ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 12 ಮಾರ್ಚ್ 2023 (08:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಸಂತೋಷದಿಂದ ಕಳೆಯುವುದು ನಿಮ್ಮ ಕೈಯಲ್ಲೇ ಇದೆ. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ತಾಳ್ಮೆಯಿರಲಿ.

ವೃಷಭ: ಗೃಹ ಸಂಬಂಧೀ ಕೆಲಸಗಳಿಗಾಗಿ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ಸಂಗಾತಿಯ ಸಮಯೋಚಿತ ಸಲಹೆಗಳು ಉಪಯೋಗಕ್ಕೆ ಬರಲಿವೆ. ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ.

ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಬಹುದಿನಗಳ ನಂತರ ಬಂಧು ಮಿತ್ರರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಲಿದ್ದಾರೆ. ದಿನದಂತ್ಯಕ್ಕೆ ನೆಮ್ಮದಿ.

ಕರ್ಕಟಕ: ಉದ್ಯೋಗಕ್ಕೆ ಸಂಬಂಧಪಟ್ಟಂತೆ ಕೆಲವು ಆತಂಕಕಾರೀ ವಿಚಾರಗಳು ಕೇಳಿಬರಲಿದೆ. ಸಂಗಾತಿಯ ಸಾಂತ್ವನ ಮನಸ್ಸಿಗೆ ಸಮಾಧಾನ ನೀಡೀತು. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗವಿದೆ.

ಸಿಂಹ: ನಾನಾ ರೀತಿಯ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲಿದ್ದೀರಿ. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಗುರುಹಿರಿಯರ ಆಶೀರ್ವಾದ ಸಿಗಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ಕನ್ಯಾ: ಸಂದರ್ಭಕ್ಕೆ ಸರಿಯಾಗಿ ಯೋಜನೆ ಹಾಕಿಕೊಳ್ಳುವುದರಿಂದ ಸಮಸ್ಯೆಯಾಗದು. ಮಕ್ಕಳ ಸಂತೋಷದಲ್ಲಿ ಭಾಗಿಯಾಗಲಿದ್ದೀರಿ. ಪ್ರೇಮಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಯಾವುದೋ ಕೆಲಸಕ್ಕೆ ಕೈ ಹಾಕಲು ಹೋಗಿ ಇನ್ನೊಂದು ಮುಖ್ಯ ವಿಚಾರವನ್ನು ಮರೆತು ಕಿರಿ ಕಿರಿ ಅನುಭವಿಸುವ ಸಂದರ್ಭ ಎದುರಾದೀತು. ಸಾಂಸಾರಿಕವಾಗಿ ಸುಖ, ಸಮೃದ್ಧಿ ಕಂಡುಬರಲಿದೆ. ಚಿಂತೆ ಬೇಡ.

ವೃಶ್ಚಿಕ: ನಿಮ್ಮ ಕೆಲಸ ಕಾರ್ಯಗಳಲ್ಲಿ ಕುಟುಂಬ ಸದಸ್ಯರ ಸಾಥ್ ಸಿಗಲಿದೆ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡಲಿದ್ದೀರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಆರೋಗ್ಯ ಸಮಸ್ಯೆಯಾದೀತು.

ಧನು: ಸರಕಾರೀ ಉದ್ಯೋಗಿಗಳು ಬಿಡುವಿನ ದಿನದ ಖುಷಿ ಅನುಭವಿಸಲಿದ್ದೀರಿ. ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಂಡುಬಂದೀತು. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ.

ಮಕರ: ವಿದೇಶೀ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರಲಿದೆ. ಆತ್ಮೀಯರೊಂದಿಗೆ ಅಮೂಲ್ಯ ಸಮಯ ಕಳೆಯಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಗೃಹಿಣಿಯರಿಗೆ ಕೆಲಸದೊತ್ತಡ ಕಂಡುಬಂದೀತು.

ಕುಂಭ: ಅರ್ಧಕ್ಕೇ ನಿಂತಿದ್ದ ಕೆಲಸಗಳಿಗೆ ಮರು ಚಾಲನೆ ನೀಡಲಿದ್ದೀರಿ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಬೇಕಾಗುತ್ತದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿಂದಿರಿ.

ಮೀನ: ಹೊಸ ವ್ಯವಹಾರಕ್ಕೆ ಕೈ ಹಾಕಲು ಆತುರ ಬೇಡ. ದೂರದ ವ್ಯವಹಾರಗಳಿಂದ ಧನಾದಾಯ ಹೆಚ್ಚಲಿದೆ. ದೇವತಾ ಸ್ಥಳ ಸಂದರ್ಶನ ನಡೆಸಲಿದ್ದೀರಿ. ಮನರಂಜನಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದಿನದಂತ್ಯಕ್ಕೆ ನೆಮ್ಮದಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ