಿ ಶುಭ ಮಂಗಲ ಕಾರ್ಯನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಮನಸ್ಸಿನಲ್ಲದಿದ್ದರೂ ಕೆಲವೊಂದು ಕೆಲಸಗಳನ್ನು ಇತರರಿಗಾಗಿ ಮಾಡಬೇಕಾಗುತ್ತದೆ. ಬಂಧು ಮಿತ್ರರನ್ನು ಭೇಟಿ ಮಾಡಲಿದ್ದೀರಿ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಗುರುಹಿರಿಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ಕಂಡುಬರುವುದು. ದಾಂಪತ್ಯದಲ್ಲಿ ತೃಪ್ತಿದಾಯಕ ವಾತಾವರಣ. ಮಕ್ಕಳಿಂದ ಸಂತೋಷ ಸಿಗುವುದು.
ಧನು: ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ನೂತನ ದಂಪತಿಗಳಿಗೆ ಹೊಂದಾಣಿಗೆ ಕಷ್ಟವಾಗಬಹುದು. ತಾಳ್ಮೆ, ಸಂಯಮ ಅಗತ್ಯ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.
ಮಕರ: ಮಾತಿನಲ್ಲಿ ಇತರರನ್ನು ಮೋಡಿ ಮಾಡಲಿದ್ದೀರಿ. ವಿಶೇಷವಾದ ವ್ಯಕ್ತಿಗಳಿಂದ ನಿಮ್ಮ ಜೀವನಕ್ಕೆ ತಿರುವು ಸಿಗುವುದು. ಹಣಕಾಸಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಕುಂಭ: ಉದ್ಯೋಗ, ವ್ಯವಹಾರದಲ್ಲಿ ಹೆಚ್ಚಿನ ಜವಾಬ್ಧಾರಿ ನಿಮ್ಮದಾಗಲಿದೆ. ಕುಟುಂಬ ಸದಸ್ಯರ ಗೌರವಾದರಗಳಿಗೆ ಪಾತ್ರರಾಗಲಿದ್ದೀರಿ. ದೈಹಿಕವಾಗಿ ಶ್ರಮವಿದ್ದರೂ ಅಂದುಕೊಂಡ ಕೆಲಸ ಮಾಡಿದ ತೃಪ್ತಿ ನಿಮ್ಮದಾಗಲಿದೆ.
ಮೀನ: ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಕಂಡುಬರಲಿದೆ.