ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 2 ಮೇ 2023 (06:30 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮ್ಮ ಉದ್ದೇಶಿತ ಕೆಲಸಗಳಲ್ಲಿ ಕೆಲವು ಬದಲಾವಣೆಗಳಾಗಲಿವೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಉದ್ಯೋಗ, ವ್ಯವಹಾರದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟು ಅಗತ್ಯ.

ವೃಷಭ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದೀರ್ಘ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಗುರುಹಿರಿಯರ ಸೂಕ್ತ ಸಲಹೆಗಳನ್ನು ಪಾಲಿಸುವುದು ಉತ್ತಮ. ವಿದೇಶೀ ಮೂಲದಿಂದ ಧನಾಗನ ಸಾಧ್ಯತೆ.

ಮಿಥುನ: ಕಾರ್ಯರಂಗದಲ್ಲಿ ಬಿಡುವಿಲ್ಲದ ಕೆಲಸಗಳಿಂದ ದೇಹಾಯಾಸವಾದೀತು. ಕೌಟುಂಬಿಕವಾಗಿ ನೆಮ್ಮದಿ ಕಂಡುಬರುವುದು. ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸಲಿದ್ದೀರಿ. ಕುಲದೇವರ ಪ್ರಾರ್ಥನೆ ಮಾಡಿ.

ಕರ್ಕಟಕ: ರಾಜಕೀಯ ರಂಗದಲ್ಲಿರುವವಿರಗೆ ಅಪವಾದದ ಭೀತಿ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಸಂಭವ. ವಾಹನಾದಿ ಸೌಕರ್ಯಗಳು ಸದ್ಯದಲ್ಲೇ ನಿಮ್ಮದಾಗುವುದು. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ಸಿಂಹ: ನೀವು ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲು ಕೆಲವು ಅಡೆತಡೆಗಳು ಬಂದೀತು. ಅವಿವಾಹಿತರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿದೆ. ಅನ್ಯರ ಸಹಾಯ ಪಡೆಯಬೇಕಾದೀತು. ತಾಳ್ಮೆಯಿರಲಿ.

ಕನ್ಯಾ: ಉದ್ಯೋಗ ಸಂಬಂಧವಾದ ಸಮಸ್ಯೆಗಳ ಪರಿಹಾರಕ್ಕೆ ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ಕೃಷಿಕರಿಗೆ ಬೆಳೆ ನಷ್ಟ ಭೀತಿ ಎದುರಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಮುನ್ನಡೆ ಕಂಡುಬಂದೀತು. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಸರಕಾರೀ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿ ಕಿರಿ ಕಂಡುಬಂದೀತು. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಯಿರಲಿ. ಇಷ್ಟ ಭೋಜನ ಮಾಡುವ ಯೋಗವಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಕಟ್ಟಡ ಕಾಮಗಾರಿ ಕೆಲಸಕ್ಕೆ ಕೈ ಹಾಕಿದ್ದರೆ ಅಡೆತಡೆಗಳು ಬಂದೀತು. ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟ ಭೀತಿ. ವ್ಯಾಪಾರೀ ವರ್ಗದವರು ಕ್ರಿಯಾತ್ಮಕವಾಗಿ ಯೋಚಿಸಲಿದ್ದೀರಿ. ಸ್ನೇಹಿತರ ಸಲಹೆ ಪಡೆಯಲಿದ್ದೀರಿ.

ಧನು: ಮಕ್ಕಳ ಜೀವನದಲ್ಲಿ ಪ್ರಗತಿ ಕಂಡುಬರಲಿದೆ. ಆತ್ಮೀಯರನ್ನು ಬಹಳ ದಿನಗಳ ನಂತರ ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಹಿರಿಯರಿಗೆ ಪೂಜಾ ಕೈಂಕರ್ಯಗಳಿಂದ ನೆಮ್ಮದಿ. ಕಿರು ಓಡಾಟ ನಡೆಸಬೇಕಾಗುತ್ತದೆ.

ಮಕರ: ಕೋರ್ಟು ಕಚೇರಿ ವ್ಯವಹಾರಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಸರಕಾರೀ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ಕೌಟುಂಬಿಕವಾಗಿ ಪರಸ್ಪರ ಸಹಕಾರ ಕಂಡುಬರಲಿದೆ. ದಾಂಪತ್ಯದಲ್ಲಿ ಮಧ್ಯಮ ಸುಖ. ಚಿಂತೆ ಬೇಡ.

ಕುಂಭ: ನೀವು ಕೈಗೆತ್ತಿಕೊಳ್ಳುವ ಕೆಲಸಗಳಲ್ಲಿ ಅಡೆತಡೆಗಳಿದ್ದರೂ ಆಪ್ತರ ಸಹಾಯ ಸಿಗುವುದು. ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಲಿದ್ದೀರಿ. ಇಷ್ಟ ಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಯೋಗ. ಸಂಚಾರದಲ್ಲಿ ಎಚ್ಚರಿಕೆಯಿರಲಿ.

ಮೀನ: ದೈನಂದಿನ ಅಗತ್ಯದ ವಸ್ತು ಕಳೆದುಕೊಂಡು ಪೀಕಲಾಟ ಅನುಭವಿಸುವ ಪರಿಸ್ಥಿತಿ ಎದುರಾದೀತು. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ