ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 21 ಮಾರ್ಚ್ 2023 (08:10 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಉದ್ಯೋಗ ಸಂಬಂಧವಾಗಿ ಮೇಲಧಿಕಾರಿಗಳಿಂದ ಕಿರಿ ಕಿರಿ ಕಂಡುಬರಲಿದೆ. ಸ್ವಯಂ ವೃತ್ತಿಯವರು ಹೊಸ ಸಾಹಸಕ್ಕೆ ಕೈ ಹಾಕಲಿದ್ದಾರೆ. ಧನಾಗಮನವಿದ್ದರೂ ಅಷ್ಟೇ ಖರ್ಚೂ ಇರಲಿದೆ. ಸ್ಪಷ್ಟ ನಿರ್ಧಾರದಿಂದ ನಿರೀಕ್ಷಿತ ಲಾಭ ಸಾಧ್ಯ.

ವೃಷಭ: ಕಾರ್ಯಕ್ಷೇತ್ರದಲ್ಲಿ ಅಧಿಕ ಪರಿಶ್ರಮದಿಂದ ಸಫಲತೆ ಸಾಧ‍್ಯ. ಸಾರ್ವಜನಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣವಿರಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಬಂಧು ಮಿತ್ರರೊಂದಿಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಮನಸ್ಸಿಗೆ ಉಲ್ಲಾಸ ಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ತಾಳ್ಮೆಯಿರಲಿ.

ಕರ್ಕಟಕ: ಉದ್ಯೋಗ, ವ್ಯವಹಾರದಲ್ಲಿ ಗೌರವ, ಸ್ಥಾನಮಾನಾದಿಗಳು ಹೆಚ್ಚಾಗಲಿವೆ. ಹಣಕಾಸಿನ ವಿಚಾರದಲ್ಲಿ ಅನ್ಯರು ಮೂಗು ತೂರಿಸಲು ಅವಕಾಶ ನೀಡಬೇಡಿ. ಸರಕಾರಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ.

ಸಿಂಹ: ವಿದೇಶೀ ಮೂಲಗಳಿಂದ ಧನಲಾಭವಾಗಲಿದೆ. ಸಹೋದರಾದಿ ಸಂಬಂಧಿಗಳೊಂದಿಗೆ ವೈಮನಸ್ಯಗಳು ಮರೆಯಾಗಲಿವೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಕನ್ಯಾ: ಪರಿಶ್ರಮಕ್ಕೆ ತಕ್ಕ ಫಲ ಸಿಗುವುದರಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ. ದೇಹಾರೋಗ್ಯದ ವಿಚಾರದಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ತುಲಾ: ಕಾರ್ಯರಂಗದಲ್ಲಿ ಉನ್ನತ ಸ್ಥಾನಮಾನಕ್ಕಾಗಿ ನಿಮ್ಮ ಪ್ರಯತ್ನ ಮುಂದುವರಿಯಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ.

ವೃಶ್ಚಿಕ: ಜವಾಬ್ಧಾರಿಯುತ ಕೆಲಸಗಳಿಂದ ಮೇಲಧಿಕಾರಿಗಳ ಪ್ರಶಂಸೆಗೊಳಗಾಗಲಿದ್ದೀರಿ. ಪಾಲುದಾರಿಕಾ ಕ್ಷೇತ್ರದಲ್ಲಿ ಲಾಭ ಕಂಡುಬರಲಿದೆ. ಗುರುಹಿರಿಯರ ಸಂದರ್ಭೋಚಿತ ಸಲಹೆಗಳು ಉಪಯೋಗಕ್ಕೆ ಬರಲಿವೆ.

ಧನು: ಬಂಧು ಮಿತ್ರರ ಸಹಕಾರ ಕಂಡುಬರಲಿದೆ. ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಕೂಡಿಬರಲಿದೆ. ಆಸ್ತಿ ವಾಹನಾದಿ ವಿಚಾರದಲ್ಲಿ ಲಾಭವಾಗಲಿದೆ. ಕೌಟುಂಬಿಕವಾಗಿ ಸುಖ ಸಮೃದ್ಧಿ ಕಂಡುಬರಲಿದೆ. ಅನಗತ್ಯ ಚಿಂತೆ ಬೇಡ.

ಮಕರ: ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ. ಸರಕಾರೀ ಕೆಲಸಗಳಿಗಾಗಿ ಓಡಾಟ ನಡೆಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಕೆಲವೊಂದು ಗೊಂದಲ ಕಾಡುವ ನಿರೀಕ್ಷೆಯಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ಮನಸ್ಸಿನಲ್ಲಿ ಅಂದುಕೊಂಡ ಕೆಲಸ ಕಾರ್ಯ ನೆರವೇರಿಸಲು ಕೆಲವೊಂದು ಅಡೆತಡೆಗಳು ಬಂದೀತು. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಸರಕಾರೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ದಿನದಂತ್ಯಕ್ಕೆ ನೆಮ್ಮದಿ.

ಮೀನ: ಕ್ರಿಯಾತ್ಮಕ ಕೆಲಸಗಳಿಂದ ಇತರರ ಗಮನ ಸೆಳೆಯಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗ. ಅತಿ ಉದಾರತೆಯಿಂದ ತೊಂದರೆ ಎದುರಾದೀತು. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ